ಬೆಂಗಳೂರಲ್ಲಿ ಪ್ರಾಪರ್ಟಿ ಟ್ಯಾಕ್ಸ್ ಕಟ್ಟಲು ಜುಲೈ 31 ಕಡೇ ದಿನ, ಮತ್ತೆ ಅವಧಿ ವಿಸ್ತರಣೆ ಮಾಡಲ್ಲ: ಡಿಕೆಶಿ

Public TV
1 Min Read
DK Shivakumar 1 2

ಬೆಂಗಳೂರು: ಸಿಲಿಕಾನ್‌ ಸಿಟಿಯಲ್ಲಿ ಆಸ್ತಿ ತೆರಿಗೆ ಕಟ್ಟಲು ಜುಲೈ 31 ಕಡೇ ದಿನವಾಗಿದ್ದು, ಯಾವುದೇ ಕಾರಣಕ್ಕೂ ಅವಧಿ ವಿಸ್ತರಣೆ ಇಲ್ಲ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ (DK Shivakumar) ಹೇಳಿದ್ದಾರೆ.

ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಯಾರಿಗೆ ಎಷ್ಟೇ ತೊಂದರೆ ಇದ್ದರೂ ಜುಲೈ 31 ರೊಳಗೆ ಪ್ರಾಪರ್ಟಿ ಟ್ಯಾಕ್ಸ್ ಕಟ್ಟಿ ಅಂತಾ ಡೆಡ್ ಲೈನ್ ಕೊಟ್ಟರು. ಇದನ್ನೂ ಓದಿ: ಮೂಗು, ಬಾಯಿ, ದವಡೆ ಕತ್ತರಿಸಿ ವಿಕೃತಿ ಮೆರೆದು ಶವವನ್ನು ಮೋರಿಗೆ ಎಸೆದಿದ್ದ ದರ್ಶನ್‌ ಟೀಂ

ಬೆಂಗಳೂರಲ್ಲಿ ಒಟ್ಟಾರೆ 5,200 ಕೋಟಿ ಪ್ರಾಪರ್ಟಿ ಟ್ಯಾಕ್ಸ್ ಬಾಕಿ ಇತ್ತು, ತೆರಿಗೆ ಬಾಕಿ ಉಳಿಸಿಕೊಂಡಿರುವ ಒಟ್ಟು 20 ಲಕ್ಷ ಪ್ರಾಪರ್ಟಿಗಳನ್ನ ಗುರುತಿಸಿದ್ದೇವೆ. ಇದರಲ್ಲಿ 1,300 ಕೋಟಿ ಆಸ್ತಿ ತೆರಿಗೆ ಬಂದಿದೆ. 3,900 ಕೋಟಿ ಆಸ್ತಿ ತೆರಿಗೆ ಬರಬೇಕು ಅಂತಾ ಅಂಕಿ-ಅಂಶ ನೀಡಿದ್ರು. ಆಸ್ತಿ ತೆರಿಗೆ ಒನ್ ಟೈಂ ಸೆಟ್ಲ್ ಮೆಂಟ್ ಮಾಡಿಕೊಳ್ಳಬೇಕು ಎಂದರು.

ಆನ್ ಲೈನ್ ಮೂಲಕ ಆಸ್ತಿ ತೆರಿಗೆ ಕಟ್ಟಲು ಅವಕಾಶವಿದೆ. ಚುನಾವಣೆ ಇದ್ದ ಕಾರಣಕ್ಕೆ ಆಸ್ತಿ ತೆರಿಗೆಗೆ ಒತ್ತಾಯ ಮಾಡಿರಲಿಲ್ಲ. ಪೆನಾಲ್ಟಿ ಇಲ್ಲದೆ, ಬಡ್ಡಿ ಇಲ್ಲದೆ ಆಸ್ತಿ ತೆರಿಗೆ ಕಟ್ಟಲು ಜುಲೈ 31 ರವರೆಗೆ ಅವಕಾಶವಿದೆ. ಬೆಂಗಳೂರು‌ ನಾಗರೀಕರು ಸದ್ಬಳಕೆ ಮಾಡಿಕೊಳ್ಳಬೇಕು ಅಂತೇಳಿದ್ರು. ಅಲ್ಲದೆ ತೆರಿಗೆ ಕಟ್ಟದೆ ಇರುವವರು ಸಾಕಷ್ಟು ಮಂದಿ ಇದ್ದಾರೆ, ಅವರು ದಾಖಲೆಗಳನ್ನ ಕೊಡಬೇಕು ಎಂದು ತಿಳಿಸಿದರು.

ದಾಖಲೆ ಕೊಟ್ಟರೆ ಪರಿಶೀಲನೆ‌ ಮಾಡ್ತೇವೆ. ಎ ಖಾತಾ, ಬಿ ಖಾತಾ ಕೊಡಬೇಕು, ಪರಿಶೀಲನೆ ಮಾಡಿ ನೋಡ್ತೀವಿ. ಪ್ರಾಪರ್ಟಿಗಳನ್ನ ಡಿಜಿಟಲ್ ಮೂಲಕ ಸ್ಕ್ಯಾನ್ ಮಾಡ್ತಿದ್ದೇವೆ. ಮನೆಬಾಗಿಲಿಗೆ ದಾಖಲೆ ನೀಡುವ ಪ್ರಯತ್ನ ನಡೆಯಲಿದೆ. ಮೂರು ತಿಂಗಳೊಳಗೆ ಎಲ್ಲ ಆಸ್ತಿ ದಾಖಲೀಕರಣ ಮುಗಿಸಬೇಕು ಅಂತಾ ಸ್ಪಷ್ಟಪಡಿಸಿದ್ರು.

Share This Article