ಹಾವೇರಿ: ವಿಧಾನಸಭೆ ಮಾಜಿ ಅಧ್ಯಕ್ಷ, ಹಾವೇರಿ ಜಿಲ್ಲೆ ರಾಣೆಬೆನ್ನೂರು ವಿಧಾನಸಭೆ ಕ್ಷೇತ್ರದ ಮಾಜಿ ಶಾಸಕ ಕೆ.ಬಿ.ಕೋಳಿವಾಡ (K. B. Koliwad) ಅವರು ಆತ್ಮಹತ್ಯೆ ಮಾಡಿಕೊಂಡ ರೈತನ ಬಗ್ಗೆ ಹಗುರವಾಗಿ ಮಾತನಾಡಿದ ಪ್ರಸಂಗ ನಡೆದಿದೆ.
ಕಾಂಗ್ರೆಸ್ (Congress) ಕಾರ್ಯಕರ್ತರೊಬ್ಬರು ಕೋಳಿವಾಡ ಅವರಿಗೆ ಕರೆ ಮಾಡಿ, ರೈತ (Farmer)ಆತ್ಮಹತ್ಯೆ ಮಾಡಿಕೊಂಡಿದ್ದು, ಮಾಲೆ ಹಾಕಲು ಬರುವಂತೆ ತಿಳಿಸಿದ್ದಾರೆ. ಈ ವೇಳೆ ಕೋಳಿವಾಡ ಅವರು ಆ ರೈತನ ಬಗ್ಗೆ ಹಗುರವಾಗಿ ಮಾತನಾಡಿದ್ದಲ್ಲದೇ ಅವಾಚ್ಯ ಶಬ್ಧಗಳನ್ನು ಕೂಡ ಬಳಸಿದ್ದಾರೆ. ಸದ್ಯ ಈ ಆಡಿಯೋ ಸಾಮಾಜಿಕ ಜಾಲತಾಣ (Social Media) ಗಳಲ್ಲಿ ಸಖತ್ ವೈರಲ್ ಆಗುತ್ತಿದೆ.
ಪಕ್ಷದ ಕಾರ್ಯಕ್ರಮ ಸಂಘಟನೆ ಮಾಡಲು ಮುಖಂಡರೊಬ್ಬರ ಮನೆಯಲ್ಲಿ ಕಾರ್ಯಕರ್ತರ ಜೊತೆ ಮಾತನಾಡುತ್ತಿದ್ದಾಗ ಕೋಳಿವಾಡಗೆ ಕಾರ್ಯಕರ್ತನ ಕರೆ ಬಂದಿದೆ. ಫೋನ್ (Phone Call) ನಲ್ಲಿ ಮಾತನಾಡಿದ ಮೇಲೆ ಕಾರ್ಯಕರ್ತರ ಮುಂದೆ ರೈತನ ಬಗ್ಗೆ ಅವಾಚ್ಯ ಶಬ್ಧ ಬಳಸಿ ಮಾತನಾಡಿದ್ದಾರೆ. ಇದನ್ನೂ ಓದಿ: ಮರ್ಮಾಂಗಕ್ಕೆ ಚಾಕುವಿನಿಂದ ಚುಚ್ಚಿ ಯುವಕನ ಬರ್ಬರ ಹತ್ಯೆ
ಐದು ಬಾರಿ ಶಾಸಕರಾಗಿರೋ ಕೋಳಿವಾಡ ಅವರು ಒಮ್ಮೆ ಸಚಿವರಾಗಿ, ವಿಧಾನಸಭೆ ಅಧ್ಯಕ್ಷರಾಗಿ ಕೆಲಸ ಮಾಡಿದ್ದಾರೆ. ಇದೀಗ ಹಿರಿಯ ರಾಜಕಾರಣಿಯ ಬಾಯಲ್ಲಿ ಬಂದ ಹಗುರ ಮಾತುಗಳಿಗೆ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ.