ಐಸ್‌ಕ್ರೀಮ್ ಎಲ್ಲರಿಗೂ ಇಷ್ಟ. ಆದರೆ ಅದನ್ನು ಆರೋಗ್ಯಕರ ರೀತಿಯಲ್ಲಿ ಮಾಡೋ ವಿಧಾನವೂ ಇದೆ ಎಂದರೆ ನಂಬುತ್ತೀರಾ? ನಾವಿಂದು ಆರೋಗ್ಯಕ್ಕೆ ಹಿತವೆನಿಸುವ ಅಂಜೂರದ ಐಸ್‌ಕ್ರೀಮ್ ರೆಸಿಪಿಯನ್ನು ಹೇಳಿಕೊಡಲಿದ್ದೇವೆ. ಇದಕ್ಕೆ ಕಂಡೆನ್ಸ್‌ಡ್ ಮಿಲ್ಕ್ ಬೇಡ ಹಾಗೂ ಸಕ್ಕರೆ ಕಡಿಮೆ ಬೆಳಕೆಯಾಗುವುದರಿಂದ ಇದು ಆರೋಗ್ಯಕ್ಕೂ ಉತ್ತಮವೆನಿಸುತ್ತದೆ. ಕೇವಲ ನಾಲ್ಕೇ ಪದಾರ್ಥ ಬಳಸಿ ನೀವೂ ಕೂಡಾ ಸಖತ್ ರುಚಿಯಾದ ಅಂಜೂರದ ಐಸ್‌ಕ್ರೀಮ್ ಟ್ರೈ ಮಾಡಿ ನೋಡಿ.
Advertisement
ಬೇಕಾಗುವ ಪದಾರ್ಥಗಳು:
ಒಣ ಅಂಜೂರ – ಅರ್ಧ ಕಪ್
ದನದ ಹಾಲು – ಒಂದು ಮುಕ್ಕಾಲು ಕಪ್
ಸಕ್ಕರೆ ಪುಡಿ – 1 ಟೀಸ್ಪೂನ್
ಹಾಲಿನ ಪುಡಿ – 2 ಟೀಸ್ಪೂನ್ ಇದನ್ನೂ ಓದಿ: ಟ್ರಾವೆಲ್ ಮಾಡೋವಾಗ ಯಾವಾಗ್ಲೂ ಇಟ್ಟುಕೊಂಡಿರಿ ಚಾಕ್ಲೇಟ್ ಕಾಫಿ ಎನರ್ಜಿ ಬೈಟ್ಸ್
Advertisement
Advertisement
ಮಾಡುವ ವಿಧಾನ:
* ಮೊದಲಿಗೆ ಒಂದು ನಾನ್‌ಸ್ಟಿಕ್ ಪ್ಯಾನ್‌ನಲ್ಲಿ ಮುಕ್ಕಾಲು ಕಪ್ ಹಾಲು ಹಾಗೂ ಒಣ ಅಂಜೂರ ಹಾಕಿ ಮಧ್ಯಮ ಉರಿಯಲ್ಲಿ ಕೈ ಆಡಿಸುತ್ತಾ ಸುಮಾರು 6-7 ನಿಮಿಷಗಳ ಕಾಲ ಬೇಯಿಸಿಕೊಳ್ಳಿ.
* ಈ ಮಿಶ್ರಣವನ್ನು ಸಂಪೂರ್ಣ ತಣ್ಣಗಾಗಿಸಿ, ಬಳಿಕ ಒಂದು ಬ್ಲೆಂಡರ್‌ಗೆ ಹಾಕಿ ನುಣ್ಣಗೆ ರುಬ್ಬಿಕೊಳ್ಳಿ.
* ಒಂದು ತಳವಿರುವ ಪಾತ್ರೆಗೆ ಈ ಮಿಶ್ರಣ ಹಾಕಿ, ಉಳಿದ 1 ಕಪ್ ಹಾಲು, ಸಕ್ಕರೆ ಪುಡಿ ಹಾಗೂ ಹಾಲಿನ ಪುಡಿ ಸೇರಿಸಿ ಚೆನ್ನಾಗಿ ವಿಸ್ಕ್ ಮಾಡಿ.
* ಪಾತ್ರೆಯನ್ನು ಅಲ್ಯುಮಿನಿಯಂ ಫಾಯಿಲ್‌ನಿಂದ ಮುಚ್ಚಿ, ಸುಮಾರು 6 ಗಂಟೆಗಳ ಕಾಲ ಫ್ರೀಜರ್‌ನಲ್ಲಿಡಿ.
* ಈಗ ಮತ್ತೆ ಮಿಶ್ರಣವನ್ನು ಬ್ಲೆಂಡರ್‌ಗೆ ವರ್ಗಾಯಿಸಿ, ನಯವಾಗಿ ರುಬ್ಬಿಕೊಳ್ಳಿ.
* ಮತ್ತೆ ಈ ಮಿಶ್ರಣವನ್ನು ಪಾತ್ರೆಗೆ ವರ್ಗಾಯಿಸಿ, ಸುಮಾರು 10 ಗಂಟೆಗಳ ಕಾಲ, ಐಸ್‌ಕ್ರೀಮ್ ಗಟ್ಟಿಯಾಗುವವರೆಗೆ ಫ್ರೀಜರ್‌ನಲ್ಲಿಡಿ.
* ಇದೀಗ ಹೆಲ್ತಿ ಅಂಜೂರದ ಐಸ್‌ಕ್ರೀಮ್ ತಯಾರಾಗಿದ್ದು, ಮನೆ ಮಂದಿಗೆ ಸವಿಯಲು ನೀಡಿ. ಇದನ್ನೂ ಓದಿ: ಗರಿಗರಿಯಾದ ಕಾರ್ನ್ ಪಕೋಡಾ ಸವಿಯಲು ತುಂಬಾ ಮಜಾ