ಬೆಂಗಳೂರು: ಹೈಕಮಾಂಡ್‌ನಲ್ಲಿ ಆಗಿರುವ ತೀರ್ಮಾನದ ವಿಚಾರ ಅವರಿಬ್ಬರಿಗೆ ಗೊತ್ತು ಎಂದು ಸಿಎಂ ಮತ್ತು ಡಿಸಿಎಂ ಕುರಿತು ಸಚಿವ ಕೆ.ಹೆಚ್.ಮುನಿಯಪ್ಪ (K.H.Muniyappa) ಹೇಳಿದರು.
ಅಧಿಕಾರ ಹಂಚಿಕೆ ಕುರಿತು ‘ಪಬ್ಲಿಕ್ ಟಿವಿ’ ಜೊತೆ ಮಾತನಾಡಿದ ಅವರು, ಹೈಕಮಾಂಡ್ ಕಾಲಕಾಲಕ್ಕೆ ತೆಗೆದುಕೊಳ್ಳುವ ನಿರ್ಧಾರಕ್ಕೆ ನಾವು ಬದ್ಧ. ಹೈಕಮಾಂಡ್‌ನಲ್ಲಿ ಆಗಿರುವ ತೀರ್ಮಾನದ ವಿಚಾರ ಅವರಿಬ್ಬರಿಗೆ ಗೊತ್ತು. ಎಲ್ಲವನ್ನ ಕೇಳಬೇಕಿರೋದು, ಮುಖ್ಯಮಂತ್ರಿಗಳು, ಅಧ್ಯಕ್ಷರನ್ನ ಮಾತ್ರ. ಬೇರೆ ಯಾರನ್ನೂ ಕೇಳಬೇಡಿ ಎಂದರು. ಇದನ್ನೂ ಓದಿ: ಅಧಿಕಾರ ಹಂಚಿಕೆ ಒಪ್ಪಂದ ನಡೆದಿದೆ, ಡಿಕೆಶಿ ಹೇಳಿದ್ದು ಸರಿ: ಮುನಿಯಪ್ಪ
ನಾನು ಹೇಳಿದ್ದಕ್ಕೆ ವಿರುದ್ಧವಾಗಿ ಬರೆಯಲಾಗಿದೆ. ಅಧ್ಯಕ್ಷರು ಬಂಡೆ ಇದ್ದ ಹಾಗೇ ಕಡೆಯವರೆಗೂ ನಿಮ್ಮ ಜೊತೆ ಇರ್ತೀವಿ ಅಂತ ಹೇಳಿದ್ರು. ಅದು ಸರಿ ಅಂತ ನಾನು ಹೇಳಿದ್ದೆ. ಆದರೆ, ಅದಕ್ಕೆ ವಿರುದ್ಧವಾಗಿ ಬರೆಯಲಾಗಿದೆ. ಈಗ ಅದರ ಬಗ್ಗೆ ಮತ್ತೆ ಮಾತನಾಡುವುದು ಬೇಡ. ಹೈಕಮಾಂಡ್ ತೀರ್ಮಾನದಂತೆ ಹೋಗೋಣ ಎಂದು ಸ್ಪಷ್ಟಪಡಿಸಿದರು.
ಹೈಕಮಾಂಡ್ ಏನ್ ಮಾಡಿದ್ರು ಬದ್ಧವಾಗಿರುತ್ತೇವೆ. ನಾವು ಹೈಕಾಮಾಂಡ್ ಜೊತೆ ಡಿಸಿಪ್ಲೀನ್ ಕಮಿಟಿಯಲ್ಲಿದ್ದವನು. ಕೇಂದ್ರದಲ್ಲಿ 30 ವರ್ಷ ಕೆಲಸ ಮಾಡಿದವನು. ನಾನು ಡಿಸಿಪ್ಲೀನ್ ಸೋಲ್ಜರ್ ಆಗಿ ಕೆಲಸ ಮಾಡಿದ್ದೀನಿ ಎಂದು ತಿಳಿಸಿದರು. ಇದನ್ನೂ ಓದಿ: ಬಾಣಂತಿಯರ ಸಾವಿನಲ್ಲಿ ಕರ್ನಾಟಕ ನಂ.1 ಆಗಿದೆ – ಆರ್. ಅಶೋಕ್