ನವದೆಹಲಿ: ಕೇವಲ 2 ಗಂಟೆಯ ಭೇಟಿಗಾಗಿ ಯುಎಇ ಅಧ್ಯಕ್ಷ ಶೇಖ್ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ (Sheikh Mohamed bin Zayed Al Nahyan) ಅವರು ಭಾರತಕ್ಕೆ ಆಗಮಿಸಿ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರ ಜೊತೆ ಮಾತುಕತೆ ನಡೆಸಿದ್ದಾರೆ.
ಹೌದು. ಸಾಧಾರಣವಾಗಿ ಯಾವುದೇ ದೇಶದ ಮುಖ್ಯಸ್ಥರು ಭಾರತಕ್ಕೆ ಬಂದರೆ 1 -2 ದಿನ ಇರುತ್ತಾರೆ ಅಥವಾ ಬೆಳಗ್ಗೆ ಬಂದು ರಾತ್ರಿ ತೆರಳುತ್ತಾರೆ. ಅದರೇ ಕೇವಲ 2 ಗಂಟೆಗಾಗಿ ಯುಎಇ ಅಧ್ಯಕ್ಷರು ಭಾರತಕ್ಕೆ ಬಂದು ತೆರಳಿರುವುದು ಅಪರೂಪದಲ್ಲಿ ಅಪರೂಪ.
Went to the airport to welcome my brother, His Highness Sheikh Mohamed bin Zayed Al Nahyan, President of the UAE. His visit illustrates the importance he attaches to a strong India-UAE friendship. Looking forward to our discussions.@MohamedBinZayed pic.twitter.com/Os3FRvVrBc
— Narendra Modi (@narendramodi) January 19, 2026
ಯಾವ ವಿಚಾರದ ಬಗ್ಗೆ ಚರ್ಚೆ?
ಮೂಲಗಳ ಪ್ರಕಾರ ಸದ್ಯ ಮಧ್ಯಪ್ರಾಚ್ಯದಲ್ಲಿ ಭಾರೀ ಬಿಕ್ಕಟ್ಟು ಸಂಭವಿಸಿದೆ. ಒಂದು ಕಡೆ ಇರಾನ್ (Iran) ವಿರುದ್ಧ ಅಮೆರಿಕ (USA) ತಿರುಗಿ ಬಿದ್ದಿದೆ. ತನ್ನ ಮೇಲೆ ದಾಳಿ ನಡೆಸಿದರೆ ಅಮೆರಿಕದ ವಿರುದ್ಧ ತಾನು ದಾಳಿ ನಡೆಸುವುದಾಗಿ ಇರಾನ್ ಎಚ್ಚರಿಕೆ ನೀಡಿದೆ. ಇನ್ನೊಂದು ಕಡೆ ಯೆಮೆನ್ ವಿಚಾರದಲ್ಲಿ ಸೌದಿ ಅರೇಬಿಯಾ ಮತ್ತು ಯುಎಇ ಮಧ್ಯೆ ಉದ್ವಿಗ್ನತೆ ಹೆಚ್ಚಾಗಿದೆ. ಇದನ್ನೂ ಓದಿ: ಶಿಷ್ಟಾಚಾರ ಮುರಿದು ವಿಮಾನ ನಿಲ್ದಾಣಕ್ಕೆ ತೆರಳಿ ಯುಎಇ ಅಧ್ಯಕ್ಷರನ್ನು ಸ್ವಾಗತಿಸಿದ ಮೋದಿ
VIDEO | Prime Minister Narendra Modi (@narendramodi) receives UAE President Sheikh Mohamed bin Zayed Al Nahyan at Delhi airport.
(Source: Third Party)
(Full video available on PTI Videos – https://t.co/n147TvqRQz) pic.twitter.com/fXgWRFlWrB
— Press Trust of India (@PTI_News) January 19, 2026
ಸಂಜೆ ದೆಹಲಿಯ ಪಾಲಂ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಅಲ್ ನಹ್ಯಾನ್ ಅವರನ್ನು ಮೋದಿಯೇ ಖುದ್ದು ಸ್ವಾಗತಿಸಿದರು. ಬಳಿಕ ಮೋದಿ ಮತ್ತು ಅಲ್ ನಹ್ಯಾನ್ ಜೊತೆಯಾಗಿ ಕಾರಿನಲ್ಲಿ ಕುಳಿತು ಲೋಕಕಲ್ಯಾಣ್ ಮಾರ್ಗದಲ್ಲಿರುವ ಪ್ರಧಾನಿ ನಿವಾಸಕ್ಕೆ ಆಗಮಿಸಿದರು. ಮೋದಿ ಜೊತೆ ಮಾತುಕತೆ ನಡೆಸಿದ ಬಳಿಕ ಸಂಜೆ ಅಲ್ ನಹ್ಯಾನ್ ಯುಎಇಗೆ ತೆರಳಿದರು.
ಭಾರತಕ್ಕೆ ಖುದ್ದು ಆಗಮಿಸಿ 2 ಗಂಟೆ ಮೋದಿ ಜೊತೆ ಯಾವ ವಿಚಾರ ಮಾತನಾಡಿರಬಹುದು ಎನ್ನುವುದೇ ದೊಡ್ಡ ಪ್ರಶ್ನೆ. ಇಂದು ಅತ್ಯುತ್ತಮ ಸಂವಹನ ವ್ಯವಸ್ಥೆ ಇರುವಾಗ ಇಬ್ಬರು ನಾಯಕರು ಸುಲಭವಾಗಿ ಮಾತನಾಡಬಹುದಿತ್ತು. ಹೀಗಿದ್ದರೂ ಎರಡು ದೇಶಗಳು ರಹಸ್ಯವಾಗಿರುವ ಮಹತ್ವದ ಯಾವುದೋ ವಿಚಾರದ ಬಗ್ಗೆ ಮಾತನಾಡಿರಬಹುದು ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

