ಬೆಂಗಳೂರು: ಲೋಕಾಯುಕ್ತ ಕಚೇರಿಯಲ್ಲಿ ನ್ಯಾ. ವಿಶ್ವನಾಥ್ ಶೆಟ್ಟಿ ಅವರ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿದ ಆರೋಪಿ ತೇಜರಾಜ್ ಪೊಲೀಸರ ಮುಂದೆ ಕೃತ್ಯ ನಡೆಸಲು ಕಾರಣವನ್ನು ಬಿಚ್ಚಿಟ್ಟಿದ್ದಾನೆ.
ಕಳೆದ ಆರು ಏಳು ತಿಂಗಳಿನಿಂದ ಲೋಕಾಯುಕ್ತ ಕಚೇರಿಯಲ್ಲಿ ಕೆಲ ಆಕ್ರಮಗಳ ವಿರುದ್ಧ ದೂರು ದಾಖಲಿಸಲಾಗಿತ್ತು. ಆದರೆ ನನ್ನ ದೂರಿನ ಬಗ್ಗೆ ಲೋಕಾಯಕ್ತ ಕಚೇರಿಯಲ್ಲಿ ಯಾರು ಗಮನಹರಿಸಿರಲಿಲ್ಲ. ಈ ಕುರಿತು ಮೂರು ಬಾರಿ ಲೋಕಾಯುಕ್ತ ಅವರನ್ನು ಮೂರು ಬಾರಿ ಭೇಟಿ ಮಾಡಿದರೂ ಪ್ರಯೋಜನ ಆಗಿಲ್ಲ ಎಂದು ಹೇಳಿದ್ದಾನೆ ಎಂದು ಮೂಲಗಳಿಂದ ಪಬ್ಲಿಕ್ ಟಿವಿಗೆ ಮಾಹಿತಿ ಸಿಕ್ಕಿದೆ. ಇದನ್ನೂ ಓದಿ: ಕೊಲೆ ಮಾಡಲೆಂದೇ ವಿಶ್ವನಾಥ್ ಶೆಟ್ಟಿ ಅವರ ಮೇಲೆ ದಾಳಿ ಮಾಡಿದ್ದಾನೆ, ತನಿಖೆಗೆ ಸೂಚಿಸಿದ್ದೇನೆ- ಸಿಎಂ
ಆಕ್ರಮಗಳ ಕುರಿತು ದೂರುಗಳ ಮೇಲೆ ದೂರು ಕೊಟ್ಟರೂ ಲೋಕಾಯುಕ್ತ ಕಚೇರಿಯಿಂದ ಒಂದೇ ಒಂದೇ ದೂರಿಗೂ ಸಕರಾತ್ಮಕ ಉತ್ತರ ಬಂದಿರಲಿಲ್ಲ. ಅಲ್ಲದೇ ಎಲ್ಲಾ ಪ್ರಕರಣಗಳನ್ನು ಕ್ಲೋಸ್ ಮಾಡುತ್ತಿದ್ದರು. ಲೋಕಾಯುಕ್ತ ಕುರಿತು ಚೆಕ್ ಮಾಡಲಿಕ್ಕಾಗಿಯೇ ಹಲವು ಬಾರಿ ದೂರು ಕೊಟ್ಟಿದ್ದೆ. ಆದರೆ ಒಂದು ದೂರಿಗೂ ಕ್ರಮಕೈಗೊಂಡಿರಲಿಲ್ಲ. ಈ ಕಾರಣಕ್ಕಾಗಿಯೇ ಕೋಪ ಬಂದು ನಾನು ಈ ಕೃತ್ಯ ಎಸಗಿದ್ದೇನೆ ಎಂದು ಹೇಳಿ ಆತ ತಪ್ಪೊಪ್ಪಿಕೊಂಡಿದ್ದಾನೆ. ಇದನ್ನೂ ಓದಿ: ತಂದೆ ಮೇಲಿನ ಇರಿತ ಸುದ್ದಿ ಕೇಳಿದ್ರೂ ಹಾರ್ಟ್ ಆಪರೇಷನ್ ಪೂರ್ಣಗೊಳಿಸಿದ ಮಗ ರವಿಶಂಕರ್
https://www.youtube.com/watch?v=p9D7_SbY8aQ