ಬೆಂಗಳೂರು: ರಸ್ತೆ ಡಾಂಬರೀಕರಣಕ್ಕೆ ಚಾಲನೆ ನೀಡಿದ ಅಬಕಾರಿ ಸಚಿವ ಕೆ.ಗೋಪಾಲಯ್ಯ ಅವರು ಅಳತೆಪಟ್ಟಿ ಹಿಡಿದು ಕಾಮಗಾರಿ ಪರಿಶೀಲಿಸಿದ್ದಾರೆ.
ಮಹಾಲಕ್ಷ್ಮಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ 68ನೇ ವಾರ್ಡ್‍ನ 2ನೇ ಅಡ್ಡರಸ್ತೆಯಲ್ಲಿ ರಸ್ತೆ ಡಾಂಬರೀಕರಣಕ್ಕೆ ಸ್ಥಳೀಯ ಶಾಸಕರು ಕೆ.ಗೋಪಾಲಯ್ಯ ಇಂದು ಚಾಲನೆ ನೀಡಿದರು. ಇದನ್ನೂ ಓದಿ: ಬುಡಕಟ್ಟು ಮಹಿಳೆಯರೊಂದಿಗೆ ಪ್ರಿಯಾಂಕಾ ಗಾಂಧಿ ವಾದ್ರಾ ಡಾನ್ಸ್- ವೀಡಿಯೋ ವೈರಲ್
Advertisement
ಮಹಾಲಕ್ಷ್ಮಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕಮಲಾನಗರದಿಂದ ಸುಮ್ಮನಹಳ್ಳಿ ರಿಂಗ್ ರಸ್ತೆಗೆ ಸಂಪರ್ಕ ಕಲ್ಪಿಸುವ ಸಣ್ಣಕ್ಕಿ ಬಯಲು ತೋಟದ ರಸ್ತೆ ಅಗಲೀಕರಣ ಕುರಿತು ಇಂದು ಬಿಬಿಎಂಪಿ ಇಂಜಿನಿಯರ್ ಗಳೊಂದಿಗೆ ಸಮಾಲೋಚನೆ ನಡೆಸಲಾಯಿತು. ಈ ಸಂದರ್ಭದಲ್ಲಿ ಸ್ಥಳೀಯರು ಉಪಸ್ಥಿತರಿದ್ದರು.@CMofKarnataka pic.twitter.com/BzpGAZBxWS
— K Gopalaiah (@GopalaiahK) December 10, 2021
Advertisement
ಕಾಮಗಾರಿ ನಡೆಯುವ ಸಮಯದುದ್ದಕ್ಕೂ ಸ್ಥಳದಲ್ಲಿಯೇ ಇದ್ದು ಗುಣಮಟ್ಟ ಪರಿಶೀಲಿಸಿದರು. ಕಾಮಗಾರಿ ಗುಣಮಟ್ಟದ ವಿಚಾರದಲ್ಲಿ ಯಾವುದೇ ಕಾರಣಕ್ಕೂ ರಾಜಿ ಮಾಡಿಕೊಳ್ಳುವುದಿಲ್ಲ. ಜನರ ತೆರಿಗೆ ಹಣದಲ್ಲಿ ಸರ್ಕಾರದ ಮೂಲಕ ನಡೆಯುವ ಅಭಿವೃದ್ಧಿ ಕಾಮಗಾರಿಗಳು ದೀರ್ಘಕಾಲ ಬಾಳಿಕೆ ಬರಬೇಕು. ಮಹಾಲಕ್ಷ್ಮಿ ಲೇಔಟ್ ವಿಧಾಸಭಾ ಕ್ಷೇತ್ರದಲ್ಲಿ ಯಾವುದೇ ಕಾಮಗಾರಿ ನಡೆದರೂ ಗುಣಮಟ್ಟಕ್ಕೆ ಮೊದಲ ಆದ್ಯತೆ ನೀಡಲಾಗಿದೆ ಎಂದರು. ಇದನ್ನೂ ಓದಿ: ಇವರು ಯಾರೆಂದು ಗುರುತಿಸಿ- ಹಳೇ ಫೋಟೋ ಹಂಚಿಕೊಂಡು ಹರ್ಭಜನ್ ಪ್ರಶ್ನೆ
Advertisement
Advertisement
ಈ ಸಂದರ್ಭದಲ್ಲಿ ಸಚಿವರೆ ಸ್ವತಃ ಅಳತೆ ಪಟ್ಟಿ ಹಿಡಿದು ಡಾಂಬರೀಕರಣವಾದ ರಸ್ತೆಯ ದಪ್ಪ, ಅಗಲ,ಉದ್ದ ಪರಿಶೀಲನೆ ನಡೆಸಿದರು. ಈ ವೇಳೆ ರೈಲ್ವೆ ನಾರಾಯಣ, ರಾಘವೇಂದ್ರ, ವಾರ್ಡ್ ಬಿಜೆಪಿ ಅಧ್ಯಕ್ಷ ಆರ್.ನಾರಾಯಣ್ ಮತ್ತು ಬಿಬಿಎಂಪಿ ಇಂಜಿನಿಯರ್‌ಗಳು, ಸ್ಥಳೀಯರು ಉಪಸ್ಥಿತರಿದ್ದರು.