ನವದೆಹಲಿ: ಪಾಕಿಸ್ತಾನ (Pakistan) ಪರ ಬೇಹುಗಾರಿಕೆ ನಡೆಸಿದ ಆರೋಪದ ಮೇಲೆ ಬಂಧಿಸಲ್ಪಟ್ಟ ಹರಿಯಾಣದ ಯೂಟ್ಯೂಬರ್ ಜ್ಯೋತಿ ಮಲ್ಹೋತ್ರಾಳನ್ನು (Jyothi Malhotra) ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಬಂಧನ ಅವಧಿಯನ್ನು ನ್ಯಾಯಾಲಯ ನಾಲ್ಕು ದಿನಗಳವರೆಗೆ ವಿಸ್ತರಿಸಿದೆ.
ಬೆಳಿಗ್ಗೆ 9:30ಕ್ಕೆ ಹಿಸಾರ್ ಪೊಲೀಸರು ಜ್ಯೋತಿಯನ್ನು ನ್ಯಾಯಾಲಯಕ್ಕೆ ಕರೆತಂದರು. ಸುಮಾರು ಒಂದೂವರೆ ಗಂಟೆಗಳ ಕಾಲ ವಿಚಾರಣೆ ನಡೆಯಿತು. ನಂತರ ಹಿಸಾರ್ ಪೊಲೀಸರು ಆಕೆಯನ್ನು 4 ದಿನಗಳ ಕಸ್ಟಡಿಗೆ ಪಡೆದರು. ಜ್ಯೋತಿಯ ತಂದೆ ಹರೀಶ್ ಮಲ್ಹೋತ್ರಾಳನ್ನು ಭೇಟಿ ಮಾಡಲು ಅವಕಾಶ ನೀಡಿಲ್ಲ. ಇದನ್ನೂ ಓದಿ: ದೈವ ಶಕ್ತಿ ಇರೋವರೆಗೆ ಯಾರು ನನ್ನನ್ನು ಕಾಡೋಕೆ ಆಗಲ್ಲ: ಹೆಚ್.ಡಿ ರೇವಣ್ಣ
ಜ್ಯೋತಿ ಪರವಾಗಿ ಪ್ರಕರಣದ ವಾದ ಮಂಡಿಸಲು ಇನ್ನೂ ಯಾವುದೇ ವಕೀಲರನ್ನು ನೇಮಿಸಲಾಗಿಲ್ಲ. ಜ್ಯೋತಿಯ ತಂದೆ ಹರೀಶ್ ಮಲ್ಹೋತ್ರಾ ಮಾತನಾಡಿ, ನನ್ನ ಬಳಿ ವಕೀಲರನ್ನು ನೇಮಿಸಿಕೊಳ್ಳಲು ಹಣವಿಲ್ಲ ಎಂದು ಹೇಳಿದ್ದಾರೆ. ನನಗೆ ವಕೀಲರನ್ನು ಹೇಗೆ ನೇಮಿಸಿಕೊಳ್ಳಬೇಕೆಂದು ತಿಳಿದಿಲ್ಲ. ಕಳೆದ ಐದು ದಿನಗಳಿಂದ ಮಾಧ್ಯಮ ಮತ್ತು ಪೊಲೀಸರನ್ನು ಹೊರತುಪಡಿಸಿ ಯಾರೂ ನನ್ನ ಮನೆಗೆ ಬರುತ್ತಿಲ್ಲ ಎಂದು ಹೇಳಿದರು. ನೆರೆಹೊರೆಯವರು ಮತ್ತು ಸಂಬಂಧಿಕರು ಅವರಿಂದ ಅಂತರ ಕಾಯ್ದುಕೊಂಡಿದ್ದಾರೆ. ಇದನ್ನೂ ಓದಿ: ಚಾ.ನಗರ| ತಾಳಿ ಕಟ್ಟಿಸಿಕೊಂಡ ಮರುಕ್ಷಣವೇ ಪರೀಕ್ಷೆಗೆ ಹಾಜರಾದ ವಧು
ರಾಷ್ಟ್ರೀಯ ತನಿಖಾ ಸಂಸ್ಥೆ, ಗುಪ್ತಚರ ಬ್ಯೂರೋ ಮತ್ತು ಮಿಲಿಟರಿ ಗುಪ್ತಚರ ಇಲಾಖೆಗಳು ಜ್ಯೋತಿ ಮಲ್ಹೋತ್ರಾಳನ್ನು ಪೊಲೀಸ್ ಕಸ್ಟಡಿಯಲ್ಲಿ ಮೂರು ದಿನಗಳ ಕಾಲ ವಿಚಾರಣೆ ಮುಂದುವರಿಸಿವೆ. ಇದನ್ನೂ ಓದಿ: ಅತ್ಯಾಚಾರ ಕೇಸ್ – ನಾಪತ್ತೆಯಾಗಿದ್ದ ನಟ ಮಡೆನೂರು ಮನು ಅರೆಸ್ಟ್
ಈ ನಡುವೆ ಜ್ಯೋತಿ ಜೊತೆಗೆ ಸಂಪರ್ಕದಲ್ಲಿದ್ದ ಪಾಕ್ ಹೈಕಮಿಷನ್ ಅಧಿಕಾರಿ ಡ್ಯಾನಿಶ್ ಸರ್ಕಾರದಿಂದ ನಿಯೋಜನೆಗೊಂಡ ಅಧಿಕಾರಿಯಲ್ಲ, ಬದಲಿಗೆ ಆತ ಐಎಸ್‌ಐ ಏಜೆಂಟ್ ಎಂದು ತಿಳಿದು ಬಂದಿದೆ. ವೀಸಾ ಕೇಳಿಕೊಂಡು ಬರುವ ಭಾರತೀಯರನ್ನು ಟಾರ್ಗೆಟ್ ಮಾಡುತ್ತಿದ್ದ ಡ್ಯಾನಿಶ್ ಅವರ ಹಿನ್ನೆಲೆಯನ್ನು ತಿಳಿದುಕೊಂಡು ಅವರಿಗೆ ಆಮಿಷಗಳನ್ನೊಡ್ಡಿ ಬೇಹಗಾರಿಕೆ ಮಾಡಿಸುತ್ತಿದ್ದ ಜೊತೆಗೆ ಭಾರತದ ಸಿಮ್ ತಂದುಕೊಟ್ಟವರಿಗೆ ವೀಸಾ ಕ್ಲಿಯರ್ ಮಾಡುತ್ತಿದ್ದ ಎಂದು ತನಿಖೆಯಲ್ಲಿ ತಿಳಿದುಬಂದಿದೆ. ಇದನ್ನೂ ಓದಿ: ಸಿಂಧೂರ ಅಳಿಸಲು ಹೊರಟವರನ್ನ ಮಣ್ಣಿನಲ್ಲಿ ಹೂತಿದ್ದೇವೆ: ಮೋದಿ