ಮಲಯಾಳಂ (Malayalam) ಸಿನಿಮಾ ರಂಗದಲ್ಲಿ 2017ರಲ್ಲಿ ನಡೆದ ಲೈಂಗಿಕ ದೌರ್ಜನ್ಯ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡಿದ್ದ ಕೇರಳ ಸರಕಾರ, ಮಲಯಾಳಂ ಚಿತ್ರರಂಗದಲ್ಲಿ ನಡೆಯುತ್ತಿರುವ ಮಹಿಳಾ ಲೈಂಗಿಕ ದೌರ್ಜನ್ಯದ ಕುರಿತಂತೆ ವರದಿ ನೀಡಲು ನ್ಯಾಯಮೂರ್ತಿ ಕೆ ಹೇಮಾ ಸಮಿತಿಯನ್ನು (Hema Report) ರಚಿಸಿತ್ತು. ಈ ವರದಿಯನ್ನು ಸರಕಾರಕ್ಕೆ ಸಲ್ಲಿಸಲಾಗಿದ್ದು, ಈಗ ಆರ್ಟಿಐ ಮೂಲಕ ವರದಿಯು ಬಹಿರಂಗಗೊಂಡಿದೆ. ವರದಿಯಲ್ಲಿ ಉಲ್ಲೇಖವಾಗಿರೋ ಅಂಶಗಳು ಚಿತ್ರೋದ್ಯಮದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿ ಮಾಡಿವೆ.
Advertisement
ಮಲಯಾಳಂ ಸಿನಿಮಾ ರಂಗ (Film Industry) ಕೆಲವು ಪುರುಷ ಹಿಡಿತದಲ್ಲಿದ್ದು, ಅವರು ಹೇಳಿದಂತೆ ಕೇಳದೇ ಇದ್ದರೆ, ಯಾವ ನಟಿಯರಿಗೂ ಅಲ್ಲಿ ಅವಕಾಶ ಸಿಗುವುದಿಲ್ಲ. ಮಹಿಳೆಯರು ಚಿತ್ರೋದ್ಯಮದಲ್ಲಿ ಹೊಂದಾಣಿಕೆ ಮಾಡಿಕೊಂಡು ಕೆಲಸ ಮಾಡಬೇಕು, ಇಲ್ಲ ಚಿತ್ರೋದ್ಯಮವನ್ನು ತೊರೆಯಬೇಕು ಅನ್ನು ಅಂಶಗಳನ್ನು ವರದಿಯಲ್ಲಿ ಉಲ್ಲೇಖ ಮಾಡಲಾಗಿದೆ. ಚಿತ್ರೋದ್ಯಮದಲ್ಲಿ ಮಾಫಿಯಾ ಎಂಟ್ರಿ ಕೊಟ್ಟಿದೆ ಅನ್ನೋ ಅಂಶವೂ ಸೇರ್ಪಡೆಯಾಗಿದೆ. ವರದಿಯ ಅಧ್ಯಯನದ ಸಂದರ್ಭದಲ್ಲಿ ಮಲಯಾಳಂ ಚಿತ್ರೋದ್ಯಮವು ಕೆಲ ನಿರ್ಮಾಪಕರ, ನಿರ್ದೇಶಕರ ಹಾಗೂ ನಟರ ಹಿಡಿತದಲ್ಲಿರುವುದು ಕಂಡು ಬಂದಿದೆ. ಇದಿಷ್ಟೇ ಜನರು ಮಲಯಾಳಂ ಚಿತ್ರೋದ್ಯಮವನ್ನ ನಿಯಂತ್ರಿಸುತ್ತಿದ್ದಾರೆ. ಈ ಉದ್ಯಮವು ಅಪರಾಧಿಗಳ ಮತ್ತು ಸ್ತ್ರೀ ದ್ವೇಷಿಗಳಿಂದ ಹೆಚ್ಚು ಪ್ರಭಾವಿತವಾಗಿದೆ ಎಂದು ವರದಿಯಲ್ಲಿ ಉಲ್ಲೇಖ ಮಾಡಲಾಗಿದೆ.
Advertisement
Advertisement
ಮಹಿಳೆಯರು ಚಿತ್ರೋದ್ಯಮಕ್ಕೆ ಹಣ ಮಾಡಲು ಬರುತ್ತಿದ್ದಾರೆ. ಹಾಗಾಗಿ ಅವರು ಎಲ್ಲದಕ್ಕೂ ರೆಡಿ ಆಗಿರುತ್ತಾರೆ ಎನ್ನುವ ಮಾತು ಕೇಳಿ ಬರುತ್ತಿದೆ. ಅದು ನಿಜವಾದದ್ದು ಅಲ್ಲ. ಕಲೆ ಮತ್ತು ನಟನೆಯ ಮೇಲಿನ ಆಸಕ್ತಿ ಕಾರಣದಿಂದಾಗಿ ಮಹಿಳೆಯರು ಸಿನಮಾ ರಂಗಕ್ಕೆ ಬರುತ್ತಿದ್ದಾರೆ. ಕೆಲವರು ಅವಕಾಶ ಪಡೆಯಲು ಅಡ್ಡದಾರಿಯನ್ನೂ ಹಿಡಿದಿದ್ದಾರೆ ಎಂದಿದೆ ವರದಿ. ಇದರ ಜೊತೆಗೆ ತಮ್ಮ ನಿಯಮಗಳಿಗೆ ಒಪ್ಪುವಂಥ ಮಹಿಳೆಯರ ಗುಂಪು ಕೂಡ ಅಲ್ಲಿ ರಚನೆಯಾಗಿದ್ದು, ಅವರನ್ನು ಕೋಡ್‍್ ಹೆಸರುಗಳಿಂದ ಉಲ್ಲೇಖಿಸಲಾಗುತ್ತದೆ. ಎಷ್ಟೋ ಮಹಿಳಯರು ಪಾತ್ರಗಳಿಗಾಗಿ ಈ ರೀತಿ ಗುಂಪಿಗೆ ಸೇರಿದ್ದಾರೆ ಅನ್ನೋ ಆತಂಕಕಾರಿ ಅಂಶ ಕೂಡ ವರದಿಯಲ್ಲಿದೆ. ನಟಿಯೊಬ್ಬಳು ನಟನಿಂದ ದೌರ್ಜನ್ಯಕ್ಕೆ ಒಳಗಾಗಿ, ಮರುದಿನವೇ ಆಕೆ ಆತನೊಂದಿಗೆ ಪತ್ನಿಯಾಗಿ ಸಿನಿಮಾದಲ್ಲಿ ನಟಿಸಬೇಕಿತ್ತು. ಆಘಾತದಲ್ಲಿದ್ದ ನಟಿಯು ಆ ದೃಶ್ಯವನ್ನು ಎದುರಿಸೋಕೆ ಆಗದೇ 17 ಟೇಕ್ ಗಳನ್ನು ತೆಗೆದುಕೊಂಡಳು. ಮತ್ತು ಅವನನ್ನು ಎದುರಿಸೋಕೆ ಆಗದೇ ದೃಶ್ಯ ಮುಗಿಸಲು ಹರಸಾಹಸ ಪಟ್ಟಳು. ಆ ದೃಶ್ಯದಲ್ಲಿ ಒಬ್ಬರನ್ನೊಬ್ಬರು ತಬ್ಬಿಕೊಳ್ಳುವಂಥ ದೃಶ್ಯವಿತ್ತು. ನಿಜಕ್ಕೂ ಅದು ಭಯಾನಕ ಆಗಿತ್ತು ಎಂದು ಆ ನಟಿ ಹೇಳಿಕೊಂಡಿದ್ದಾಳೆ.
Advertisement
ಮಲಯಾಳಂ ಸಿನಿಮಾ ರಂಗದಲ್ಲಿ ನಟಿಯರ ಮನೆ ಬಾಗಿಲುಗಳು ಅಥವಾ ತಂಗಿದ ಸ್ಥಳಗಳ ಬಾಗಿಲುಗಳು ಬಡಿದುಕೊಳ್ಳುತ್ತಲೇ ಇರುತ್ತವೆ. ನಟಿಯರು ಸ್ಪಂದಿಸದೇ ಹೋದರೆ, ಬಾಗಿಲು ಬಡಿತ ಇನ್ನೂ ಜೋರಾಗುತ್ತವೆ ಎಂದು ಮತ್ತೋರ್ವ ನಟಿಯೊಬ್ಬರು ಸಮಿತಿಯ ಮುಂದೆ ಕರಾಳತೆಯನ್ನು ಬಿಚ್ಚಿಟ್ಟಿದ್ದಾರೆ. ಜೀವಭಯ ಕಾರಣದಿಂದಾಗಿ ಪೊಲೀಸರನ್ನು ಸಂಪರ್ಕಿಸಲು ಸಾಕಷ್ಟು ಜನರು ಹಿಂದೇಟು ಹಾಕಿದ್ದಾರೆ ಅಂತಿದೆ ವರದಿ. ಧೈರ್ಯದಿಂದ ದೂರು ನೀಡಿದರೆ, ಆ ನಟಿಯ ಬದುಕೇ ಮುಗಿದು ಹೋಗುತ್ತದೆ ಅನ್ನೋ ಅಂಶ ಕೂಡ ಉಲ್ಲೇಖವಾಗಿದೆ. ನಟಿಯ ವೃತ್ತಿ ಜೀವನ ಮುಗಿಸುವುದರ ಜೊತೆಗೆ ಆ ಕುಟುಂಬಗಳನ್ನು ಗುರಿಯಾಗಿಸಿ ನಿತ್ಯ ಬೆದರಿಕೆ ಹಾಕಲಾಗುತ್ತದೆ ಎನ್ನುವುದನ್ನೂ ವರದಿಯಲ್ಲಿ ಉಲ್ಲೇಖ ಮಾಡಲಾಗಿದೆ. ಕುಟುಂಬಕ್ಕೆ ಬೆದರಿಕೆ ಜೊತೆಗೆ ಮತ್ತೆ ಅವಕಾಶ ಸಿಗುವುದಿಲ್ಲ ಅನ್ನೋ ಕಾರಣಕ್ಕೆ ಅನೇಕ ನಟಿಯರು ಮೌನಕ್ಕೆ ಜಾರಿದ್ದಾರಂತೆ.
ಜ್ಯೂನಿಯರ್ ಆರ್ಟಿಸ್ಟ್ ಕುರಿತಂತೆಯೂ ವರದಿಯಲ್ಲಿ ಉಲ್ಲೇಖಿಸಲಾಗಿದ್ದು, ಲೈಂಗಿಕ ಹೊಂದಾಣಿಕೆ ಇರದೇ ಹೋದರೆ ಜ್ಯೂನಿಯರ್ ಕಲಾವಿದರಿಗೆ ಅವಕಾಶವೇ ಸಿಗೋದಿಲ್ಲ ಅಂತಿದೆ ವರದಿ. ವಾಟ್ಸಪ್ ಗ್ರೂಪ್ ಗಳನ್ನು ಮಾಡಿಕೊಂಡು ಜ್ಯೂನಿಯರ್ ಆರ್ಟಿಸ್ಟ್ ಸಂಯೋಜಕರು ಮತ್ತು ಮ್ಯಾನೇಜರ್ ಗಳು ನಿತ್ಯ ಕಿರುಕುಳ ನೀಡುತ್ತಲೇ ಇರುತ್ತಾರೆ. ಕೆಲಸ ಬೇಕು ಅಂದರೆ ಸಹಕರಿಸಲೇಬೇಕು ಅಂತಿದೆ ವರದಿ.