ಮಡಿಕೇರಿ: ರಾಜ್ಯದಲ್ಲಿ ಪ್ರಾದೇಶಿಕ ಪಕ್ಷಗಳು ಗಟ್ಟಿಗೊಳ್ಳಬೇಕು. ಎರಡು ರಾಷ್ಟ್ರೀಯ ಪಕ್ಷಗಳ ಮುಂದೆ ಭಿಕ್ಷೆ ಬೇಡುವ ಹೈಕಮಾಂಡ್ ಸಂಸ್ಕೃತಿ ತೊಲಗಬೇಕು. ಚುನಾವಣೆ ಬಳಿಕ ರಾಜ್ಯದಲ್ಲಿ ಅತಂತ್ರ ನಿರ್ಮಾಣವಾಗಬಹುದು. ಆಗ ಬಿಜೆಪಿ ಜೊತೆ ಜೆಡಿಎಸ್ ಕೈ ಜೋಡಿಸದೆ ನೈತಿಕತೆಯನ್ನು ಉಳಿಸಿಕೊಳ್ಳಬೇಕು ಎಂದು ಬಹುಭಾಷಾ ನಟ ಪ್ರಕಾಶ್ ರೈ ಮನವಿ ಮಾಡಿದ್ದಾರೆ.
ಮಡಿಕೇರಿಯಲ್ಲಿ ಆಯೋಜಿಸಲಾಗಿದ್ದ ಮಾಧ್ಯಮ ಸಂವಾದ ಕಾರ್ಯಕ್ರಮದಲ್ಲಿ ಮಾತಾನಾಡಿದ ಅವರು, ಜಸ್ಟ್ ಆಸ್ಕಿಂಗ್ ಎನ್ನುವುದು ರಾಜಕೀಯ ವೇದಿಕೆಯಲ್ಲ ರಾಜಕೀಯ ಪಕ್ಷಗಳು ಅಲ್ಪ ಸಂಖ್ಯಾತ ಗುಂಪಿನಲ್ಲಿವೆ, ಪ್ರಶ್ನಿಸುವ ಜನರು ಬಹುಸಂಖ್ಯೆಯಲ್ಲಿದ್ದಾರೆ. ನಾನು ಬಹುಸಂಖ್ಯಾತರ ಪರವಾಗಿ ಪ್ರಶ್ನಿಸಿ ಸಾಮಾನ್ಯನಾಗಿ ಇರುತ್ತೇನೆ. ರಾಜಕೀಯಕ್ಕೆ ಪ್ರವೇಶಿಸಿ ಎಂಎಲ್‍ಎ, ಎಂಪಿ ಆಗುವ ಮೂಲಕ ಸಣ್ಣ ಬಾವಿಗೆ ಬೀಳಲಾರೆ. ಸಾಗರದಂತಿರುವ ಜನರ ಬಳಿಯೇ ನಾನು ಸದಾ ಇರಲು ಇಚ್ಚೆಪಡುತ್ತೇನೆ ಎಂದು ಹೇಳಿದ್ದಾರೆ.
Advertisement
Advertisement
ಬೆಂಗಳೂರಿನಲ್ಲಿ ನಡೆದ ಗೌರಿ ಲಂಕೇಶ್ ಹತ್ಯೆ ನನ್ನನ್ನು ಪ್ರಶ್ನೆ ಕೇಳುವಂತೆ ಪ್ರೇರಣೆ ನೀಡಿತು. ಆಕೆಯ ಹತ್ಯೆಯನ್ನು ಒಂದು ವರ್ಗದ ಜನರು ಸಂಭ್ರಮ ಆಚರಿಸಿ ಖುಷಿಪಟ್ಟರು. ಬಿಜೆಪಿಯ ಈ ನಡೆಯನ್ನು ಪ್ರಧಾನಿ ಮೋದಿ ತಡೆಯದೆ ಸುಮ್ಮನಿದ್ದರು. ಹಾಗಾಗಿ ನಾನು ಮೊದಲು ಪ್ರಧಾನಿ ಮೋದಿಯನ್ನ ವಿರೋಧಿಸಿದೆ. ನಾನು ಅನ್ಯಾಯವನ್ನು ನಿರಂತರವಾಗಿ ಪ್ರಶ್ನೆ ಮಾಡುತ್ತಲೇ ಇರುತ್ತೇನೆ. ಅಲ್ಲದೇ ಕೋಮುವಾದ ತಡೆಯಲು ಬಿಜೆಪಿ ವಿಫಲವಾಗುತ್ತಿದೆ. ಹಾಗಾಗೀ ನಾನು ಬಿಜೆಪಿಯನ್ನು ವಿರೋಧಿಸುತ್ತೇನೆ ಎಂದು ತಿಳಿಸಿದರು.
Advertisement
ಕಾವೇರಿ ಸತ್ಯ ಬಹಿರಂಗ: ಕಾವೇರಿ ವಿಚಾರವಾಗಿ ಎರಡು ತಿಂಗಳಲ್ಲಿ ಸತ್ಯವನ್ನು ಬಹಿರಂಗ ಮಾಡುತ್ತೇನೆ. ಈ ವಿಚಾರದಲ್ಲಿ ಎರಡು ರಾಜ್ಯದ ಜನಪ್ರತಿನಿಧಿಗಳು ಎರಡು ರಾಜ್ಯದ ಜನರಿಗೆ ಮೋಸ ಮಾಡಿದ್ದಾರೆ. ಪ್ರಕೃತಿಯನ್ನು ಬದಲಾವಣೆ ಮಾಡಬೇಡಿ. ಪ್ರವೃತ್ತಿಯನ್ನು ಬದಲಾವಣೆ ಮಾಡಿಕೊಳ್ಳಿ ಎಂದು ಸಲಹೆ ನೀಡುತ್ತೇನೆ ಎಂದರು.
Advertisement
ಪ್ರಾದೇಶಿಕ ಪಕ್ಷ ಅಗತ್ಯ: ನಮ್ಮ ರಾಜ್ಯದಲ್ಲಿ ಪ್ರಾದೇಶಿಕ ಪಕ್ಷಗಳು ಗಟ್ಟಿಗೊಳ್ಳಬೇಕು. ಎರಡು ರಾಷ್ಟ್ರೀಯ ಪಕ್ಷಗಳ ಮುಂದೆ ಭಿಕ್ಷೆ ಬೇಡುವ ಹೈಕಮಾಂಡ್ ಸಂಸ್ಕೃತಿ ತೊಲಗಬೇಕು. ಚುನಾವಣೆ ಬಳಿಕ ರಾಜ್ಯದಲ್ಲಿ ಅತಂತ್ರ ಸ್ಥಿತಿ ನಿರ್ಮಾಣವಾಗಬಹುದು. ಆಗ ಬಿಜೆಪಿ ಜೊತೆ ಜೆಡಿಎಸ್ ಕೈ ಜೋಡಿಸದೆ ನೈತಿಕತೆಯನ್ನು ಉಳಿಸಿಕೊಳ್ಳಬೇಕು ಎಂದು ಮನವಿ ಮಾಡಿದರು.
ಟಿಪ್ಪು ಜಯಂತಿ ಜನಭಿಪ್ರಾಯ: ಕೊಡಗಿನಲ್ಲಿ ಟಿಪ್ಪು ಜಯಂತಿ ಆಚರಣೆ ವಿಚಾರದ ಬಗ್ಗೆ ಮಾತಾನಾಡಿದ ಅವರು ಜಿಲ್ಲೆಯಲ್ಲಿ ಮುಂದಿನ ದಿನಗಳಲ್ಲಿ ಟಿಪ್ಪು ಜಯಂತಿ ಆಚರಣೆ ಬಗ್ಗೆ ಜನಾಭಿಪ್ರಾಯ ಸಂಗ್ರಹಿಸುತ್ತೇನೆ. ಎಲ್ಲಾ ವರ್ಗದ ಜನರನ್ನು ಗಣನೆಗೆ ತೆಗೆದುಕೊಂಡು ಚರ್ಚೆ ಮಾಡುತ್ತೇನೆ. ಜಯಂತಿ ಆಚರಣೆ ಸಂದರ್ಭ ಚರ್ಚಿಸುವುದಕ್ಕಿಂದ 6 ತಿಂಗಳು ಮುಂಚೆ ಚರ್ಚೆ ಆಗಬೇಕು. ಟಿಪ್ಪು ಜಯಂತಿ ನೆಪದಲ್ಲಿ ಎರಡು ರಾಷ್ಟ್ರೀಯ ಪಕ್ಷಗಳು ರಾಜಕೀಯ ಮಾಡುತ್ತಿದೆ. ಜಿಲ್ಲೆಯ ಸಮಸ್ಯೆಗಳ ಚರ್ಚೆಗೆ ಜಸ್ಟ್ ಆಸ್ಕಿಂಗ್ ವೇದಿಕೆಯಾಗುತ್ತೆ ಎಂದು ತಿಳಿಸಿದ್ದರು.