ಬೆಂಗಳೂರು: ಕೊರೊನಾ ಮೂರನೇ ಅಲೆ ತಡೆಯಲು ಜನ ಸಜ್ಜಾಗಬೇಕು ಎಂದು ಅಬಕಾರಿ ಸಚಿವ ಕೆ.ಗೋಪಾಲಯ್ಯ ಕರೆ ನೀಡಿದ್ದಾರೆ.
ಭಾರತೀಯ ಜನತಾ ಪಾರ್ಟಿಯ ವತಿಯಿಂದ ಆಯೋಜಿಸದ್ದ ಮಹಾಲಕ್ಷ್ಮಿ ಲೇಔಟ್ ವಿಧಾನ ಸಭಾ ಕ್ಷೇತ್ರದ ಮಂಡಲ ಆರೋಗ್ಯ ಸ್ವಯಂ ಸೇವಕರ ಅಭಿಯಾನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಕ್ಷೇತ್ರದಲ್ಲಿ ಕೊರೊನಾ ಸಮಯದಲ್ಲಿ ತಮ್ಮ ಪ್ರಾಣವನ್ನೇ ಲೆಕ್ಕಿಸದೆ ಹೋರಾಟ ನಡೆಸಿದ ಡಾಕ್ಟರ್ ಮತ್ತು ಅಧಿಕಾರಿಗಳ ವರ್ಗ ಹಾಗೂ ಕಾರ್ಯಕರ್ತರುಗಳಿಗೆ ಸನ್ಮಾನಿಸಿದರು. ಇದನ್ನೂ ಓದಿ: ಟೋಕಿಯೊ ಪ್ಯಾರಾಲಿಂಪಿಕ್ಸ್- ಹೈಜಂಪ್‍ನಲ್ಲಿ ಬೆಳ್ಳಿ ಗೆದ್ದ ತಂಗವೇಲು, ಕಂಚು ಶರದ್ ಕುಮಾರ್‌ಗೆ
ಈ ವೇಳೆ ಮಾತನಾಡಿದ ಅವರು, ಒಂದನೇ ಅಲೆ ನಮ್ಮ ಕಾರ್ಯಕರ್ತರೊಂದಿಗೆ ಸುಲಭವಾಗಿ ನಿಭಾಯಿಸಿದ ಎರಡನೇ ಅಲೆ ತೀವ್ರತೆ ಹೆಚ್ಚಾಗಿದ್ದರಿಂದ ಎಲ್ಲರೂ ತುಂಬಾ ಶ್ರಮಿಸ ಬೇಕಾಗಿತ್ತು. 24 ಗಂಟೆಗಳ ಕಾಲ ನಮ್ಮ ಡಾಕ್ಟರಗಳು ಕಾರ್ಯಕರ್ತರು ಕಾರ್ಯ ನಿರ್ವಹಿಸುವಂತೆ ಸೂಚಿಸಲಾಗಿತ್ತು ಕರೆ ಬಂದಕಡೆ ಮನೆ ಮನೆಗೆ ಔಷಧಿ ಕಿಟ್ ಗಳನ್ನು ನಮ್ಮ ಮುಖಂಡರು ತಲುಪಿಸುತ್ತಿದ್ದರು ಎಂದರು.
ಡಾಕ್ಟರ್ ನಾಗೇಂದ್ರ ಅವರ ತಂಡವನ್ನು ರಚಿಸಿ ಮನೆಮನೆಗೆ ಆಕ್ಸಿಜನ್ ಕಿಟ್ ನೀಡಲು ನಿರ್ಧರಿಸಿದ್ದು, ಅಂತೆಯೇ ಹಣವನ್ನು ನೀಡಿ ಆಕ್ಸಿಜನ್ ಸಿಲಿಂಡರುಗಳನ್ನು ಕೊಂಡು ಕೊಂಡವು. ನನ್ನ ಮುಂಬೈ ಸ್ನೇಹಿತರು 300ಕ್ಕಿಂತ ಹೆಚ್ಚು ಸಿಲಿಂಡರುಗಳನ್ನು ಉಚಿತವಾಗಿ ನೀಡಿದರು. ಪ್ರತಿದಿನ ಹತ್ತರಿಂದ ಇಪ್ಪತ್ತು ಜನರಿಗೆ ಉಚಿತವಾಗಿ ಆಕ್ಸಿಜನ್ ನೀಡಲಾಗುತ್ತಿತ್ತು. ಕಂಟ್ರೋಲ್ ರೂಮ್ ಮಾಡಿ 24 ಗಂಟೆಗಳ ಕಾಲ ಕರೆ ಬಂದ ತಕ್ಷಣ ಸ್ಪಂದಿಸುವಂತೆ ಕಾರ್ಯಕರ್ತರು ಮತ್ತು ಡಾಕ್ಟರುಗಳು ಕೆಲಸ ಮಾಡುತ್ತಿದ್ದರು ಅಂತಾ ಶ್ಲಾಘಿಸಿದ್ರು.