ಅಪ್ಪು ಇಲ್ಲ ಅಂತ ಯಾರೂ ನೋವು ಪಡಬೇಡಿ ಅಪ್ಪು ಸದಾ ನಮ್ಮ ಜೊತೆಯಲ್ಲಿಯೇ ಇರುತ್ತಾರೆ ಎಂದು ಟಾಲಿವುಡ್ ನಟ ಜ್ಯೂನಿಯರ್ ಎನ್‍ಟಿಆರ್ ಹೇಳಿದ್ದಾರೆ.
ಚಿಕ್ಕಬಳ್ಳಾಪುರ ತಾಲೂಕಿನ ಅಗಲಗುರ್ಕಿ ಬಳಿ ನಡೆದ ಆರ್ಆರ್ಆರ್ ಸಿನಿಮಾದ ಪ್ರೀ ರಿಲೀಸ್ ಇವೆಂಟ್ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕರ್ನಾಟಕಕ್ಕೆ ನಮಸ್ಕಾರ ಎಂದು ಕನ್ನಡದಲ್ಲಿ ಮಾತು ಆರಂಭಿಸಿದರು. ನನ್ನ ಅಣ್ಣ ಶಿವರಾಜ್ ಕುಮಾರ್ ಅಂತ ಸಂಭೋಧಿಸಿ, ಅಪ್ಪು ಅವರನ್ನು ನೆನೆದರು. ನೀವು ಗಮನಿಸಿದ್ದಿರೋ ಇಲ್ಲವೋ ಗೊತ್ತಿಲ್ಲ. ಪುನೀತ್ ನಮ್ಮ ಜೊತೆ ಇಲ್ಲ ಅಂತ ನಾನು ಎಂದೂ ನಂಬುವುದಿಲ್ಲ. ಪುನೀತ್ ಪಾರ್ಥೀವ ಶರೀರ ನೋಡಲು ಬಂದಾಗ ನನಗೆ ಅನಿಸಿತು. ನಾನು ಎಲ್ಲಿಗೂ ಹೋಗುತ್ತಿಲ್ಲ. ಈ ಗಾಳಿ, ಮಣ್ಣು, ನೀರು ನಿಮ್ಮ ಹೃದಯದಲ್ಲಿಯೇ ನಾನು ಇರುತ್ತೇನೆ ಅಂತ ಹೇಳಿದ ಹಾಗೆ ಭಾಸವಾಯಿತು. ಮಳೆ, ಗಾಳಿ ರೂಪದಲ್ಲಿ ಈಗ ನಮ್ಮ ಪಕ್ಕದಲ್ಲಿಯೇ ಇದ್ದಾರೆ ಎಂದ ಅಪ್ಪುರನ್ನು ಸ್ಮರಿಸಿದರು. ಇದನ್ನೂ ಓದಿ: ನನ್ನ ಅಪ್ಪು, ನಾನು ಹೇಗೆ ಮರೆಯಲು ಸಾಧ್ಯ: ಬೊಮ್ಮಾಯಿ
ಪುನೀತ್ ನಮ್ಮ ಜೊತೆಯಲ್ಲಿ ಇಲ್ಲ ಅಂತ ನಾನು ಅಳಲಿಲ್ಲ. ಮುಂದೆಯೂ ಅಳುವುದಿಲ್ಲ. ಏಕೆಂದರೆ ಪುನೀತ್ ಅಂದರೆ ಸೆಲೆಬ್ರೇಷನ್. ಪುನೀತ್ ಎಲ್ಲ ಮೂವಿಗಳನ್ನು ಸೆಲೆಬ್ರೇಟ್ ಮಾಡೋಣ. ಜೇಮ್ಸ್ ಸಿನಿಮಾ ನೋಡುವ ಮೂಲಕ ಪುನೀತ್ ಅವರನ್ನು ಸಂಭ್ರಮಿಸೋಣ. ಪುನೀತ್ ನಗುವನ್ನು ನೆನೆಯೋಣ. ಪುನೀತ್ ಇಲ್ಲ ಅಂತ ಯಾರೂ ನೋವು ಪಡೋದು ಬೇಡ ಎಂದರು. ಇದನ್ನೂ ಓದಿ: ಹಾಲಿವುಡ್ ಖ್ಯಾತ ನಟಿ ಜೊತೆ ಸೆಕ್ಸ್ ಮಾಡಿದ್ದೇನೆ ಎಂಬ ಹೇಳಿಕೆಗೆ 50 ಲಕ್ಷ ಆಫರ್: ಖ್ಯಾತ ನಟ ಬಿಚ್ಚಿಟ್ಟ ರಹಸ್ಯ
ಇದೇ ವೇಳೆ ಮಾತನಾಡಿದ ನಟ ರಾಮ್ ಚರಣ್ ತೇಜ್ ಸಹ ಅಪ್ಪು ನೆನೆಸಿಕೊಂಡು ಭಾವುಕರಾದರು. ಪುನೀತ್ ರಾಜ್ ಕುಮಾರ್ ನಮ್ಮ ಜೊತೆಯಲ್ಲಿ ಇಲ್ಲ ಅಂದರೆ ನನಗೆ ನಂಬಲು ಆಗುತ್ತಿಲ್ಲ. ನಂಬುವುದಿಲ್ಲ. ತಾರಕ್ ಹೇಳಿದ ಹಾಗೆ ಅವರು ಇಲ್ಲಿ ಎಲ್ಲೋ ನಮಗೆ ಆಶೀರ್ವಾದ ಮಾಡುತ್ತಿದ್ದಾರೆ. ಅಪ್ಪು ಇಲ್ಲದ ಕೊರಗು ಶಿವಣ್ಣನ ಮೂಲಕ ಈಡೇರಿಸಿಕೊಳ್ಳುತ್ತೇವೆ.ನಾವು ಸಾಯೋವವರೆಗೂ ನಿಮ್ಮನ್ನು ನೆನಪಿಸಿಕೊಳ್ಳುತ್ತೇವೆ ಎಂದು ಶಿವಣ್ಣನಿಗೆ ಹೇಳಿದರು.