ನವದೆಹಲಿ: ಸುಪ್ರೀಂಕೋರ್ಟ್ (Supreme Court) ಮುಖ್ಯ ನ್ಯಾಯಮೂರ್ತಿಯಾಗಿ ನ್ಯಾ.ಸಂಜೀವ ಖನ್ನಾ (Justice Sanjiv Khanna) ಇಂದು (ನ.11) ರಂದು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.
ಇಂದು ರಾಷ್ಟ್ರಪತಿ ಭವನದಲ್ಲಿ ಬೆಳಿಗ್ಗೆ 10 ಗಂಟೆಗೆ ನಡೆಯಲಿರುವ ಸಮಾರಂಭದಲ್ಲಿ ಸುಪ್ರೀಂ ಕೋರ್ಟ್‌ನ 51ನೇ ಮುಖ್ಯ ನ್ಯಾಯಮೂರ್ತಿಯಾಗಿ ಅಧಿಕಾರ ಸ್ವೀಕರಿಸಲಿರುವ ನ್ಯಾ.ಸಂಜೀವ ಖನ್ನಾ ಅವರಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು (Droupadi Murmu) ಪ್ರಮಾಣ ವಚನ ಬೋಧಿಸಲಿದ್ದಾರೆ.ಇದನ್ನೂ ಓದಿ: ಚಳಿಗಾಲದಲ್ಲಿ ಅಯೋಧ್ಯೆ ರಾಮನನ್ನು ಬೆಚ್ಚಗಿಡಲು ಚಾದರ, ಪಶ್ಮಿನಾ ಶಾಲು, ಹೀಟರ್ ವ್ಯವಸ್ಥೆ
Advertisement
Advertisement
ಎರಡು ವರ್ಷಗಳ ಅವಧಿಯ ಬಳಿಕ ಹಾಲಿ ಸಿಜೆಐ ಡಿವೈ ಚಂದ್ರಚೂಡ್ (DY Chandrachud) ಅವರು ಭಾನುವಾರ ತಮ್ಮ ಅಧಿಕಾರದಿಂದ ನಿವೃತ್ತಿ ಹೊಂದಿದರು. ಅವರ ಶಿಫಾರಸಿನ ಮೇರೆಗೆ ಅ.24 ರಂದು ನ್ಯಾ.ಸಂಜೀವ ಖನ್ನಾ ಅವರನ್ನು ಮುಖ್ಯ ನ್ಯಾರ್ಯಮೂರ್ತಿಯಾಗಿ ನೇಮಕ ಮಾಡುವ ಕುರಿತು ಅಧಿಕೃತವಾಗಿ ಪ್ರಕಟಿಸಲಾಗಿತ್ತು. ಸೋಮವಾರ ಅಧಿಕಾರ ಸ್ವೀಕರಿಸಲಿರುವ ನ್ಯಾ.ಖನ್ನಾ 2025ರ ಮೇ.31ರವರೆಗೆ ಅಧಿಕಾರದಲ್ಲಿರಲಿದ್ದಾರೆ.
Advertisement
2019ರ ಜನವರಿಯಿಂದ ಸುಪ್ರೀಂ ಕೋರ್ಟ್‌ನ ನ್ಯಾಯಧೀಶರಾಗಿ ಸೇವೆ ಸಲ್ಲಿಸಿದ ನ್ಯಾ.ಖನ್ನಾ ಅವರು, ಸುಪ್ರೀಂ ಕೋರ್ಟ್‌ನ ಭಾಗವಾಗಿ ಹಲವಾರು ಪ್ರಮುಖ ತೀರ್ಪುಗಳನ್ನು ನೀಡಿದ್ದಾರೆ. ಚುನಾವಣಾ ಬಾಂಡ್‌ಗಳ ಯೋಜನೆ ರದ್ದು, ಭಾರತದ ಸಂವಿಧಾನದ 370ನೇ ವಿಧಿಯ ರದ್ದತಿಯನ್ನು ಎತ್ತಿಹಿಡಿದ ಸಂವಿಧಾನ ಪೀಠದ ಭಾಗವಾಗಿದ್ದರು.
Advertisement
ಇನ್ನೂ ಜುಲೈನಲ್ಲಿ ಅವರ ನೇತೃತ್ವದ ಪೀಠವು ದೆಹಲಿ ಮದ್ಯ ನೀತಿ ಪ್ರಕರಣಕ್ಕೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಆಗಿನ ದೆಹಲಿ (Delhi) ಮುಖ್ಯಮಂತ್ರಿಯಾಗಿದ್ದ ಎಎಪಿ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ (AAP Arvind Kejrival) ಅವರಿಗೆ ಮಧ್ಯಂತರ ಜಾಮೀನು ನೀಡಿತ್ತು.ಇದನ್ನೂ ಓದಿ: ಕ್ಯೂಬಾದಲ್ಲಿ ಒಂದೇ ಗಂಟೆಯಲ್ಲಿ 2 ಪ್ರಬಲ ಭೂಕಂಪ