ಬೆಂಗಳೂರು: ಪರಿಶಿಷ್ಟ ಜಾತಿಯ ಸಮಗ್ರ ಸಮೀಕ್ಷೆ ಕಾರ್ಯವನ್ನು ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಸಚಿವ ಕೆ.ಹೆಚ್.ಮುನಿಯಪ್ಪ (KH Muniyappa) ಅವರು ಪರಿಶೀಲಿಸಿದರು.ಇದನ್ನೂ ಓದಿ: ಕರ್ನಾಟಕ ಮಳೆ | ಮೇ 30, 31 ರಂದು DC , CEO ಸಭೆ ಕರೆದ ಸಿಎಂ
ಇಂದು ಬೆಂಗಳೂರು (Bengaluru) ನಗರದ ಗೆದ್ದಲಹಳ್ಳಿ, ಸಂಜಯನಗರ ಸೇರಿದಂತೆ ಇತರೆ ಸ್ಥಳಗಳಲ್ಲಿ ಮನೆಗಳಿಗೆ ಭೇಟಿ ನೀಡಿ, ಪರಿಶಿಷ್ಟ ಜಾತಿಯ ಸಮಗ್ರ ಸಮೀಕ್ಷೆಯ ಕಾರ್ಯವಿಧಾನಗಳನ್ನು ಪರಿಶೀಲನೆ ನಡೆಸಿದರು.
ಈ ವೇಳೆ ನಾಗರಿಕರೊಂದಿಗೆ ಮಾತನಾಡಿದ ಸಚಿವರು, ಪರಿಶಿಷ್ಟ ಜಾತಿಯ ಸಮಗ್ರ ಸಮೀಕ್ಷೆಯ ಸಂದರ್ಭದಲ್ಲಿ, ತಮ್ಮ ಮೂಲ ಜಾತಿಯನ್ನು ನೋಂದಣಿ ಮಾಡಲು ತಿಳಿಸಿದರು.ಇದನ್ನೂ ಓದಿ: BMTCಯಿಂದ `ದಿವ್ಯ ದರ್ಶನ’ ವೀಕೆಂಡ್ ಟೂರ್ ಪ್ಯಾಕೇಜ್ – 8 ಪ್ರಸಿದ್ಧ ದೇವಾಲಯಗಳ ದರ್ಶನಕ್ಕೆ ಅವಕಾಶ