ಚಿತ್ರದುರ್ಗ: ಕನಸು, ಕೊನೆಯ ದಿನ ಎಂಬ ಮಾತುಗಳ ಮೂಲಕ ಬಾರಿ ಸುದ್ದಿ ಮಾಡಿದ್ದ ಜ್ಯೋತಿರಾಜ್ ಫೆಬ್ರವರಿ 26, 27ರಂದು ಅಮೆರಿಕದ ಅತಿ ಎತ್ತರ ಏಂಜಲ್ ಫಾಲ್ಸ್ ಹತ್ತಿ ಅಪ್ರತಿಮ ಸಾಧನೆ ಮಾಡುವ ತವಕದಲ್ಲಿದ್ದರು. ಆದರೆ ಜ್ಯೋತಿರಾಜ್ ಅವರು ಏಂಜಲ್ ಫಾಲ್ಸ್ ಹತ್ತಲಿಲ್ಲ.
ಜ್ಯೋತಿರಾಜ್ ಅತಿ ಎತ್ತರದ ಫಾಲ್ಸ್ ಹತ್ತುತ್ತಿರುವುದನ್ನು ಕೇಳಿ ಚಿತ್ರದುರ್ಗದ ಜನರಲ್ಲದೇ ದೇಶದ ವಿವಿಧೆಡೆಯಲ್ಲಿರುವ ಅವರ ಅಭಿಮಾನಿಗಳು ಅವರಿಗೆ ಹಲವು ಪೋಸ್ಟ್ ಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕುವ ಮೂಲಕ ಶುಭ ಕೋರಿದರು. ಅಲ್ಲದೆ ಕೆಲವರು ಈಗಾಗಲೇ ಕೋತಿರಾಜ್ ಏಂಜಲ್ ಫಾಲ್ಸ್ ಏರಿ ಅಪ್ರತಿಮ ಸಾಧನೆಗೈದಿದ್ದಾರೆ ಎಂಬ ಸುಳ್ಳು ಸುದ್ದಿಯನ್ನು ವಾಟ್ಸಪ್, ಫೇಸ್‍ಬುಕ್‍ಗಳಲ್ಲಿ ಹಾಕಿ ಭರ್ಜರಿ ಚರ್ಚೆಗೆ ಆಸ್ಪದವಾಗಿತ್ತು. ಇದನ್ನೂ ಓದಿ: ಫೆಬ್ರವರಿ 26, 27 ನನ್ನ ಕೊನೆಯ ದಿನ – ಅಪಾಯಕಾರಿ ಸಾಹಸಕ್ಕೆ ಮುಂದಾದ ಕೋತಿರಾಜ್
Advertisement
Advertisement
ಕಳೆದ ಒಂದೆರಡು ದಿನಗಳಿಂದ ಕೋತಿರಾಜ್ ಜೋಗ್ ಫಾಲ್ಸ್ ಏರುತ್ತಿರುವ ವಿಡಿಯೋ ಹಾಗೂ ಫೋಟೋವನ್ನು ಪೋಸ್ಟ್ ಮಾಡಿ, ಅಮೆರಿಕದಲ್ಲಿರುವ ಏಂಜೆಲ್ ಫಾಲ್ಸ್ ಅನ್ನು ಇಂದು ಮತ್ತು ನಾಳೆ ಸ್ಪೈಡರ್ ವ್ಯಾನ್ ಏರಲಿದ್ದಾರೆ ಎಂಬ ಗಾಳಿ ಸುದ್ದಿ ಸಹ ಹರಡಿಸಿ ಜನರಲ್ಲಿ ಅಚ್ಚರಿ ಮೂಡಿಸುವ ಮೂಲಕ ಫೇಕ್ ಮಾಹಿತಿ ನೀಡಿದ್ದರು. ಆದರೆ ಅದೆಲ್ಲಾ ಸುಳ್ಳು ವದಂತಿಗಳೆಂದು ಜ್ಯೋತಿರಾಜ್ ಅವರ ಆಪ್ತ ಸ್ನೇಹಿತ ಬಸವರಾಜ್ ಸ್ಪಷ್ಟನೆ ನೀಡಿದ್ದಾರೆ.
Advertisement
Advertisement
ಜ್ಯೋತಿರಾಜ್ ಅವರ ಸ್ನೇಹಿತ ಬಸವರಾಜ್ ಜೊತೆಗಿದ್ದಾರೆ. ಸದ್ಯ ಕೋತಿರಾಜ್ ತನ್ನ ದೇಹದ ತೂಕ 85 ಕೆಜಿ ಇದೆ. ಹೀಗಾಗಿ ಜ್ಯೋತಿರಾಜ್ ಅತಿ ಎತ್ತರದ ಏಂಜಲ್ ಫಾಲ್ಸ್ ಏರಲು ದೇಹದ ತೂಕ ಕಡಿಮೆ ಮಾಡಿಕೊಳ್ಳುವ ಸಲುವಾಗಿ ಉತ್ತರಕನ್ನಡದಲ್ಲಿ ಆಯುರ್ವೇದಿಕ್ ಚಿಕಿತ್ಸೆಯನ್ನು ಪಡೆಯುತ್ತಿದ್ದಾರೆ. ಇದರಿಂದಾಗಿ ಅವರು ಹೇಳಿದ ಫೆ. 26 ಹಾಗೂ 27ರಂದು ಆ ಸಾಧನೆ ಮಾಡಲು ಸಾಧ್ಯವಾಗಿಲ್ಲ. ಆದಷ್ಟು ಬೇಗ ವಾಪಸ್ ಬಂದು ಮಾಧ್ಯಮದೊಂದಿಗೆ ಸುದ್ದಿಗೋಷ್ಠಿ ನಡೆಸಿ ಏಪ್ರಿಲಿನಲ್ಲಿ ಈ ಸಾಧನೆಗೆ ತೆರಳಲಿದ್ದಾರೆ ಎಂದು ಸ್ಪಷ್ಟನೆ ಕೊಟ್ಟಿದ್ದಾರೆ. ಇದರಿಂದಾಗಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡ್ತಿದ್ದ ವೈರಲ್ ಸುದ್ದಿಗೆ ಬ್ರೇಕ್ ಬೀಳಬೇಕೆಂಬುದು ಜ್ಯೋತಿರಾಜ್ ಅವರ ಅಭಿಮಾನಿಗಳ ಕಳಕಳಿ ಮನವಿ.