ಬೆಂಗಳೂರು: ಮಹಾಲಕ್ಷ್ಮಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ವಾರ್ಡ್ 67 ರ ನಾಗಪುರದ ಸ್ವಾತಿ ಹೋಟೆಲ್ ಬಳಿ ಕೈ ಗೊಂಡಿರುವ ರಸ್ತೆ ಡಾಂಬರೀಕರಣ ಕಾಮಗಾರಿಯನ್ನು ಸ್ಥಳೀಯ ಶಾಸಕರಾದ ಅಬಕಾರಿ ಸಚಿವ ಕೆ.ಗೋಪಾಲಯ್ಯ ಇಂದು ವೀಕ್ಷಿಸಿದರು.
ಇದೇ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಜನರ ತೆರಿಗೆ ಹಣದಲ್ಲಿ ನಡೆಯುತ್ತಿರುವ ಸರ್ಕಾರದ ಎಲ್ಲ ಅಭಿವೃದ್ಧಿ ಕಾಮಗಾರಿಗಳು ಉತ್ತಮ ಗುಣಮಟ್ಟದಿಂದ ಕೂಡಿರಬೇಕು. ಗುತ್ತಿಗೆದಾರರು, ಇಂಜಿನಿಯರ್ ಈ ಬಗ್ಗೆ ಹೆಚ್ಚು ಮುತುವರ್ಜಿ ವಹಿಸಬೇಕೆಂದು ಸೂಚಿಸಿದರು. ಇದನ್ನೂ ಓದಿ: ಮಹಿಳೆಗೆ ಗುಂಡಿಕ್ಕಿ ಕೊಲೆ ಮಾಡಿದ್ದ ಬಿಜೆಪಿ ಪುರಸಭೆ ಸದಸ್ಯ ಅರೆಸ್ಟ್
Advertisement
Advertisement
ಸ್ಥಳೀಯರು ಕೂಡ ತಮ್ಮ ಬಡಾವಣೆಗಳಲ್ಲಿ ನಡೆಯುತ್ತಿರುವ ಸಾರ್ವಜನಿಕ ಕಾಮಗಾರಿಗಳು ಎಷ್ಟರ ಮಟ್ಟಿಗೆ ಗುಣಮಟ್ಟದಿಂದ ಕೂಡಿರುತ್ತವೆ ಎನ್ನುವುದರ ಮೇಲೆ ನಿಗಾ ಇರಿಸಬೇಕು. ಇದಕ್ಕೂ ನಮಗೂ ಯಾವುದೇ ಸಂಬಂಧವಿಲ್ಲ. ಗುತ್ತಿಗೆದಾರರು, ಇಂಜಿನಿಯರ್‌ಗಳು ಕಾಮಗಾರಿ ಮಾಡಿಕೊಂಡು ಹೋಗುತ್ತಾರೆ ಎಂದು ಕೈ ಕಟ್ಟಿಕೊಂಡು ನೋಡುತ್ತಾ ನಿಂತುಕೊಳ್ಳದೇ, ತಮ್ಮ ಬಡಾವಣೆಯ ಅಭಿವೃದ್ಧಿ ಕಾಮಗಾರಿ ತನ್ನ ಮನೆಯದ್ದೆ ಎಂಬ ಭಾವನೆ ಎಲ್ಲರಿಗೂ ಬಂದರೆ ಕಾಮಗಾರಿಗಳು ದೀರ್ಘ ಬಾಳಿಕೆ ಬರಲು ಸಾಧ್ಯವಾಗುತ್ತದೆ ಎಂದರು.
Advertisement
Advertisement
ಈ ಸಂದರ್ಭದಲ್ಲಿ ಬಿಬಿಎಂಪಿ ಮಾಜಿ ಉಪಮೇಯರ್ ಎಸ್.ಹರೀಶ್, ವೆಂಕಟೇಶ್ ಮೂರ್ತಿ ಮತ್ತು ಸ್ಥಳೀಯ ಮುಖಂಡರು, ಬಿಬಿಎಂಪಿ ಇಂಜಿನಿಯರ್‌ಗಳು ಉಪಸ್ಥಿತರಿದ್ದರು. ಇದನ್ನೂ ಓದಿ: ಜನರಿಗೆ ತೊಂದ್ರೆ ಕೊಡೋದ್ರಿಂದ ಸರ್ಕಾರಕ್ಕೆ ಲಾಭವೂ, ಇಲ್ಲ ನಷ್ಟವೂ ಇಲ್ಲ: ಸುಧಾಕರ್