ಬಾಲಿವುಡ್ ನಟ ಆಮೀರ್ ಖಾನ್ ಪುತ್ರ ಜುನೈದ್ (Junaid Khan) ಮತ್ತು ಶ್ರೀದೇವಿ ಪುತ್ರಿ ಖುಷಿ ಕಪೂರ್ (Kushi Kapoor) ಡ್ಯುಯೆಟ್ ಮೂಡ್‌ಗೆ ಜಾರಿದ್ದಾರೆ. ಹೊಸ ಸಿನಿಮಾದಲ್ಲಿ ಜೋಡಿಯಾಗಿ ನಟಿಸಿದ್ದು, ನೋಡುಗರಿಗೆ ಪ್ರೇಮ ಪಾಠ ಮಾಡಿದ್ದಾರೆ. ‘ಲವ್ಯಾಪಾ’ ಸಿನಿಮಾದ ಲವ್ಲಿ ಸಾಂಗ್‌ವೊಂದು ರಿಲೀಸ್ ಆಗಿದೆ. ಇದನ್ನೂ ಓದಿ:ಬಾಲಿವುಡ್‌ನತ್ತ ನಟಿ- ಕಾರ್ತಿಕ್ ಆರ್ಯನ್‌ಗೆ ಶ್ರೀಲೀಲಾ ಜೋಡಿ?
ಈ ಸಿನಿಮಾದ ಮೂಲಕ ಜುನೈದ್ ಖಾನ್ ಮತ್ತು ಖುಷಿ ಕಪೂರ್ ಬಣ್ಣದ ಬದುಕಿಗೆ ಪಾದಾರ್ಪಣೆ ಮಾಡುತ್ತಿದ್ದಾರೆ. ‘ಲವ್ಯಾಪಾ ಹೋ ಗಯಾ’ ಎಂಬ ರೊಮ್ಯಾಂಟಿಕ್ ಸಾಂಗ್ ರಿಲೀಸ್ ಆಗಿದ್ದು, ಪ್ರೇಕ್ಷಕರ ಮೆಚ್ಚುಗೆ ಗಳಿಸಿದೆ. ಕಲರ್‌ಫುಲ್ ಸೆಟ್‌ನಲ್ಲಿ ಜುನೈದ್ ಮತ್ತು ಖುಷಿ ಮಸ್ತ್ ಆಗಿ ಹೆಜ್ಜೆ ಹಾಕಿದ್ದಾರೆ.
View this post on Instagram
ಇನ್ನೂ ಈ ಸಿನಿಮಾವನ್ನು ಅದ್ವೈತ್ ಚಂದನ್ ನಿರ್ದೇಶನ ಮಾಡಿದ್ದಾರೆ. ಈ ವರ್ಷ ಫೆ.7ರಂದು ರಿಲೀಸ್ ಆಗಲಿದೆ. ಹಾಡಿನ ಮೂಲಕ ಗಮನ ಸೆಳೆದಿರುವ ಈ ಜೋಡಿ, ಸಿನಿಮಾದಿಂದ ಕಮಾಲ್ ಮಾಡಿ ಗೆದ್ದು ಬೀಗ್ತಾರಾ? ಎಂದು ಕಾದುನೋಡಬೇಕಿದೆ.