ನವದೆಹಲಿ: ಸುಪ್ರೀಂ ಕೋರ್ಟ್ ಹಿರಿಯ ನ್ಯಾಯಮೂರ್ತಿ ಚೆಲಮೇಶ್ವರ್ ಜೂನ್ 22 ರಂದು ನಿವೃತ್ತಿ ಹೊಂದಲಿದ್ದು ಸಿಜೆಐ ದೀಪಕ್ ಮಿಶ್ರಾ ಜೊತೆ ನ್ಯಾಯಪೀಠ ಹಂಚಿಕೊಂಡಿದ್ದಾರೆ.
ಸೇವಾ ನಿವೃತ್ತಿ ಪಡೆಯುವ ನ್ಯಾಯಮೂರ್ತಿಗಳು ಕಡೆಯ ದಿನ ಕೋರ್ಟ್ ಹಾಲ್ ಸಂಖೈ 1 ರಲ್ಲಿ ಸಿಜೆಐ ಜೊತೆ ನ್ಯಾಯಪೀಠ ಹಂಚಿಕೊಳ್ಳುವ ಅವಕಾಶ ನೀಡುವ ಪದ್ಧತಿಯನ್ನು ಸುಪ್ರೀಂ ಕೋರ್ಟ್ ಪಾಲಿಸಿಕೊಂಡು ಬಂದಿದೆ.
Advertisement
ಮೇ 20 ರಿಂದ ಸುಪ್ರೀಂ ಕೋರ್ಟ್‍ಗೆ ಬೇಸಿಗೆ ರಜೆ ಶುರುವಾಗುವುದರಿಂದ ಶುಕ್ರವಾರ ಅವರ ಕಡೆಯ ಸೇವಾ ದಿನವಾಗಿತ್ತು.
Advertisement
ಸೂಕ್ಷ್ಮ ಪ್ರಕರಣಗಳನ್ನು ನಿಯೋಜಿಸುವಲ್ಲಿ ಹಾಗೂ ನ್ಯಾಯಮೂರ್ತಿಗಳ ಶಿಫಾರಸ್ಸಿನಲ್ಲಿ ಸಿಜೆಐ ಮಿಶ್ರಾ ಅವರು ಲೋಪ ಎಸಗುತ್ತಿದ್ದಾರೆ ಎಂದು ಇತ್ತೀಚೆಗಷ್ಟೆ ಇನ್ನಿತರ ನ್ಯಾಯಮೂರ್ತಿಗಳೊಂದಿಗೆ ಚೆಲಮೇಶ್ವರ್ ಸುದ್ದಿ ಗೋಷ್ಠಿ ನಡೆಸಿ ಅಸಮಾಧಾನವನ್ನು ವ್ಯಕ್ತಪಡಿಸಿದ್ದರು.
Advertisement
ಪ್ರಜಾಪ್ರಭುತ್ವದ ಆಶಯಗಳನ್ನು ಇಷ್ಟು ವರ್ಷಗಳ ಕಾಲ ಕಾಪಾಡಿದ್ದಕ್ಕೆ ಹಾಗೂ ನಿಮ್ಮ ಜೊತೆ ಪಾಲ್ಗೊಂಡಿದ್ದಕ್ಕೆ ನಮಗೆ ಹೆಮ್ಮೆ ಮತ್ತು ಗೌರವವಿದೆ. ಮುಂದಿನ ಪೀಳಿಗೆ ಇದನ್ನು ನೆನಪಿನಲ್ಲಿ ಇರಿಸುತ್ತದೆ ಎಂದು ಹಿರಿಯ ನ್ಯಾಯಮೂರ್ತಿಗಳಾದ ರಾಜೀವ್ ದತ್ತ, ಪ್ರಶಾಂತ್ ಭೂಷಣ್, ಗೋಪಾಲ್ ಶಂಕರನಾರಾಯಣನ್ ವಂದನೆ ಮಾತುಗಳನ್ನು ಆಡಿದರು.
Advertisement
ಕೋರ್ಟ್ ಹಾಲ್ ಗೆ ನಮಸ್ಕರಿಸುತ್ತಾ ನಿವೃತ್ತ ನ್ಯಾಯಮುರ್ತಿ ಚೆಲಮೇಶ್ವರ್ ಹೊರ ನಡೆದರು.