ಬೆಂಗಳೂರು: ಗ್ರಿಲ್ ಹಾಕಿದ್ದರಿಂದ ಇಬ್ಬರು ಬೆಂಕಿಗೆ ಬಲಿಯಾಗಿದ್ದಾರೆ ಎಂದು ಅಪಾರ್ಟ್‍ಮೆಂಟ್ ಮಹಿಳಾ ನಿವಾಸಿ ತಿಳಿಸಿದ್ದಾರೆ.
Advertisement
ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಮೊದಲು ಅಪಾರ್ಟ್‍ಮೆಂಟ್ ನನ್ನು ನೋಡಿಕೊಳ್ಳುವವರು ಅಗ್ನಿ ದುರಂತವನ್ನು ತಡೆಯಲು ಫೈರ್ ಎಕ್ಸಟೆನ್ಶನ್ ಇಟ್ಟುಕೊಳ್ಳಬೇಕು. ಅದು ಖಾಲಿಯಾಗುತ್ತಿದಂತೆ ತುಂಬಿಸಬೇಕು. ಅದನ್ನು ನೋಡಿಕೊಳ್ಳಲು ವಿಭಾಗ ಇರಬೇಕು. ಆದರೆ ಇಲ್ಲಿ ಯಾವುದೇ ರೀತಿಯ ಮುಂಜಾಗರುಕತೆ ಇಲ್ಲದೆ ಇರುವುದನ್ನು ನಾವು ನೋಡಬಹುದು. ಇಲ್ಲಿರುವ ಅಪಾರ್ಟ್‍ಮೆಂಟ್‍ಗಳಿಗೆ ಅದರ ಪರಿವೇ ಇಲ್ಲ ಎಂಬುದನ್ನು ನಾವು ಈ ದುರಂತದ ಮೂಲಕ ನೋಡಬಹುದು ಎಂದರು. ಇದನ್ನೂ ಓದಿ: ಅಂಗನವಾಡಿ ಪಡಿತರ ಅಕ್ಕಿಯಲ್ಲಿ ಪ್ಲಾಸ್ಟಿಕ್ ಮಿಕ್ಸ್
Advertisement
Advertisement
ಇದು 4 ಮಹಡಿಗಳಿರುವ ಅಪಾರ್ಟ್‍ಮೆಂಟ್. ಆದರೆ ನಮ್ಮ ಬೆಂಗಳೂರಿನಲ್ಲಿ 10-20 ಮಹಡಿಗಳಿರುವ ಅಪಾರ್ಟ್‍ಮೆಂಟ್ ಗಳಿರುತ್ತೆ. ಅಂತಹ ಅಪಾರ್ಟ್‍ಮೆಂಟ್ ಗಳಲ್ಲಿ ಈ ರೀತಿಯ ಅವಘಡ ಸಂಭವಿಸಿದರೆ ರಕ್ಷಿಸಲು ಸಾಧ್ಯವೇ ಎಂದು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ಅಮೆರಿಕದಲ್ಲಿ ಕೋವಿಡ್ 19, ಭಯೋತ್ಪಾದನೆ, ಹವಾಮಾನ ವೈಪರೀತ್ಯ ಬಗ್ಗೆ ಮಾತನಾಡುತ್ತೇನೆ – ಮೋದಿ
Advertisement
ನಮಗೆ 3ನೇ ಮಹಡಿಯಲ್ಲಿ ಇದ್ದ ಮಹಿಳೆಯನ್ನು ಉಳಿಸಿಕೊಳ್ಳಲು ಆಗಲಿಲ್ಲ. ಅದು ಅಲ್ಲದೇ ಇದು ಅವರೇ ತಂದುಕೊಂಡ ಆಪತ್ತು. ಏಕೆಂದರೆ ಅವರ ಮನೆಯು ಗ್ರಿಲ್‍ನಲ್ಲಿ ಪೂರ್ತಿಯಾಗಿ ಮುಚ್ಚಿಕೊಂಡಿದ್ದೆ ಈ ಘಟನೆಗೆ ಕಾರಣವಾಯಿತು. ಕೆಲವೊಂದು ಕಡೆ ಗ್ರಿಲ್ ನನ್ನು ಓಪನ್ ಮಾಡಲು ಅವಕಾಶಗಳಿವೆ. ಆದರೆ ಅಪಘಾತವಾದ ಮನೆಯಲ್ಲಿ ಆ ರೀತಿ ಅವಕಾಶಗಳಿಲ್ಲ. ಹೀಗಾಗಿ ಇಬ್ಬರು ಮೃತಪಟ್ಟಿದ್ದಾರೆ ಎಂದು ತಿಳಿಸಿದರು.