ಬೆಂಗಳೂರು: ಆನೇಕಲ್ ಭಾಗದ ಗಟ್ಟಳ್ಳಿ ಕೆರೆಯಿಂದ ರಾಮಸಾಗರವರೆಗಿನ ರಾಜಕಾಲುವೆಗಳನ್ನು ಒತ್ತುವರಿ ಮಾಡಿಕೊಂಡು ನಿರ್ಮಿಸಲಾಗಿದ್ದ, ಅನಧಿಕೃತ ಖಾಸಗಿ ಬಡಾವಣೆಗಳನ್ನು ಇಂದು ತೆರವುಗೊಳಿಸಲಾಯಿತು ಎಂದು ಜಿಲ್ಲಾಧಿಕಾರಿ ಜೆ.ಮಂಜುನಾಥ್ ತಿಳಿಸಿದರು.
Advertisement
ಕೋಲಾರದಲ್ಲಿ ಕೋರಮಂಗಲ-ಚಲ್ಲಘಟ್ಟ(ಕೆಸಿ) ವ್ಯಾಲಿ ಯೋಜನೆಯನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಿ ಕೆರೆಗಳಲ್ಲಿ ನೀರು ಮರುಪೂರಣಗೊಳಿಸಿರುವಂತೆ, ಬೆಂಗಳೂರು ನಗರ ಜಿಲ್ಲೆಯಲ್ಲಿಯೂ ಇದೇ ಯೋಜನೆ ಮಾಡಲಾಗಿದೆ. ಅದಕ್ಕೆ ಈ ಯೋಜನೆ ಅಡಿಯಲ್ಲಿ ಆನೇಕಲ್ ಭಾಗದಲ್ಲಿ 69 ಕೆರೆಗಳನ್ನು, ಬೆಂಗಳೂರು ಪೂರ್ವ ತಾಲೂಕಿನಲ್ಲಿ 5 ಕೆರೆಗಳನ್ನು ಹಾಗೂ ಆನೇಕಲ್‍ಗೆ ಹೊಂದಿಕೊಂಡಿರುವ ಕನಕಪುರ ಭಾಗದಲ್ಲಿ 5 ಕೆರೆಗಳನ್ನು ತುಂಬುವ ಕಾರ್ಯ ಕೈಗೊಳ್ಳಲಾಗಿದೆ. ಈ ಯೋಜನೆಯಡಿ ಎರಡು ಹಂತದಲ್ಲಿ ಶುದ್ಧೀಕರಿಸಿದ ಒಟ್ಟು 120 ಎಂಎಲ್‍ಡಿ ನೀರನ್ನು ಪೂರೈಸಲಾಗುವುದು ಎಂದರು. ಇದನ್ನೂ ಓದಿ: ತಾಕತ್ತಿದ್ದರೆ ನನ್ನ ವಿರುದ್ಧ ರೇವಣ್ಣ ನಿಲ್ಲಲಿ :ಪ್ರೀತಂ ಸವಾಲು
Advertisement
Advertisement
ಪ್ರಸ್ತುತ 40-43 ಎಂಎಲ್‍ಡಿ ನೀರನ್ನು ಪಂಪ್ ಮಾಡಲಾಗುತ್ತಿದ್ದು, ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ನೀರನ್ನು ಪಂಪ್ ಮಾಡಲು ಕೆರೆಯಿಂದ ಕೆರೆಗೆ ನೀರಿನ ಹರಿವನ್ನು ಸುಗಮಗೊಳಿಸಬೇಕಿದೆ. ಈ ಕೆರೆಗಳಿಗೆ ನೀರು ಪೂರೈಸುವ ಮಾರ್ಗದಲ್ಲಿ ಬರುವ ರಾಜಕಾಲುವೆಗಳು ಮತ್ತು ಡ್ರೇನ್ ನೆಟ್‍ವರ್ಕ್ ಪ್ರದೇಶಗಳಲ್ಲಾಗಿರುವ ಒತ್ತುವರಿಯನ್ನು ತೆರವುಗೊಳಿಸುವ ಕಾರ್ಯವನ್ನು ಜಿಲ್ಲಾಡಳಿತ ಪ್ರಾರಂಭಿಸಿದೆ. ಇದರಿಂದಾಗಿ, ಈ ಯೋಜನೆಗೆ ವೇಗ ನೀಡದಂತಾಗಿದೆ ಎಂದು ತಿಳಿಸಿದರು.