ನವದೆಹಲಿ: ಏಕರೂಪ ನಾಗರಿಕ ಸಂಹಿತೆ (Uniform Civil Code) ಬಗ್ಗೆ ಚರ್ಚಿಸಲು ಮುಸ್ಲಿಂ ಧರ್ಮಗುರುಗಳು ಹಾಗೂ ಇಸ್ಲಾಂ ಸಂಘಟನೆಯಾದ ಉಲಮಾ-ಇ-ಹಿಂದ್ (JUH) ಇದೇ ಫೆಬ್ರವರಿ 12ರಂದು ದೆಹಲಿಯ ರಾಮಲೀಲಾ ಮೈದಾನದಲ್ಲಿ ಬೃಹತ್ ಸಮಾವೇಶ ಹಮ್ಮಿಕೊಂಡಿದೆ.
Advertisement
ಮೂರು ದಿನಗಳ ಕಾಲ ಈ ಸಮಾವೇಶ ನಡೆಯಲಿದ್ದು, ಸಂಘಟನೆಯು ಏಕರೂಪ ನಾಗರಿಕ ಸಂಹಿತೆಯ ಬಗ್ಗೆ ಚರ್ಚಿಸಿ ನಿರ್ಣಯ ಕೈಗೊಳ್ಳಲಿದೆ. ಈ ಮೂಲಕ ಮದರಸಾಗಳಿಗೆ ಸ್ವಾಯತ್ತತೆ, ಆರ್ಥಿಕ ಮತ್ತು ಸಾಮಾಜಿಕವಾಗಿ ಹಿಂದುಳಿದ ಮುಸ್ಲಿಮರಿಗೆ ಮೀಸಲಾತಿ (Reservation For Muslism) ಸಮಸ್ಯೆ ಪರಿಹರಿಸಲು ಹಲವು ನಿರ್ಣಯಗಳನ್ನು ಇಲ್ಲಿ ಕೈಗೊಳ್ಳಲಾಗುತ್ತದೆ. ಇದನ್ನೂ ಓದಿ: ‘ಜ್ಯೂಲಿಯೆಟ್’ ತಂಡಕ್ಕೆ ಶುಭ ಕೋರಿದ ಅಶ್ವಿನಿ ಪುನೀತ್ ರಾಜ ಕುಮಾರ್
Advertisement
Advertisement
ಜಮಿಯತ್ ಉಲಮಾ-ಇ-ಹಿಂದ್‌ನ 34ನೇ ಸರ್ವಾಂಗೀಣ ಅಧಿವೇಶನದಲ್ಲಿ ದೇಶದೆಲ್ಲೆಡೆಯಿಂದ 10 ಸಾವಿರ ಮುಸ್ಲಿಂ ಧರ್ಮಗುರುಗಳು, ಎನ್‌ಜಿಒ (NGO) ಪ್ರತಿನಿಧಿಗಳು ಹಾಗೂ ಸಾಮಾಜಿಕ ಕಾರ್ಯಕರ್ತರು ಸೇರಿ ಸಾವಿರಾರು ಮುಸ್ಲಿಂ ಮುಖಂಡರು (Muslim Community) ಪಾಲ್ಗೊಳ್ಳಲಿದ್ದಾರೆ. ಇದನ್ನೂ ಓದಿ: UKG ಮಗುವನ್ನು ಫೇಲ್ ಮಾಡಿ ಶಿಕ್ಷಣ ಸಂಸ್ಥೆ ಎಡವಟ್ಟು- ಸುರೇಶ್ ಕುಮಾರ್ ಕಿಡಿ
Advertisement
ಒಟ್ಟು ಮೂರು ದಿನಗಳ ಈ ಸಮಾವೇಶದಲ್ಲಿ ಫೆಬ್ರವರಿ 10 ಮತ್ತು 11ರಂದು ಮೊದಲ ಎರಡು ದಿನ ಸಾಮಾನ್ಯ ಅಧಿವೇಶನ ನಡೆಸಲಿದೆ. ನಂತರ ಭಾನುವಾರ (ಫೆ.12) ಸರ್ವಸದಸ್ಯರ ಸಮಾವೇಶದಲ್ಲಿ ಏಕರೂಪ ನಾಗರಿಕ ಸಂಹಿತೆಯ ಬಗ್ಗೆ ಚರ್ಚಿಸಿ ನಿರ್ಧಾರ ಕೈಗೊಳ್ಳಲಿದೆ.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k