ಬೆಂಗಳೂರು: ದೇಶಾದ್ಯಂತ ಇಂದು ಜನರು ಶ್ರೀಕೃಷ್ಣ ಜನ್ಮಾಷ್ಟಮಿಯನ್ನು ಬಹಳ ಸಡಗರದಿಂದ ಆಚರಿಸುತ್ತಿದ್ದಾರೆ. ಈ ನಡುವೆ ಸ್ಯಾಂಡಲ್‍ವುಡ್ ದಿವಂಗತ ನಟ ಚಿರಂಜೀವಿ ಸರ್ಜಾ ಹಾಗೂ ಮೇಘನಾ ರಾಜ್ ದಂಪತಿಯ ಪ್ರೀತಿಯ ಪುತ್ರ ಜ್ಯೂನಿಯರ್ ಚಿರು ಕೃಷ್ಣನ ವೇಷದಲ್ಲಿ ಮಿಂಚಿದ್ದಾನೆ. ಸದ್ಯ ಈ ಫೋಟೋವನ್ನು ಮೇಘನಾ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಸಾಮಾನ್ಯವಾಗಿ ಶ್ರೀ ಕೃಷ್ಣ ಜನ್ಮಾಷ್ಟಮಿಯ ದಿನ ಪುಟ್ಟ ಮಕ್ಕಳಿಗೆ ಕೃಷ್ಣನ ವೇಷ ಹಾಕಿಸಿ ಫೋಟೋ ಹಿಡಿಸುತ್ತಾರೆ. ಜೊತೆಗೆ ಮನೆಯ ತುಂಬಾ ಪುಟ್ಟ ಪುಟ್ಟ ಹೆಜ್ಜೆಗಳನ್ನು ಹಿಡಿಸಿ ಸಂಭ್ರಮಿಸುತ್ತಾರೆ. ಈ ವಿಶೇಷ ದಿನದಂದು ಜ್ಯೂನಿಯರ್ ಚಿರು ಕೂಡ ಕೃಷ್ಣನ ವೇಷ ಧರಿಸಿ ಮುದ್ದು-ಮುದ್ದಾಗಿ ಕಾಣಿಸಿಕೊಂಡಿದ್ದಾನೆ. ವಿಶೇಷವೆಂದರೆ ಜ್ಯೂನಿಯರ್ ಚಿರುಗೆ ನಟ ಪನ್ನಗಭರಣ ಮಗ ವೇದ ಭರಣ ಕೂಡ ಸಾಥ್ ನೀಡಿದ್ದು, ಇಬ್ಬರು ಸೋಫಾ ಮೇಲೆ ಕುಳಿತು ನವಿಲು ಗರಿ ಕೈಯಲ್ಲಿ ಹಿಡಿದು ಫೋಟೋಗೆ ಪೋಸ್ ನೀಡಿದ್ದಾರೆ. ಇದನ್ನೂ ಓದಿ:ಚಿರು ಯಾವಾಗಲೂ ನೀನೇ ನನ್ನ ಬೆಸ್ಟ್ ಫ್ರೆಂಡ್: ಮೇಘನಾ ರಾಜ್
ಇದೀಗ ಮೇಘನಾ ರಾಜ್ ತಮ್ಮ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ಮಗನ ಕ್ಯೂಟ್ ಫೋಟೋವನ್ನು ಶೇರ್ ಮಾಡಿಕೊಂಡಿದ್ದು, ಕ್ಯಾಪ್ಷನ್‍ನಲ್ಲಿ ನನ್ನ ಬೆಣ್ಣೆ, ಮುದ್ದು, ಬಂಗಾರ ಎನ್ನುತ್ತಾ, ಎಲ್ಲರಿಗೂ ಕೃಷ್ಣ ಜನ್ಮಾಷ್ಟಮಿ ಹಬ್ಬದ ಶುಭಾಶಯವನ್ನು ತಿಳಿಸಿದ್ದಾರೆ.
View this post on Instagram
ಇತ್ತೀಚೆಗಷ್ಟೇ ಜ್ಯೂನಿಯರ್ ಚಿರುಗೆ 10 ತಿಂಗಳು ತುಂಬಿದ್ದು, ಅದೇ ಖುಷಿಯಲ್ಲಿ ಮೇಘನಾ ರಾಜ್ ಮಗ ಜೊತೆ ಒಂದೇ ರೀತಿಯ ಮ್ಯಾಚಿಂಗ್ ಡ್ರೆಸ್ ಧರಿಸಿ ಅಮ್ಮ ಮಗ ಇಬ್ಬರು ಮುದ್ದಾಗಿ ಕಾಣಿಸಿಕೊಂಡಿದ್ದರು. ಇದನ್ನೂ ಓದಿ:ಜೂನಿಯರ್ ಚಿರುಗೆ 10 ತಿಂಗಳು ತುಂಬಿರುವ ಸಂಭ್ರಮ- ಮನಸಾರೆ ನಕ್ಕ ಮೇಘನಾ ರಾಜ್