ನವದೆಹಲಿ: ಆಪಲ್ ಐಫೋನ್ ಎಕ್ಸ್ 64 ಜಿಬಿ ಆಂತರಿಕ ಮೆಮೊರಿಯ ಫೋನಿಗೆ ಭಾರತದಲ್ಲಿ 89 ಸಾವಿರ ರೂ. ಇದೆ. ಆದರೆ ಈ ಫೋನಿನ ನಿಜವಾದ ಬೆಲೆ 23,300 ರೂ. ಅಂತೆ.
ಟೆಕ್‍ಸೈಟ್ ಸಂಸ್ಥೆಯೊಂದು ಐಫೋನ್ ಎಕ್ಸ್ ಗೆ ಬಳಕೆ ಮಾಡಿದ ಹಾರ್ಡ್ ವೇರ್ ಭಾಗಗಳಿಗೆ ತಗಲುವ ವೆಚ್ಚವನ್ನು ಲೆಕ್ಕಹಾಕಿ ಈ ಮಾಹಿತಿಯನ್ನು ಪ್ರಕಟಿಸಿದೆ.
Advertisement
ಐಫೋನ್ ಎಕ್ಸ್ ನಿರ್ಮಾಣಕ್ಕೆ 357.50 ಡಾಲರ್(ಅಂದಾಜು 23,200 ರೂ.) ಆಗಿದೆ. ಆದರೆ ಮಾರುಕಟ್ಟೆಯಲ್ಲಿ ಈ ಫೋನಿನ ಬೆಲೆ 999 ಡಾಲರ್(ಅಂದಾಜು 64,800 ರೂ.) ಆಗಿದೆ ಎಂದು ಟೆಕ್‍ಸೈಟ್ ವರದಿ ಮಾಡಿದೆ.
Advertisement
ಯಾವುದಕ್ಕೆ ಎಷ್ಟು?
ಐಫೋನ್ ಎಕ್ಸ್ ನಲ್ಲಿ ಬಳಸಲಾದ 5.8 ಇಂಚಿನ ಎಡ್ಜ್- ಟು- ಎಡ್ಜ್ ಡಿಸ್ಪ್ಲೇಗೆ 65.50 ಡಾಲರ್ (ಅಂದಾಜು 4,300 ರೂ.) ಆದರೆ ಐಫೋನ್ 8 ರಲ್ಲಿ ಬಳಕೆಯಾಗಿರುವ 4.7 ಇಂಚಿನ ಡಿಸ್ಪ್ಲೇಗೆ 36 ಡಾಲರ್(2,300 ರೂ.) ಆಗಿದೆ ಎಂದು ಟೈಕ್ ಸೈಟ್ ಹೇಳಿದೆ.
Advertisement
ಐಫೋನ್ 8 ರಲ್ಲಿ ಹಳೆಯ ಎಲ್‍ಸಿಡಿ ಟೆಕ್ನಾಲಜಿ ಬಳಕೆ ಆಗಿದ್ದರೆ ಐಫೋನ್ ಎಕ್ಸ್ ನಲ್ಲಿ ಸೂಪರ್ ಅಮೊಲೆಡ್ ಟೆಕ್ನಾಲಜಿ ಬಳಕೆಯಾದ ಕಾರಣ ದರ ಹೆಚ್ಚಾಗಿದೆ ಎಂದು ತಿಳಿಸಿದೆ.
Advertisement
ಐಫೋನ್ ಎಕ್ಸ್ ನಲ್ಲಿ ಬಳಕೆಯಾಗಿರುವ ಸ್ಟೈನ್‍ಲೆಸ್ ಸ್ಟೀಲ್ ಚಾಸಿಗೆ 36 ಡಾಲರ್(ಅಂದಾಜು 2,300 ರೂ.) ಇದ್ದರೆ, ಐಫೋನ್ 8ರಲ್ಲಿ ಬಳಕೆಯಾಗಿರುವ ಆಲ್ಯೂಮಿನಿಯಂ ದೇಹ ನಿರ್ಮಾಣಕ್ಕೆ 21.50 ಡಾಲರ್(ಅಂದಾಜು 1,400 ರೂ.) ಖರ್ಚಾಗುತ್ತದೆ ಎಂದು ಹೇಳಿದೆ.
ಟೈಕ್ ಸೈಟ್ ಈ ಐಫೋನ್ ಎಕ್ಸ್ ವರದಿಗೆ ಸಂಬಂಧಿಸಿದಂತೆ ಆಪಲ್ ಪ್ರತಿಕ್ರಿಯೆ ನೀಡಲು ನಿರಾಕರಿಸಿದೆ.
ಇದನ್ನೂ ಓದಿ: ಭಾರತದಲ್ಲಿ ಐಫೋನ್‍ಗೆ 58 ಸಾವಿರ ರೂ. ಇದ್ದರೆ, 32 ದೇಶಗಳಲ್ಲಿ ಎಷ್ಟು ಬೆಲೆಗೆ ಮಾರಾಟವಾಗುತ್ತಿದೆ?
https://youtu.be/K4wEI5zhHB0