ದಾವಣಗೆರೆ: ಕೊಪ್ಪಳ ಅಬಕಾರಿ ಡಿಸಿ ಲಂಚ ನೀಡಿರುವ ಪ್ರಕರಣ ಸತ್ಯಕ್ಕೆ ದೂರವಾಗಿದ್ದು, ಅಬಕಾರಿ ಡಿಸಿ ನನಗೆ ಹಣ ಕೊಟ್ಟಿರೋದು ಶುದ್ದ ಸುಳ್ಳು ಎಂದು ಅಬಕಾರಿ ಸಚಿವ ಕೆ. ಗೋಪಾಲಯ್ಯ ಹೇಳಿದ್ದಾರೆ.
Advertisement
ದಾವಣಗೆರೆಯಲ್ಲಿ ಮಾತನಾಡಿದ ಅವರು, ಅಬಕಾರಿ ಡಿಸಿ ನನಗೆ ಹಣ ಕೊಟ್ಟಿರೋದು ಶುದ್ದ ಸುಳ್ಳಾಗಿದೆ. ಆ ರೀತಿ ಯಾವುದೇ ಅವ್ಯವಹಾರ ನಡೆದಿಲ್ಲ. ಅಬಕಾರಿ ಆಯುಕ್ತರು ನೈಜ ಸ್ಥಿತಿ ನೋಡಿ ಕ್ರಮ ಕೈಗೊಳ್ಳುತ್ತಾರೆ. ಅಬಕಾರಿಯಲ್ಲಿ 2500 ಕೋಟಿ ಆದಾಯ ಬಂದಿದ್ದು, ಕಳೆದ ಭಾರೀಗಿಂತ ಈ ಭಾರೀ ಹೆಚ್ಚು ಆದಾಯ ಇಲಾಖೆಗೆ ಬಂದಿದೆ ಎಂದಿದ್ದಾರೆ. ಇದನ್ನೂ ಓದಿ: ಕೃಷಿ ಕ್ಷೇತ್ರದ ಸಂಶೋಧನೆಗಳು ರೈತರ ಜಮೀನುಗಳಿಗೆ ತಲುಪಬೇಕು: ಬಿ.ಸಿ.ಪಾಟೀಲ್
Advertisement
ಅಬಕಾರಿ ಇಲಾಖೆ ಕಳೆದ ಬಾರಿಗಿಂತ ಈ ಬಾರಿ ಹೆಚ್ಚು ಆದಾಯ ಗಳಿಸಿದ್ದು, ಆನ್ ಲೈನ್ ಮಾರಾಟದ ಬಗ್ಗೆ ಯಾವುದೇ ಚರ್ಚೆ ಇಲ್ಲ. ನಾನು ಅಬಕಾರಿ ಸಚಿವನಾದ ಬಳಿಕ ಯಾವುದೇ ಸುಂಕ ಹೆಚ್ಚಳ ಮಾಡಿಲ್ಲ. ಬೇರೆ ರಾಜ್ಯಗಳಿಗೆ ಮದ್ಯ ಸಾಗಾಟದ ಕುರಿತು ಸಭೆಯಲ್ಲಿ ಚರ್ಚಿಸಿದ ಬಳಿಕ ಕಠಿಣ ಕ್ರಮ ಕೈಗೊಳ್ಳಲಾಗುವುದು. @CMofKarnataka @BSBommai pic.twitter.com/iWB5mOqEXR
— K Gopalaiah (@GopalaiahK) August 30, 2021
Advertisement
ಮದ್ಯ ಪ್ರಿಯರಿಗೆ ಮತ್ತೇ ಯಾವುದೇ ಹೊರೆ ಇಲ್ಲ. ಆನ್ ಲೈನ್ ಮದ್ಯ ಮಾರಾಟ ಬಗ್ಗೆ ಸದ್ಯ ಚರ್ಚೆ ಇಲ್ಲ, ನಾನು ಬಂದ ಮೇಲೆ ಯಾವೂದು ಸುಂಕ ಹೆಚ್ಚಳ ಮಾಡಿಲ್ಲ, ಈ ಭಾರೀ ಆದಾಯ ಹೆಚ್ಚಾಗಿದೆ. ಆಂಧ್ರಕ್ಕೆ ಮದ್ಯ ಸಾಗಾಟ ಆಗುತ್ತಿದೆ. ಇದೆ ಸಭೆಯಲ್ಲಿ ಚರ್ಚಸಿ ಬಳಿಕ ಕಠಿಣ ಕ್ರಮ ಕೈಗೊಳ್ಳುತ್ತೇವೆ. ಮುಂದಿನ ದಿನಗಳಲ್ಲಿ ಅಲ್ಲೇ ಇದ್ದು ವಾಸ್ತವ ಸ್ಥಿತಿ ನೋಡಿ ಕ್ರಮ ತೆಗೆದುಕೊಳ್ಳುವೆ ಎಂದರು.
Advertisement
ಹೊಸಪೇಟೆ ವಿಭಾಗದ ಅಬಕಾರಿ ಅಧಿಕಾರಿಗಳ ಪ್ರಗತಿ ಪರಿಶೀಲನಾ ಸಭೆ ಇಂದು ದಾವಣಗೆರೆ ಜಿಲ್ಲಾ ಪಂಚಾಯತ್ ಸಭಾಗಣದಲ್ಲಿ ನಡೆಯಿತು .
ಶಾಸಕ ಲಿಂಗಣ್ಣ ಉಪ ಆಯುಕ್ತರಾದ ಮಂಜುನಾಥ. ಶಿವಪ್ರಸಾದ್, ಆಪ್ತ ಕಾರ್ಯದರ್ಶಿ ಕಾಂತರಾಜ್ ಸೇರಿದಂತೆ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು. pic.twitter.com/xe8UKf8HIN
— K Gopalaiah (@GopalaiahK) August 30, 2021
ಸಾರಾಯಿ ದಂಧೆ ಕಡಿವಾಣ ಹಾಕುತ್ತೇವೆ. ಕಾರ್ಯಚರಣೆಗೆ ಈಗಾಗಲೇ 70 ವಾಹನ ಬಿಟ್ಟಿದ್ದು, 25 ವಾಹನ ಖರೀದಿಸುತ್ತೇವೆ, ಸಂಪೂರ್ಣವಾಗಿ ಸಾರಾಯಿ ಮಾರಾಟಕ್ಕೆ ಬ್ರೇಕ್ ಹಾಕುತ್ತೇವೆ ಎಂದ ವಿಶ್ವಾಸ ವ್ಯಕ್ತಪಡಿಸಿದರು.