ಸಿಹಿ ಬೇಕು ಎನ್ನುವವರಲ್ಲಿ ವಯಸ್ಸಿನ ಮಿತಿಯಿಲ್ಲ. ಪುಟ್ಟ ಮಕ್ಕಳಿಂದ ಹಿಡಿದು ಹಿರಿಯರವರೆಗೂ ಸಿಹಿ ತಿನಿಸನ್ನು ಹೆಚ್ಚಿನವರು ಇಷ್ಟಪಡುತ್ತಾರೆ. ಮಾತ್ರವಲ್ಲದೇ ಸಿಹಿ ಸವಿಯಬೇಕೆಂದು ಯಾವ ಸಮಯದಲ್ಲೂ ಎನಿಸಬಹುದು. ಅಂತಹವರಿಗಾಗಿ ಕ್ವಿಕ್ ಆಗಿ ತಯಾರಿಸಬಹುದಾದ ರೆಸಿಪಿಯನ್ನು ಹೇಳಿಕೊಡುತ್ತೇವೆ. ಸಿಹಿ ಸವಿಯಬೇಕೆನಿಸಿದಾಗ ಸಿಂಪಲ್ ಆಗಿ ಪೈನಾಪಲ್ ರವಾ ಕೇಸರ್ ನೀವು ಕೂಡಾ ಮಾಡಿ, ಮನೆ ಮಂದಿಗೂ ಹಂಚಿ.
Advertisement
ಬೇಕಾಗುವ ಪದಾರ್ಥಗಳು:
ರವೆ – ಅರ್ಧ ಕಪ್
ಸಕ್ಕರೆ – ಅರ್ಧ ಕಪ್
ನೀರು – 1 ಕಪ್
ತುಪ್ಪ – 2 ಟೀಸ್ಪೂನ್
ಏಲಕ್ಕಿ – ಕಾಲು ಟೀಸ್ಪೂನ್
ಕೇಸರಿ – ಕೆಲವು ಎಳೆಗಳು
ಸಣ್ಣಗೆ ಹೆಚ್ಚಿದ ಅನನಾಸ್ – ಕಾಲು ಕಪ್
ಬೆಚ್ಚಗಿನ ಹಾಲು – 2 ಟೀಸ್ಪೂನ್
ಹೆಚ್ಚಿದ ಗೋಡಂಬಿ, ಬಾದಾಮಿ – 1 ಟೀಸ್ಪೂನ್
ಒಣ ದ್ರಾಕ್ಷಿ – 2 ಟೀಸ್ಪೂನ್
ಆಹಾರ ಬಣ್ಣ – ಚಿಟಿಕೆ ಇದನ್ನೂ ಓದಿ: ನಾಲ್ಕೇ ಪದಾರ್ಥ ಬಳಸಿ ಮಾಡಿ ಸಿಹಿಯಾದ ಚಾಕ್ಲೇಟ್ ಮೈಸೂರ್ ಪಾಕ್
Advertisement
Advertisement
ಮಾಡುವ ವಿಧಾನ:
* ಮೊದಲಿಗೆ ಬೆಚ್ಚಗಿನ ಹಾಲಿನಲ್ಲಿ ಕೇಸರಿ ಎಳೆಗಳನ್ನು ನೆನೆಸಿ.
* ಒಂದು ಪಾತ್ರೆಯಲ್ಲಿ ನೀರು ಹಾಕಿ ಅದರಲ್ಲಿ ಅನನಾಸ್ ತುಂಡುಗಳನ್ನು ಕುದಿಸಿ.
* ಬಾಣಲೆಯಲ್ಲಿ ತುಪ್ಪ ಬಿಸಿ ಮಾಡಿ, ಅದರಲ್ಲಿ ಗೋಡಂಬಿ, ಬಾದಾಮಿ ಹಾಗೂ ಒಣ ದ್ರಾಕ್ಷಿಗಳನ್ನು ಹುರಿದು, ಒಂದು ಬೌಲ್‌ಗೆ ವರ್ಗಾಯಿಸಿ.
* ಪ್ಯಾನ್ ಅನ್ನು ಬಿಸಿಗೆ ಇಟ್ಟು, ಅದರಲ್ಲಿ ಕಡಿಮೆ ಉರಿಯಲ್ಲಿ ರವೆಯನ್ನು 5-6 ನಿಮಿಷಗಳ ಕಾಲ ಹುರಿಯಿರಿ.
* ಏಲಕ್ಕಿ, ಕೇಸರಿ ಹಾಲು, ಅನನಾಸ್ ಅನ್ನು ಕುದಿಸಿದ ನೀರು ಹಾಗೂ ಆಹಾರ ಬಣ್ಣವನ್ನು ಸೇರಿಸಿ. ಉಂಡೆಗಳಾಗುವುದನ್ನು ತಪ್ಪಿಸಲು ಬಿಸಿ ನೀರನ್ನು ಸುರಿಯುವಾಗ ಬೆರೆಸಿಕೊಳ್ಳಿ. ಅದನ್ನು 1 ನಿಮಿಷ ಬೇಯಿಸಿ.
* ನಂತರ ಸಕ್ಕರೆ ಸೇರಿಸಿ, ಚೆನ್ನಾಗಿ ಬೆರೆಸಿ ಮತ್ತು 2 ನಿಮಿಷ ಬೇಯಿಸಿ.
* ತುಪ್ಪ ಸಮೇತ ಹುರಿದ ಒಣ ಬೀಜಗಳನ್ನು ಅದಕ್ಕೆ ಸೇರಿಸಿ, ಚೆನ್ನಾಗಿ ಮಿಶ್ರಣ ಮಾಡಿ.
* ಇದೀಗ ಸಿಂಪಲ್ ಪೈನಾಪಲ್ ರವಾ ಕೇಸರ್ ತಯಾರಾಗಿದ್ದು, ಬಿಸಿ ಅಥವಾ ತಣ್ಣಗಾದ ಬಳಿಕ ಸವಿಯಿರಿ. ಇದನ್ನೂ ಓದಿ: ಸಿಂಪಲ್ ಸ್ಟ್ರಾಬೆರಿ ಕಪ್‌ಕೇಕ್ ಹೀಗೆ ಮಾಡಿ