Bengaluru CityLatestMain Post

ಅಳತೆಪಟ್ಟಿ ಹಿಡಿದು ಡಾಂಬರೀಕರಣ ಕಾಮಗಾರಿ ಪರಿಶೀಲಿಸಿದ ಕೆ.ಗೋಪಾಲಯ್ಯ

ಬೆಂಗಳೂರು: ರಸ್ತೆ ಡಾಂಬರೀಕರಣಕ್ಕೆ ಚಾಲನೆ ನೀಡಿದ ಅಬಕಾರಿ ಸಚಿವ ಕೆ.ಗೋಪಾಲಯ್ಯ ಅವರು ಅಳತೆಪಟ್ಟಿ ಹಿಡಿದು  ಕಾಮಗಾರಿ ಪರಿಶೀಲಿಸಿದ್ದಾರೆ.

ಮಹಾಲಕ್ಷ್ಮಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ 68ನೇ ವಾರ್ಡ್‍ನ 2ನೇ ಅಡ್ಡರಸ್ತೆಯಲ್ಲಿ ರಸ್ತೆ ಡಾಂಬರೀಕರಣಕ್ಕೆ ಸ್ಥಳೀಯ ಶಾಸಕರು ಕೆ.ಗೋಪಾಲಯ್ಯ ಇಂದು ಚಾಲನೆ ನೀಡಿದರು. ಇದನ್ನೂ ಓದಿ:  ಬುಡಕಟ್ಟು ಮಹಿಳೆಯರೊಂದಿಗೆ ಪ್ರಿಯಾಂಕಾ ಗಾಂಧಿ ವಾದ್ರಾ ಡಾನ್ಸ್- ವೀಡಿಯೋ ವೈರಲ್

ಕಾಮಗಾರಿ ನಡೆಯುವ ಸಮಯದುದ್ದಕ್ಕೂ ಸ್ಥಳದಲ್ಲಿಯೇ ಇದ್ದು ಗುಣಮಟ್ಟ ಪರಿಶೀಲಿಸಿದರು. ಕಾಮಗಾರಿ ಗುಣಮಟ್ಟದ ವಿಚಾರದಲ್ಲಿ ಯಾವುದೇ ಕಾರಣಕ್ಕೂ ರಾಜಿ ಮಾಡಿಕೊಳ್ಳುವುದಿಲ್ಲ. ಜನರ ತೆರಿಗೆ ಹಣದಲ್ಲಿ ಸರ್ಕಾರದ ಮೂಲಕ ನಡೆಯುವ ಅಭಿವೃದ್ಧಿ ಕಾಮಗಾರಿಗಳು ದೀರ್ಘಕಾಲ ಬಾಳಿಕೆ ಬರಬೇಕು. ಮಹಾಲಕ್ಷ್ಮಿ ಲೇಔಟ್ ವಿಧಾಸಭಾ ಕ್ಷೇತ್ರದಲ್ಲಿ ಯಾವುದೇ ಕಾಮಗಾರಿ ನಡೆದರೂ ಗುಣಮಟ್ಟಕ್ಕೆ ಮೊದಲ ಆದ್ಯತೆ ನೀಡಲಾಗಿದೆ ಎಂದರು. ಇದನ್ನೂ ಓದಿ: ಇವರು ಯಾರೆಂದು ಗುರುತಿಸಿ- ಹಳೇ ಫೋಟೋ ಹಂಚಿಕೊಂಡು ಹರ್ಭಜನ್ ಪ್ರಶ್ನೆ

ಈ ಸಂದರ್ಭದಲ್ಲಿ ಸಚಿವರೆ ಸ್ವತಃ ಅಳತೆ ಪಟ್ಟಿ ಹಿಡಿದು ಡಾಂಬರೀಕರಣವಾದ ರಸ್ತೆಯ ದಪ್ಪ, ಅಗಲ,ಉದ್ದ ಪರಿಶೀಲನೆ ನಡೆಸಿದರು. ಈ ವೇಳೆ ರೈಲ್ವೆ ನಾರಾಯಣ, ರಾಘವೇಂದ್ರ, ವಾರ್ಡ್ ಬಿಜೆಪಿ ಅಧ್ಯಕ್ಷ ಆರ್.ನಾರಾಯಣ್ ಮತ್ತು ಬಿಬಿಎಂಪಿ ಇಂಜಿನಿಯರ್‌ಗಳು, ಸ್ಥಳೀಯರು ಉಪಸ್ಥಿತರಿದ್ದರು.

Leave a Reply

Your email address will not be published.

Back to top button