ಜ್ಯೋತಿ ರೈ ಸಿಕ್ಕಾಪಟ್ಟೆ ಹಾಟ್: ‘ಪ್ರೆಟಿ ಗರ್ಲ್’ ಬಗ್ಗೆ ಹೊಸ ಅಪ್ ಡೇಟ್

Public TV
1 Min Read
Jyoti Rai

ನ್ನಡದ ಜೋಗುಳ ಧಾರಾವಾಹಿ ಮೂಲಕ ಮನೆಮಾತಾಗಿದ್ದ ಮಡಿಕೇರಿ ಬೆಡಗಿ ಜ್ಯೋತಿ ರೈ ( Jyoti Rai) ಇದೀಗ ಹಾಟ್ ಹಾಟ್ ಫೋಟೋಗಳ ಮೂಲಕ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಾರೆ. ಕನ್ನಡ ಕಿರುತೆರೆ ಮತ್ತು ಚಿತ್ರೋದ್ಯಮದಿಂದ ದೂರವಾಗಿ ತೆಲುಗು ಕಿರುತೆರೆಯಲ್ಲಿ ಮಿಂಚುತ್ತಿರುವ ಜ್ಯೋತಿ ರೈ, ಸದ್ಯ ಪ್ರೆಟಿ ಗರ್ಲ್ (Pretty girl) ಎಂಬ ಹೆಸರಿನ ವೆಬ್ ಸಿರೀಸ್ ನಲ್ಲಿ ನಟಿಸುತ್ತಿದ್ದಾರೆ. ಈ ವೆಬ್ ಸಿರೀಸ್ ನಲ್ಲಿ ಅವರು ಸಖತ್ ಹಾಟ್ ಹಾಟ್ ಆಗಿ ಕಂಡಿದ್ದಾರೆ.

Jyoti Rai 1

ಇತ್ತೀಚೆಗಷ್ಟೇ ಅವರು ಲವ್ವಿಡವ್ವಿ ಕಾರಣದಿಂದಾಗಿ ಸಖತ್ ಸುದ್ದಿಯಲ್ಲಿದ್ದರು. ತೆಲುಗಿನ ಕಿರಿಯ ನಿರ್ದೇಶಕರ ಜೊತೆ ಸಹಜೀವನ ನಡೆಸುತ್ತಿದ್ದಾರೆ ಎಂದೆಲ್ಲ ಸುದ್ದಿ ಆಗಿತ್ತು. ಅದ್ಯಾವುದರ ಬಗ್ಗೆ ತಲೆಕೆಡಿಸಿಕೊಳ್ಳದೇ ತಮ್ಮ ವೃತ್ತಿ ಜೀವನದ ಹಾದಿಯಲ್ಲಿ ತಣ್ಣಗೆ ನಡೆದುಕೊಂಡು ಹೋಗುತ್ತಿದ್ದಾರೆ.

Jyoti Rai 4

ಆಗಾಗ್ಗೆ ಅಭಿಮಾನಿಗಳ ಜೊತೆ ಸೋಷಿಯಲ್ ಮೀಡಿಯಾದಲ್ಲಿ ಮಾತನಾಡುವ ಜ್ಯೋತಿ ರೈ, ಈಗ ಪ್ರೆಟಿ ಗರ್ಲ್ ವೆಬ್ ಸಿರೀಸ್ ಬಗ್ಗೆ ಅಪ್ ಡೇಟ್ ನೀಡಿದ್ದಾರೆ.

Jyoti Rai 3

ಸದ್ಯದಲ್ಲೇ ನಿಮ್ಮ ನಿರೀಕ್ಷೆಯ ವೆಬ್ ಸಿರೀಸ್ ನಿಮ್ಮ ಕಣ್ಮುಂದೆ ಇರಲಿದೆ ಎಂದು ಹೇಳಿಕೊಂಡಿದ್ದಾರೆ. ಇನ್ನೂ ಮೂರು ವಾರಗಳ ಕಾಲ ಶೂಟಿಂಗ್ ಇರುವ ಕುರಿತು ಹಂಚಿಕೊಂಡಿದ್ದಾರೆ.

Jyoti Rai 2

ಈ ಸಿರೀಸ್ ನಲ್ಲಿ ಅವರು ಹೊಸ ಬಗೆಯ ಪಾತ್ರ ಮಾಡಿದ್ದಾರಂತೆ. ಅದನ್ನು ಜನರು ಹೇಗೆ ಸ್ವೀಕರಿಸುತ್ತಾರೆ ಎನ್ನುವ ಕುತೂಹಲವೂ ಅವರಲ್ಲಿ ಇದೆಯಂತೆ.

 

ಅದೊಂದು ಸಸ್ಪೆನ್ಸ್ ಮತ್ತು ಥ್ರಿಲ್ಲರ್ ಮಾದರಿಯ ವೆಬ್ ಸಿರೀಸ್ ಅಂತೆ. ವಿಲಕ್ಷಣ ಹಾಗೂ ಅತ್ಯಂತ ಭಯಾನಕ ಸಂಗತಿಗಳನ್ನು ಇದು ಹೊತ್ತು ತರಲಿದೆಯಂತೆ.

Share This Article