ಬೀಜಿಂಗ್: ಏಷ್ಯನ್ ಗೇಮ್ಸ್‌ನ (Asian Games 2023) ಅರ್ಚರಿ ಕಾಂಪೌಂಡ್ ತಂಡ ವಿಭಾಗದ ಫೈನಲ್‌ನಲ್ಲಿ ಚೈನೀಸ್ ತೈಪೆಯನ್ನು ಮಣಿಸಿ ಭಾರತ ಚಿನ್ನದ ಪದಕ ಜಯಸಿದೆ.
ಭಾರತದ ಜ್ಯೋತಿ ಸುರೇಖಾ ವೆನ್ನಮ್, ಅದಿತಿ ಸ್ವಾಮಿ ಮತ್ತು ಪರ್ನೀತ್ ಕೌರ್ ಅವರು ಏಷ್ಯನ್ ಗೇಮ್ಸ್ 2023 ರಲ್ಲಿ ಅದ್ಭುತ ಪ್ರದರ್ಶನ ನೀಡಿದರು. ಪರಿಣಾಮವಾಗಿ 230-229 ಅಂತರದಲ್ಲಿ ಚೈನೀಸ ತೈಪೆ ವಿರುದ್ಧ ಗೆಲುವು ಸಾಧಿಸಿದ್ದಾರೆ. ಒಂದು ಪಾಯಿಂಟ್‌ನಿಂದ ಫೈನಲ್‌ನಲ್ಲಿ ಚೈನೀಸ್ ತೈಪೆಯ ಯಿ-ಹ್ಸುವಾನ್ ಚೆನ್, ಐ-ಜೌ ಹುವಾಂಗ್ ಮತ್ತು ಲು-ಯುನ್ ವಾಂಗ್ ಅವರನ್ನು ಸೋಲಿಸಿದರು. ಇದನ್ನೂ ಓದಿ: ಇಂದಿನಿಂದ ವಿಶ್ವಕಪ್ ಫೈಟ್ – ಪಂದ್ಯಗಳಿಂದ ಔಟಾದವರ ಪಟ್ಟಿ ಇಲ್ಲಿದೆ
Advertisement
Advertisement
ಬುಧವಾರ ನಡೆದ ಕಾಂಪೌಂಡ್ ಮಿಕ್ಸೆಡ್ ತಂಡ ವಿಭಾಗದಲ್ಲಿಯೂ ಭಾರತ ಚಿನ್ನ ಗೆದ್ದಿತ್ತು. ಗುರುವಾರದ ಗೆಲುವಿನಿಂದ ಭಾರತಕ್ಕೆ ಅರ್ಚರಿಯಲ್ಲಿ (Archery) ಎರಡನೇ ಚಿನ್ನದ ಪದಕ ಬಂದಿದೆ.
Advertisement
Advertisement
ಈ ಬಾರಿಯ ಕ್ರೀಡಾಕೂಟದಲ್ಲಿ ಭಾರತಕ್ಕೆ ಒಟ್ಟು 83 ಪದಕಗಳು ಬಂದಿವೆ. 20 ಚಿನ್ನ, 31 ಬೆಳ್ಳಿ ಹಾಗೂ 32 ಕಂಚಿನ ಪದಗಳನ್ನು ಭಾರತ ಗೆದ್ದಿದೆ. ಆ ಮೂಲಕ ಏಷ್ಯನ್ ಗೇಮ್ಸ್ ಕ್ರೀಡಾಕೂಟದ ಪದಕ ಬೇಟೆ ರಾಷ್ಟ್ರಗಳ ಪಟ್ಟಿಯಲ್ಲಿ ನಾಲ್ಕನೇ ಸ್ಥಾನ ಭದ್ರಪಡಿಸಿಕೊಂಡಿದೆ. ಇದನ್ನೂ ಓದಿ: ICC World Cup 2023: ಇಂದಿನಿಂದ ವಿಶ್ವಕಪ್ ಮಹಾಸಮರ – ಇಂದು ಇಂಗ್ಲೆಂಡ್ ವಿರುದ್ಧ ನ್ಯೂಜಿಲೆಂಡ್ ಸೆಣಸಾಟ
Web Stories