ದಕ್ಷಿಣ ಭಾರತದ ಹೆಸರಾಂತ ನಟಿ, ನಿರ್ಮಾಪಕಿ ಜ್ಯೋತಿಕಾ (Jyothika) ಬರೋಬ್ಬರಿ 25 ವರ್ಷಗಳ ಬಳಿಕ ಬಾಲಿವುಡ್ ಗೆ ಮರಳಿದ್ದಾರೆ. ಈ ಹಿಂದೆ ಅವರು ಹಿಂದಿ, ಕನ್ನಡ, ತಮಿಳು, ತೆಲುಗು ಸಿನಿಮಾಗಳಲ್ಲಿ ನಟಿಸಿ, ಆನಂತರ ಚಿತ್ರೋದ್ಯಮದಿಂದಲೇ ದೂರವಾಗಿದ್ದರು. ಇದೀಗ ಬಾಲಿವುಡ್ (Bollywood) ಸಿನಿಮಾವನ್ನು ಒಪ್ಪಿಕೊಳ್ಳುವ ಮೂಲಕ ಮತ್ತೆ ಚಿತ್ರರಂಗದಲ್ಲಿ ಸಕ್ರೀಯರಾಗುತ್ತಿದ್ದಾರೆ.
ಅಜಯ್ ದೇವಗನ್ (Ajay Devgn) ಹೊಸದೊಂದು ಸಿನಿಮಾ ಒಪ್ಪಿಕೊಂಡಿದ್ದು, ಈ ಚಿತ್ರಕ್ಕೆ ಜ್ಯೋತಿಕಾ ನಾಯಕಿ. ಇದೊಂದು ಹಾರರ್ ಚಿತ್ರವಾಗಿದ್ದು, ಆರ್. ಮಧುವನ್ ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದು ಚಿತ್ರತಂಡದಿಂದಲೇ ಅಧಿಕೃತ ಮಾಹಿತಿಯಾಗಿದ್ದು, ಚಿತ್ರಕ್ಕೆ ಇನ್ನೂ ಟೈಟಲ್ ಇಟ್ಟಿಲ್ಲ. ಇದೀಗ ಓದಿ: 7 ತಿಂಗಳ ಬಳಿಕ ಮೊದಲ ಬಾರಿಗೆ ಮಗಳ ಮುಖ ರಿವೀಲ್ ಮಾಡಿದ ಧ್ರುವ ಸರ್ಜಾ
ಜ್ಯೋತಿಕಾ ಮತ್ತು ಪತಿ ಕಂ ನಟ ಸೂರ್ಯ ತಮಿಳಿನಲ್ಲಿ ಅತ್ಯುತ್ತಮ ಸಿನಿಮಾಗಳನ್ನು ನಿರ್ಮಾಣ ಮಾಡುತ್ತಿದ್ದಾರೆ. ಜ್ಯೋತಿಕಾ ಬಹುತೇಕ ನಿರ್ಮಾಣದಲ್ಲೇ ಬ್ಯುಸಿಯಾಗಿದ್ದರು. ಅಭಿಮಾನಿಗಳ ಒತ್ತಾಸೆಯಂತೆ ಬಾಲಿವುಡ್ ಚಿತ್ರವನ್ನು ಒಪ್ಪಿಕೊಂಡಿದ್ದಾರೆ. ವಿಕಾಸ್ ಬಹ್ಲ್ (Vikas Bahl) ಈ ಸಿನಿಮಾವನ್ನು ನಿರ್ದೇಶನ ಮಾಡಲಿದ್ದು, ಜೂನ್ ತಿಂಗಳಿಂದ ಚಿತ್ರೀಕರಣ ಶುರುವಾಗಲಿದೆ.