– ತಂದೆಗೆ ವಿಷ ನೀಡಿ ಹತ್ಯೆ: ಉಮರ್ ಅನ್ಸಾರಿ ಆರೋಪ
ಲಕ್ನೋ: ಗ್ಯಾಂಗ್ಸ್ಟರ್, ರಾಜಕಾರಣಿ ಮುಖ್ತರ್ ಅನ್ಸಾರಿ (Mukhtar Ansari) ಸಾವಿನಿಂದ ನನಗೆ ನ್ಯಾಯ ಸಿಕ್ಕಿದೆ ಎಂದು ಆತನಿಂದ ಹತ್ಯೆಗೀಡಾದ ಬಿಜೆಪಿ ಶಾಸಕ ಕೃಷ್ಣಾನಂದ್ ರೈ (BJP MLA Krishnanand Rai) ಅವರ ಪತ್ನಿ ಅಲ್ಕಾ ರೈ (Alka Rai) ಹೇಳಿದ್ದಾರೆ.
Advertisement
ಸುದ್ದಿಗಾರರೊಂದಿಗೆ ವಾರಣಾಸಿಯಲ್ಲಿ (Varanasi) ಮಾತನಾಡಿದ ಅವರು, ನಾನು ನ್ಯಾಯಕ್ಕಾಗಿ ದೇವರನ್ನು ಪ್ರಾರ್ಥಿಸುತ್ತಿದ್ದೆ. ದೇವರು ಅದನ್ನು ಪೂರೈಸಿದ್ದಾನೆ. ಪತಿಯ ಹತ್ಯೆಯ ನಂತರ ನಾವು ಎಂದು ಹೋಳಿ ಆಚರಿಸಲಿಲ್ಲ. ನ್ಯಾಯ ಸಿಕ್ಕ ಈ ದಿನವನ್ನು ಹೋಳಿ ಎಂದು ನಾನು ಭಾವಿಸುತ್ತೇನೆ. ಆತನ ಸಾವಿನಿಂದ, ಅನಾಥರಾದ ಮಕ್ಕಳಿಗೆ ಸಂತೋಷವಾಗಿದೆ ಎಂದಿದ್ದಾರೆ. ಇದನ್ನೂ ಓದಿ: ಗ್ಯಾಂಗ್ಸ್ಟರ್, ಯುಪಿ ರಾಜಕಾರಣಿ ಮುಖ್ತಾರ್ ಅನ್ಸಾರಿ ಹೃದಯಾಘಾತದಿಂದ ಸಾವು
Advertisement
Advertisement
ಮೃತ ಮುಖ್ತರ್ ಅನ್ಸಾರಿಯ ಮಗ ಉಮರ್ ಅನ್ಸಾರಿ ಈ ಬಗ್ಗೆ ಪ್ರತಿಕ್ರಿಯಿಸಿದ್ದು, ತನ್ನ ತಂದೆಗೆ ಆಹಾರದಲ್ಲಿ ವಿಷವನ್ನು ನೀಡಲಾಗಿತ್ತು ಎಂದು ಆರೋಪಿಸಿದ್ದಾರೆ. ಇಡೀ ದೇಶಕ್ಕೆ ಎಲ್ಲವೂ ತಿಳಿದಿದೆ. ಎರಡು ದಿನಗಳ ಹಿಂದೆ ನಾನು ಅವರನ್ನು ಭೇಟಿಯಾಗಲು ಬಂದಿದ್ದೆ. ನನಗೆ ಅವಕಾಶ ನೀಡಲಿಲ್ಲ, ಸ್ಲೋ ಪಾಯ್ಸನ್ ನೀಡಿದ ಆರೋಪದ ಬಗ್ಗೆ ನಾವು ಮೊದಲೇ ಹೇಳಿದ್ದೇವೆ. ಈಗಲೂ ನಾನು ಅದನ್ನೇ ಹೇಳುತ್ತೇನೆ. ನಮಗೆ ನ್ಯಾಯಾಲಯದಲ್ಲಿ ನ್ಯಾಯ ಸಿಗುವ ನಂಬಿಕೆ ಇದೆ ಎಂದಿದ್ದಾರೆ.
Advertisement
ಜೈಲಿನಲ್ಲಿದ್ದ ಮುಖ್ತಾರ್ ಅನ್ಸಾರಿ ಗುರುವಾರ ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ಸಾವನ್ನಪ್ಪಿದ್ದರು. ಉತ್ತರ ಪ್ರದೇಶದ (Uttar Pradesh) ಮಾವ್ದಿಂದ ಐದು ಬಾರಿ ಗೆದ್ದು ಶಾಸಕರಾಗಿದ್ದರು. ಅವರ ವಿರುದ್ಧ 61 ಕ್ರಿಮಿನಲ್ ಪ್ರಕರಣಗಳಿದ್ದು, ಅದರಲ್ಲಿ 15 ಕೊಲೆ ಆರೋಪದ ಪ್ರಕರಣಗಳಾಗಿವೆ. ಇದನ್ನೂ ಓದಿ: 300 ಅಡಿ ಕಣಿವೆಗೆ ಉರುಳಿದ ವಾಹನ – 10 ಮಂದಿ ದುರ್ಮರಣ