-ಅಪ್ಪು ಇಲ್ಲದೆ ನನಗೆ ಕರ್ನಾಟಕವೇ ಶೂನ್ಯ ಅನ್ನಿಸ್ತಿದೆ
ಬೆಂಗಳೂರು: ಸಿನಿಮಾ ರಂಗದಲ್ಲಿ ಭಾರೀ ಸಂಚಲ ಮೂಡಿಸಿರುವ ಸಿನಿಮಾ RRR. ಈ ಸಿನಿಮಾದ ಟ್ರೈಲರ್ ಲಾಂಚ್ ಇವೆಂಟ್ ಕಾರ್ಯಕ್ರಮ ಅದ್ಧೂರಿಯಾಗಿ ನಡೆದಿದೆ. ಇವೆಂಟ್‍ನಲ್ಲಿ ಭಾಗಿಯಾದ ಜೂ. ಎನ್‍ಟಿಆರ್ ಆಪ್ತ ಗೆಳೆಯ ಅಪ್ಪುನನ್ನು ನೆನೆದು ಭಾವುಕರಾಗಿದ್ದಾರೆ.
Advertisement
ಬೆಂಗಳೂರಿನ ಒರಾಯನ್ ಮಾಲ್ PVRನಲ್ಲಿ ಕಾರ್ಯಕ್ರಮ ನಡೆದಿದ್ದು, ಕಾರ್ಯಕ್ರಮದಲ್ಲಿ ನಿರ್ದೇಶಕ ರಾಜಮೌಳಿ, ಜೂನಿಯರ್ ಎನ್‍ಟಿಆರ್, ರಾಮ್ ಚರಣ್ ತೇಜಾ, ಆಲಿಯಾ ಭಟ್ ಭಾಗಿಯಾಗಿದ್ದಾರೆ. ಇದನ್ನೂ ಓದಿ: 5ನೇ ವರ್ಷದ ಮದುವೆ ವಾರ್ಷಿಕೋತ್ಸವ ಸಂಭ್ರಮದಲ್ಲಿ ರಾಧಿಕಾ-ಯಶ್
Advertisement
Advertisement
ಅಗಲಿದ ಪುನೀತ್ ರಾಜ್ ಕುಮಾರ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸುವ ಮೂಲಕ ಕಾರ್ಯಕ್ರಮದವನ್ನು ಪ್ರಾರಂಭಿಸಲಾಯಿತ್ತು. ತುಂಬಾ ಸಂತೋಷ ಆಗ್ತಿದೆ ಎಕ್ಸ್ಪ್ರೆಸ್ ಮಾಡೋಕೆ ಆಗುತ್ತಿಲ್ಲ. ತುಂಬಾ ಖುಷಿ ಇದೆ ಎಂದು ರಾಜ್‍ಮೌಳಿ ಹೇಳಿದ್ದಾರೆ. ತುಂಬಾ ಬಾರಿ ಬೆಂಗಳೂರಿಗೆ ಬಂದಿದ್ದೇನೆ. ತುಂಬಾ ಖುಷಿ ಆಗ್ತಿದೆ. RRR ಟ್ರೇಲರ್‌ಗೆ ಒಳ್ಳೆಯ ರೆಸ್ಪಾನ್ಸ್ ಬರ್ತಿದೆ ಎಂದು ಸಂತೋಷವನ್ನು ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: RRR ಟ್ರೇಲರ್ ಔಟ್ – ರಾಮ್ ಚರಣ್, ಜ್ಯೂ. ಎನ್‍ಟಿಆರ್ ಆ್ಯಕ್ಷನ್‍ಗೆ ಫ್ಯಾನ್ಸ್ ಫಿದಾ
Advertisement
ಕನ್ನಡದಲ್ಲೇ ಮಾತು ಆರಂಭಿಸಿದ ಜೂ. ಎನ್‍ಟಿಆರ್ ನನಗೆ ಸರಿಯಾಗಿ ಕನ್ನಡ ಮಾತನಾಡಲು ಬರುವುದಿಲ್ಲ.ತಪ್ಪಾದರೆ ಕ್ಷಮಿಸಿ. ತುಂಬಾ ಖುಷಿಯಾಗುತ್ತಿದೆ. ಒಳ್ಳೆಯ ರೆಸ್ಪಾನ್ಸ್ ಸಿಗುತ್ತಿದೆ. ನಾನೇ ಕನ್ನಡದಲ್ಲಿ ಡಬ್ ಮಾಡಿದ್ದೇನೆ. ಅಮ್ಮ ಕುಂದಾಪುರದವರು, ಅವರು ಹೇಳಿದ್ರು, ನೀನು ಡಬ್ ಮಾಡದಿದ್ದರೂ ಪರವಾಗಿಲ್ಲ. ತಪ್ಪಾಗಿ ಮಾತನಾಡಬಾರದು. ಏಕೆಂದರೆ ಅಲ್ಲಿ ನಮ್ಮವರಿದ್ದಾರೆ ಅಂತ ಅಮ್ಮ ಹೇಳಿದ್ದರು. ಅಪ್ಪು ಇಲ್ಲದೆ ನನಗೆ ಕರ್ನಾಟಕವೇ ಶೂನ್ಯ ಅನ್ನಿಸ್ತಿದೆ. ತುಂಬಾ ಕಷ್ಟವಾಗುತ್ತಿದೆ. ಚಕ್ರವ್ಯೂಹ ಚಿತ್ರದಲ್ಲಿ ಅಪ್ಪುಗೆ ಹಾಡಿದ್ದ “ಗೆಳೆಯ ಗೆಳೆಯ ಗೆಲುವೇ ನಿನ್ನದಯ್ಯ” ಹಾಡು ಹಾಡಿ ಅಪ್ಪು ಬಗ್ಗೆ ಜೂ.ಎನ್‍ಟಿಆರ್ ಭಾವುಕರಾಗಿದ್ದಾರೆ.
ಸ್ವತಂತ್ರಪೂರ್ವ ಭಾರತದ ಸ್ವಾತಂತ್ರ್ಯ ಹೋರಾಟಗಾರರ ಕಥೆ ಆಧಾರಿತ ಸಿನಿಮಾ ಇದಾಗಿದೆ. ಕೊಮರಂ ಭೀಮ್ ಆಗಿ ಜೂನಿಯರ್ ಎನ್ ಟಿಆರ್ ಕಾಣಿಸಿಕೊಂಡಿದ್ದಾರೆ. ಅಲ್ಲೂರಿ ಸೀತಾರಾಮರಾಜು ಪಾತ್ರದಲ್ಲಿ ರಾಮ್ ಚರಣ್ ತೇಜ ನಟಿಸಿದ್ದಾರೆ. 400 ಕೋಟಿ ಬಜೆಟ್ ನಲ್ಲಿ ತಯಾರಾದ ಬಿಗ್ಗೆಸ್ಟ್ ಪ್ಯಾನ್ ಇಂಡಿಯಾ ಸಿನಿಮಾ ಇದಾಗಿದೆ. ತೆಲುಗು , ಕನ್ನಡ, ತಮಿಳು, ಮಲಯಾಳಂ ಹಾಗೂ ಹಿಂದಿಯಲ್ಲಿ ಸಿನಿಮಾ ತೆರೆ ಕಾಣಲು ಭರ್ಜರಿ ಸಿದ್ಧತೆ ನಡೆಸಿದೆ.
ಜನವರಿ 7ಕ್ಕೆ ವಲ್ರ್ಡ್ ವೈಡ್ ರಿಲೀಸ್ ಆಗ್ತಿರೋ RRR ಸಿನಿಮಾದ ಕರ್ನಾಟಕದಲ್ಲಿ ಡಿಸ್ಟ್ರಿಬ್ಯೂಷನ್ ರೈಟ್ಸ್ ಪಡೆದಿರೋ ಏಗಿಓ ಪ್ರೊಡೆಕ್ಷನ್ ಪಡೆದುಕೊಂಡಿದೆ. ಈಗಾಗ್ಲೇ ಟ್ರೈಲರ್ ಲಾಂಚ್ ಆಗಿದ್ದು, ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ನಿಮಾ ಕುರಿತು ಮಾಧ್ಯಮಗಳ ಜೊತೆ ಚಿತ್ರತಂಡ ಸಂವಾದ ನಡೆಸಿದೆ.