ಸುಹಾಸ್ ಶೆಟ್ಟಿ ಹತ್ಯೆಯಂತೆಯೇ ಅಶ್ರಫ್, ರಹಿಮಾನ್ ಹತ್ಯೆಯನ್ನೂ ಎನ್‌ಐಎಗೆ ವಹಿಸಿ: ಮಂಜುನಾಥ ಭಂಡಾರಿ

Public TV
1 Min Read
Manjunath Bhandari

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಂದೂವರೆ ತಿಂಗಳಿನಿಂದೀಚೆಗೆ ನಡೆದಿರುವ ಮೂರು ಕೊಲೆ ಪ್ರಕರಣಗಳು (Murder) ಇಡೀ ಕರಾವಳಿಯಲ್ಲಿ ಆತಂಕಕ್ಕೆ ಕಾರಣವಾಗಿದೆ. ಈ ಕೊಲೆಗಳು ಒಂದಕ್ಕೊಂದು ಪ್ರತೀಕಾರದ ಕೊಲೆಯಾಗಿರುವ ಸಾಧ್ಯತೆಯಿದ್ದು, ಈ ಮೂರು ಪ್ರಕರಣಗಳನ್ನು ಕೂಡ ರಾಷ್ಟ್ರೀಯ ತನಿಖಾ ದಳ (NIA) ತನಿಖೆಗೆ ವಹಿಸಿದರೆ ದುಷ್ಜೃತ್ಯದ ಹಿಂದಿನ ಸತ್ಯ ಬಯಲಿಗೆ ಬರಲಿದೆ ಎಂದು ವಿಧಾನ ಪರಿಷತ್ ಶಾಸಕ, ಕೆಪಿಸಿಸಿ ಕಾರ್ಯಾಧ್ಯಕ್ಷ ಮಂಜುನಾಥ್ ಭಂಡಾರಿ (Manjunath Bhandari) ಪತ್ರಿಕಾ ಹೇಳಿಕೆಯಲ್ಲಿ ಒತ್ತಾಯಿಸಿದ್ದಾರೆ.

ಕೇಂದ್ರ ಗೃಹ ಇಲಾಖೆಯು ಬಜಪೆ ಕಿನ್ನಿಪದವಿನಲ್ಲಿ ನಡೆದ ಸುಹಾಸ್ ಶೆಟ್ಟಿ (Suhas Shetty) ಕೊಲೆ ಪ್ರಕರಣವನ್ನು ಎನ್‌ಐಎಗೆ ವಹಿಸಿದೆ. ಇದೇ ಮಾದರಿಯಲ್ಲಿ ಕುಡುಪುವಿನಲ್ಲಿ ಏ.27ರಂದು ಅಶ್ರಫ್ (Ashraf) ಎಂಬಾತನನ್ನು ಗುಂಪು ಹತ್ಯೆ ಮಾಡಲಾಗಿದೆ. ಇದಾದ ಬಳಿಕ ಬಜಪೆ ಕಿನ್ನಿಪದವಿನಲ್ಲಿ ಮೇ 1ರಂದು ಸುಹಾಸ್ ಶೆಟ್ಟಿ ಕೊಲೆ ನಡೆದರೆ, ಈ ಘಟನೆ ನಡೆದ ಕೆಲವೇ ದಿನದ ಬಳಿಕ ಮೇ 27ರಂದು ಕುರಿಯಾಳ ಕಾಂಬೋಡಿ ಬಳಿ ಅಬ್ದುಲ್ ರಹಿಮಾನ್ (Abdul Rahiman) ಕೊಲೆಯಾಗಿದೆ ಎಂದು ಹೇಳಿದ್ದಾರೆ.

Abdul Rahim Murder

ಈ ಮೂರು ಪ್ರಕರಣಗಳು ಒಂದಕ್ಕೊಂದು ಪ್ರತೀಕಾರದ ಕೊಲೆಯಾಗಿರುವ ಸಾಧ್ಯತೆಯಿದ್ದು, ಈ ಹಿನ್ನಲೆಯಲ್ಲಿ ಕೇಂದ್ರ ಸರಕಾರ ಒಂದು ಕಣ್ಣಿಗೆ ಬೆಣ್ಣೆ, ಒಂದು ಕಣ್ಣಿಗೆ ಸುಣ್ಣ ಬಳಿಯುವ ಬದಲು ಮೂರು ಪ್ರಕರಣಗಳನ್ನು ಎನ್‌ಐಎಗೆ ವಹಿಸಲಿ. ಆಗ ಇಡೀ ಕರಾವಳಿಯ ಕೋಮು ಸಂಘರ್ಷದ ಜಾಲ ಬಯಲಾಗಲಿದೆ. ನಾಗರಿಕರಿಗೂ ಇದರ ಹಿಂದಿರುವ ಸತ್ಯವನ್ನು ಅರಿಯಬಹುದಾಗಿದೆ. ಈ ಕಾರಣದಿಂದ ಕೇಂದ್ರ ಸರಕಾರ ಮೂರು ಪ್ರಕರಣವನ್ನು ಎನ್‌ಐಎಗೆ ವಹಿಸಬೇಕಾದ ಅಗತ್ಯವಿದೆ ಆಗ್ರಹಿಸಿದ್ದಾರೆ.

Share This Article