LatestNational

ನಿರ್ಭಯಾ ಬದುಕಿದ್ದರೆ ಹೆಚ್ಚು ಖುಷಿಯಾಗುತ್ತಿತ್ತು: ವಕೀಲೆ ಸೀಮಾ

-ತಡವಾದ್ರೂ ನ್ಯಾಯ ಸಿಕ್ತು

ನವದೆಹಲಿ: ನಿರ್ಭಯಾಳನ್ನು ಬದುಕಿಸುತ್ತಿದ್ದರೆ ನನಗೆ ತುಂಬಾ ಖುಷಿಯಾಗುತ್ತಿತ್ತು ಎಂದು ನಿರ್ಭಯಾ ತಾಯಿ ಪರ ವಾದ ಮಾಡಿದ್ದ ವಕೀಲೆ ಸೀಮಾ ಕುಶ್‍ವಾಹಾ ಪ್ರತಿಕ್ರಿಯಿಸಿದ್ದಾರೆ.

ಅಪರಾಧಿಗಳನ್ನು ಗಲ್ಲಿಗೇರಿಸಿದ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಸೀಮಾ, ನಿರ್ಭಯಾಳನ್ನು ಬದುಕಿದ್ದರೆ, ನನಗೆ ಹೆಚ್ಚು ಖುಷಿಯಾಗುತ್ತಿತ್ತು. ಆದರೆ ನಾವು ಆಕೆಯನ್ನು ಬದುಕಿಸಿಕೊಳ್ಳಲು ಆಗಲಿಲ್ಲ. ದೇಶದ ಕಾನೂನು ಸುವ್ಯವಸ್ಥೆ ಇದರಲ್ಲಿ ಫೇಲ್ ಆಗಿದೆ. ದೇಶದ ರಾಜಧಾನಿಯಲ್ಲಿ ಈ ಘಟನೆ ನಡೆದಿದೆ. ಆದರೆ ಹಂತಕರನ್ನು ಗಲ್ಲಿಗೇರಿಸುವ ಮೂಲಕ ನಿರ್ಭಯಾಗೆ ನ್ಯಾಯ ಸಿಕ್ಕಿದೆ. ಆ ವಿಷಯದ ಬಗ್ಗೆ ಸಮಾಧಾನ ಇದೆ ಎಂದು ಹೇಳಿದರು.

ನಿರ್ಭಯಾ ಬದುಕಿದ್ದರೆ ಹೆಚ್ಚು ಖುಷಿಯಾಗುತ್ತಿತ್ತು: ವಕೀಲೆ ಸೀಮಾ

ನಾನು ಒಂದು ವಿಷಯ ಹೇಳಲು ಇಷ್ಟಪಡುತ್ತೇನೆ. ಅಪರಾಧಿಗಳು ನಿರ್ಭಯಾ ಮೇಲೆ ಕೇವಲ ಅತ್ಯಾಚಾರ ಮಾಡಿಲ್ಲ, ಹತ್ಯೆ ಮಾಡಿದ್ದಾರೆ. ನಿರ್ಭಯಾಳನ್ನು ಕೊಲೆ ಮಾಡಿ ಆಕೆಯ ದೇಹವನ್ನು ಸಂಪೂರ್ಣವಾಗಿ ನಾಶ ಮಾಡಿದ್ದರು. ಯಾವ ರೀತಿ ನಿರ್ಭಯಾಯನ್ನು ಹತ್ಯೆ ಮಾಡಿದ್ದಾರೋ, ಪ್ರಾಣಿಗಳು ಕೂಡ ಆ ರೀತಿ ಮಾಡಲ್ಲ. ಆದರೆ ಇಂದು ನಾಲ್ವರು ಅಪರಾಧಿಗಳನ್ನು ಗಲ್ಲುಗೇರಿಸಲಾಗಿದೆ ಎಂದು ವಕೀಲೆ ಸೀಮಾ ಕುಶ್‍ವಾಹಾ ತಿಳಿಸಿದರು.

ನಿರ್ಭಯಾ ವೈದ್ಯಕೀಯ ಶಿಕ್ಷಣ ಮುಗಿಸಿ ಇಂರ್ಟನ್‍ಶಿಪ್ ಮಾಡಲು ಇಲ್ಲಿಗೆ ಬಂದಿದ್ದಳು. ಈ ಘಟನೆ ನಡೆದ ಮರುದಿನ ನಿರ್ಭಯಾ ತನ್ನ ಇಂರ್ಟನ್‍ಶಿಪ್‍ಗೆ ಹೋಗಬೇಕಿತ್ತು. ಅದು ಆಕೆಯ ಕನಸ್ಸಾಗಿತ್ತು. ಆದರೆ ಈ ಘಟನೆ ನಡೆದ ನಂತರ ಆಕೆಯ ಕನಸ್ಸು ನುಚ್ಚು ನುರಾಯಿತು. ಒಂದು ಕ್ಷಣದಲ್ಲಿ ಎಲ್ಲವೂ ಬದಲಾಯಿತು ಎಂದರು. ಅಲ್ಲದೆ ಇಂತಹ ಪ್ರಕರಣದಲ್ಲಿ ಬೇರೆ ಹೆಣ್ಣು ಮಕ್ಕಳಿಗೂ ನ್ಯಾಯ ಸಿಕ್ಕಿಲ್ಲ ಎಂಬುದು ನನಗೆ ಮೊದಲಿನಿಂದಲೂ ಗೊತ್ತಿದೆ. ಇಂತಹ ಹಲವು ಪ್ರಕರಣಗಳು ಬಾಕಿ ಇದೆ ಎಂಬುದು ನನಗೆ ಗೊತ್ತಿದೆ. ನಿರ್ಲಕ್ಷ್ಯದಿಂದ ಈ ಪ್ರಕರಣ ಇಷ್ಟು ವರ್ಷ ನಡೆಯಿತು. ತಡವಾದರೂ ನಿರ್ಭಯಾಗೆ ನ್ಯಾಯ ಸಿಕ್ಕಿದೆ ಎಂದು ತಿಳಿಸಿದರು.

ದೇಶದಲ್ಲಿ ಹಲವು ಹೆಣ್ಣು ಮಕ್ಕಳ ಜೊತೆ ನಿರ್ಭಯಾದಂತಹ ಪ್ರಕರಣ ನಡೆದಿದೆ. ಅವರು ಕೂಡ ನ್ಯಾಯಕ್ಕಾಗಿ ಕಾಯುತ್ತಿದ್ದಾರೆ. ಮಾಧ್ಯಮದವರು ಅಂತಹ ಪ್ರಕರಣಗಳನ್ನು ಬೆಳಕಿಗೆ ತಂದು ಅವರಿಗೂ ನ್ಯಾಯ ಕೊಡಿಸುವ ಕೆಲಸ ಮಾಡಬೇಕು ಎಂದು ತಿಳಿಸಿದರು.

Leave a Reply

Your email address will not be published. Required fields are marked *

Back to top button