Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಮಮತಾ ಸವಾಲು ಸ್ವೀಕಾರ – ಕೋಲ್ಕತ್ತಾ ಹೈಕೋರ್ಟ್ ಜಡ್ಜ್ ರಾಜೀನಾಮೆ, ಮಾ.7 ರಂದು ಬಿಜೆಪಿ ಸೇರ್ಪಡೆ
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Court | ಮಮತಾ ಸವಾಲು ಸ್ವೀಕಾರ – ಕೋಲ್ಕತ್ತಾ ಹೈಕೋರ್ಟ್ ಜಡ್ಜ್ ರಾಜೀನಾಮೆ, ಮಾ.7 ರಂದು ಬಿಜೆಪಿ ಸೇರ್ಪಡೆ

Court

ಮಮತಾ ಸವಾಲು ಸ್ವೀಕಾರ – ಕೋಲ್ಕತ್ತಾ ಹೈಕೋರ್ಟ್ ಜಡ್ಜ್ ರಾಜೀನಾಮೆ, ಮಾ.7 ರಂದು ಬಿಜೆಪಿ ಸೇರ್ಪಡೆ

Public TV
Last updated: March 5, 2024 3:33 pm
Public TV
Share
2 Min Read
Gangopadhyay
SHARE

ಕೋಲ್ಕತ್ತಾ: ಹೈಕೋರ್ಟ್‍ನ (Calcutta High Court) ನ್ಯಾಯಮೂರ್ತಿ ಹುದ್ದೆಗೆ ರಾಜೀನಾಮೆ ನೀಡಿದ ನ್ಯಾ.ಅಭಿಜಿತ್ ಗಂಗೋಪಾಧ್ಯಾಯ (Abhijit Gangopadhyay) ಅವರು ಭಾರತೀಯ ಜನತಾ ಪಾರ್ಟಿ (BJP) ಸೇರುವುದಾಗಿ ಮಾಧ್ಯಮಗಳಿಗೆ ಹೇಳಿಕೆ ಕೊಟ್ಟಿದ್ದಾರೆ.

ಅವರು ತಮ್ಮ ಸಾಲ್ಟ್ ಲೇಕ್ ನಿವಾಸದಲ್ಲಿ ಪತ್ರಿಕಾಗೋಷ್ಠಿ ನಡೆಸಿದರು. ಈ ವೇಳೆ, ಮಾರ್ಚ್ 7 ರಂದು ಬಿಜೆಪಿ ಸೇರುವ ಸಾಧ್ಯತೆಯಿದೆ. ಮುಂಬರುವ ಲೋಕಸಭಾ ಚುನಾವಣೆಯಲ್ಲಿ (Lok Sabha elections) ಸ್ಪರ್ಧಿಸಬೇಕೇ ಅಥವಾ ಬೇಡವೇ ಎಂಬುದನ್ನು ಪಕ್ಷ ನಿರ್ಧರಿಸುತ್ತದೆ. ತೃಣಮೂಲ ಕಾಂಗ್ರೆಸ್‍ನ (TMC) ಭ್ರಷ್ಟಾಚಾರದ ವಿರುದ್ಧ ಹೋರಾಡುತ್ತಿರುವ ಏಕೈಕ ರಾಷ್ಟ್ರೀಯ ಪಕ್ಷ ಬಿಜೆಪಿಯಾಗಿದೆ ಎಂದು ಅವರು ಹೇಳಿಕೊಂಡಿದ್ದಾರೆ.

ಆಡಳಿತ ಪಕ್ಷದ ಲೇವಡಿಯಿಂದ ನಾನು ಈ ಕ್ರಮಕ್ಕೆ ಮುಂದಾಗಿದ್ದೇನೆ. ಅವರ ಅಪಹಾಸ್ಯ ಮತ್ತು ಹೇಳಿಕೆಗಳು ನನ್ನನ್ನು ಈ ಹೆಜ್ಜೆ ಇಡಲು ಪ್ರೇರೇಪಿಸಿತು. ಆಡಳಿತ ಪಕ್ಷ ನನ್ನನ್ನು ಹಲವು ಬಾರಿ ಅವಮಾನಿಸಿದೆ. ಅವರ ವಕ್ತಾರರು ನನ್ನ ಮೇಲೆ ಅಸಂಸದೀಯ ಪದಗಳಿಂದ ದಾಳಿ ನಡೆಸಿದ್ದಾರೆ. ಅವರಿಗೆ ಶಿಕ್ಷಣದ ಸಮಸ್ಯೆ ಇದೆ ಎಂದು ನಾನು ಭಾವಿಸುತ್ತೇನೆ ಎಂದಿದ್ದಾರೆ.

ಆಡಳಿತ ಪಕ್ಷದ ನಾಯಕರು ರಾಜಕೀಯ ಅಖಾಡಕ್ಕೆ ಬಂದು ಹೋರಾಡುವಂತೆ ನನಗೆ ಹಲವಾರು ಬಾರಿ ಸವಾಲು ಹಾಕಿದ್ದಾರೆ. ಹಾಗಾಗಿ ಅವರ ಆಸೆಗಳನ್ನು ಪೂರೈಸಲು ನಾನು ಯೋಚಿಸಿದ್ದೇನೆ ಎಂದು ಅವರು ಹೇಳಿಕೊಂಡಿದ್ದಾರೆ.

Abhijit Gangopadhyay 1

ಅಭಿಜಿತ್ ಗಂಗೋಪಾಧ್ಯಾಯ ಭಾನುವಾರ ನ್ಯಾಯಾಂಗವನ್ನು ತೊರೆಯುತ್ತಿರುವುದಾಗಿ ಹೇಳಿದ್ದರು. ಅವರು, ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ರಾಜೀನಾಮೆ ಸಲ್ಲಿಸಿದ ಗಂಟೆಗಳ ನಂತರ, ಅದರ ಪ್ರತಿಗಳನ್ನು ಭಾರತದ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಮತ್ತು ಕಲ್ಕತ್ತಾ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಟಿಎಸ್ ಶಿವಜ್ಞಾನಂ ಅವರಿಗೆ ಕಳುಹಿಸಲಾಯಿತು. ಸಂವಿಧಾನದ 217 (1) (ಎ) ವಿಧಿಯ ಅಡಿಯಲ್ಲಿ ತಕ್ಷಣವೇ ರಾಜೀನಾಮೆ ಸ್ವಿಕೃತವಾಯಿತು.

ಆಗಸ್ಟ್‌ನಲ್ಲಿ ನಿವೃತ್ತರಾಗಬೇಕಿದ್ದ ನ್ಯಾಯಾಧೀಶರು ಆಡಳಿತಾರೂಢ ಟಿಎಂಸಿ ಮತ್ತು ಅದರ ನಾಯಕ ಅಭಿಷೇಕ್ ಬ್ಯಾನರ್ಜಿ ವಿರುದ್ಧ ಪದೇ ಪದೇ ಕಟು ಪದಗಳನ್ನು ಬಳಸಿ ಟೀಕಿಸುತ್ತಿದ್ದರು. ಮಮತಾ ಬ್ಯಾನರ್ಜಿ ಸರ್ಕಾರದ ವಿರುದ್ಧ ಶಿಕ್ಷಕರ ನೇಮಕಾತಿ ಹಗರಣ ಸಂಬಂಧ ನ್ಯಾ. ಅಭಿಜಿತ್ ಗಂಗೋಪಾಧ್ಯಾಯ ಅವರು ಸಿಬಿಐ ತನಿಖೆಗೆ ಆದೇಶಿಸಿದ್ದರು. ಅಲ್ಲದೇ ಸರ್ಕಾರದ ವಿರುದ್ಧ ಪದೇ ಪದೇ ಚಾಟಿ ಬೀಸುತ್ತಿದ್ದರು. ಹೀಗಾಗಿ ಟಿಎಂಸಿ ವಕ್ತಾರರು ಸಕ್ರಿಯ ರಾಜಕೀಯಕ್ಕೆ ಇಳಿಯುವಂತೆ ಅವರಿಗೆ ಸವಾಲು ಹಾಕಿದ್ದರು

ನ್ಯಾಯಮೂರ್ತಿ ಗಂಗೋಪಾಧ್ಯಾಯ ಅವರು ಮೇ 2018 ರಲ್ಲಿ ಹೆಚ್ಚುವರಿ ನ್ಯಾಯಾಧೀಶರಾಗಿ ನೇಮಕಗೊಳ್ಳುವ ಮೊದಲು ಕೋಲ್ಕತ್ತಾ ಹೈಕೋರ್ಟ್‍ನಲ್ಲಿ ವಕೀಲರಾಗಿದ್ದರು. 2020 ರಲ್ಲಿ ಅವರು ಕೋಲ್ಕತ್ತಾ ಹೈಕೋರ್ಟ್‍ನ ಖಾಯಂ ನ್ಯಾಯಾಧೀಶರಾಗಿ ಬಡ್ತಿ ಪಡೆದರು.

ತೃಣಮೂಲ ಸರ್ಕಾರದ ಅಡಿಯಲ್ಲಿ ಪಶ್ಚಿಮ ಬಂಗಾಳವು ಕಳ್ಳರ ಸಾಮ್ರಾಜ್ಯ ಎಂದು ನಾನು ಹೇಳಿದ್ದೇನೆ. ಪಶ್ಚಿಮ ಬಂಗಾಳದ ಘನತೆ ಈಗ ಹಾಳಾಗುತ್ತಿದ್ದು, ಅದನ್ನು ಉಳಿಸಲು ಸಾಧ್ಯವೇ ಎನ್ನುವುದೇ ದೊಡ್ಡ ಪ್ರಶ್ನೆ. ರಾಜ್ಯದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ. ನ್ಯಾಯಾಲಯದ ಸಭಾಂಗಣದಿಂದ ಸಾಮಾನ್ಯ ಜನರನ್ನು ತಲುಪಲು ಸಾಧ್ಯವಾಗುತ್ತಿಲ್ಲ. ಬಂಗಾಳಿಯಾಗಿ ನಾನು ಈ ಅನ್ಯಾಯವನ್ನು ಒಪ್ಪಲಾರೆ. ದೊರೆಗಳಾಗಿ ಹೊರಹೊಮ್ಮಿದವರು ರಾಜ್ಯಕ್ಕೆ ಪ್ರಯೋಜನವಾಗುವಂತೆ ತೋರಲಿಲ್ಲ. ಸವಾಲು ಸ್ವೀಕರಿಸಿ ರಾಜೀನಾಮೆ ನೀಡುತ್ತಿದ್ದೇನೆ ಎಂದು ತಿಳಿಸಿದ್ದರು.

Share This Article
Facebook Whatsapp Whatsapp Telegram

Cinema news

Hansika Motwani Sohael Khaturiya
ಉದ್ಯಮಿ‌ ಸೊಹೇಲ್‌ ಜೊತೆಗಿನ 4 ವರ್ಷಗಳ ದಾಂಪತ್ಯ ಜೀವನಕ್ಕೆ ಅಂತ್ಯಹಾಡಿದ ‘ಬಿಂದಾಸ್‌’ ನಟಿ
Cinema Latest South cinema Top Stories
d53acfe5 1562 41db 9d81 d5b390041c73
ಪ್ರಿಯಕರ ಫರ್ಮಾನ್‌ ಖಾನ್‌ ಜೊತೆ ಕುಂಭಮೇಳದ ವೈರಲ್‌ ತಾರೆ ಮೊನಾಲಿಸಾ ಮದುವೆ
Cinema Latest Main Post
Monalisa Viral Video
ಮದುವೆಗೆ ಬಲವಂತ ಆರೋಪ; ಪೊಲೀಸ್‌ ಠಾಣೆ ಮೆಟ್ಟಿಲೇರಿದ ‘ಕುಂಭಮೇಳ ಚೆಲುವೆ’ ಮೊನಾಲಿಸಾ
Cinema Latest Main Post
Yelahanka House Theft Arrest
ಸಿನಿಮೀಯ ಶೈಲಿಯಲ್ಲಿ ಮನೆ ಕಳ್ಳತನ – 3.5 ಕೋಟಿ ಮೌಲ್ಯದ ಚಿನ್ನಾಭರಣ ಸೀಜ್
Bengaluru City Cinema Crime Karnataka Latest Top Stories

You Might Also Like

IndiGo Flight
Latest

ವಿಮಾನಯಾನಕ್ಕೂ ತಟ್ಟಿದ ಸಂಘರ್ಷದ ಎಫೆಕ್ಟ್‌ – ಇಂಡಿಗೋ ವಿಮಾನದಲ್ಲಿ ಇಂಧನ ಬೆಲೆ ನಿಗದಿ

Public TV
By Public TV
4 hours ago
WhatsApp Image 2026 03 13 at 9.50.51 PM
Districts

ಡಿಸಿಎಂ ಡಿಕೆಶಿ ಭೇಟಿಯಾದ ವೀರಪ್ಪನ್ ಪುತ್ರಿ ವಿದ್ಯಾರಾಣಿ

Public TV
By Public TV
4 hours ago
Auto LPG
Chamarajanagar

ಚಾ.ನಗರ: ಮಧ್ಯಪ್ರಾಚ್ಯ ಯುದ್ಧದ ಎಪೆಕ್ಟ್ – ಗ್ಯಾಸ್ ಇಲ್ಲದೇ ಬಂಕ್ ಕ್ಲೋಸ್

Public TV
By Public TV
4 hours ago
2 Indians Killed 10 Injured In Drone Strike In Oman
Latest

ಒಮಾನ್‌ನಲ್ಲಿ ಇರಾನ್ ಡ್ರೋನ್‌ ದಾಳಿ – ಇಬ್ಬರು ಭಾರತೀಯರು ಸಾವು, 11 ಮಂದಿಗೆ ಗಾಯ

Public TV
By Public TV
5 hours ago
Strait of Hormuz India Flagged Fuel Tanker
Latest

ಹಾರ್ಮುಜ್ ಪೂರ್ವದಿಂದ ಹೊರಟ ಭಾರತ ಧ್ವಜ ಹೊತ್ತ ಇಂಧನ ಟ್ಯಾಂಕರ್‌

Public TV
By Public TV
6 hours ago
byrati basavaraj release from jail
Bengaluru City

ಮಾಜಿ ಸಚಿವ ಬೈರತಿ ಬಸವರಾಜ್ ಜೈಲಿನಿಂದ ಬಿಡುಗಡೆ

Public TV
By Public TV
7 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?