ಮಂಡ್ಯ: ಅಪಘಾತದಿಂದ (Accident) ಕಾಲಿನ ಸ್ವಾಧೀನ ಕಳೆದುಕೊಂಡು ಕೋರ್ಟ್‍ನ (Court) ಮೆಟ್ಟಿಲುಗಳನ್ನು ಹತ್ತಲಾಗದ ವೃದ್ಧ ಇದ್ದಲ್ಲಿಯೇ ಜಡ್ಜ್ ಬಂದು ತೀರ್ಪು ನೀಡಿದ ಘಟನೆ ಮದ್ದೂರಿನಲ್ಲಿ (Madduru) ನಡೆದಿದೆ.
ಮದ್ದೂರು ಜೆಎಂಎಫ್‍ಸಿ ನ್ಯಾಯಾಲಯಕ್ಕೆ ಲೋಕ ಅದಾಲತ್ ಕಾರ್ಯಕ್ರಮಕ್ಕೆ ಅಪಘಾತ ವಿಮಾ ಸಂಬಂಧ ವಿಚಾರಣೆಗೆ ವೃದ್ಧ ಮಾದೇಗೌಡ ಎಂಬವರು ಬಂದಿದ್ದರು. ಈ ವೇಳೆ ಕಟ್ಟಡದ ಮೇಲಿನ ಮಹಡಿಯಲ್ಲಿ ಕೋರ್ಟ್ ಕಲಾಪ ನಡೆಯುತ್ತಿತ್ತು. ಮಾದೇಗೌಡರಿಗೆ ಮೇಲೆ ಮೆಟ್ಟಿಲು ಏರಲಾಗದೇ ಕೆಳಗಿನ ಕೊಠಡಿಯಲ್ಲಿ ಕುಳಿತಿದ್ದರು. ಇದನ್ನೂ ಓದಿ: ಬಾನು ಮುಷ್ತಾಕ್ ಆಯ್ಕೆ ಪ್ರಶ್ನಿಸಿ ಪ್ರತಾಪ್ ಸಿಂಹ ಸೇರಿ ಮೂವರು ಸಲ್ಲಿಸಿದ್ದ ಅರ್ಜಿ ವಜಾ
ಈ ವಿಚಾರ ತಿಳಿದ ನ್ಯಾಯಾಧೀಶೆ ಹರಿಣಿಯವರು ಕೆಳಗಿಳಿದು ಬಂದು ವಿಚಾರಿಸಿದರು. ಬಳಿಕ ವಿಮಾ ಕಂಪನಿಗೆ 2.5 ಲಕ್ಷ ರೂ. ಪರಿಹಾರ ನೀಡುವಂತೆ ಸ್ಥಳದಲ್ಲೇ ಆದೇಶಿಸಿದರು. ನ್ಯಾಯಾಧೀಶರ ಮಾನವೀಯತೆ ಕಂಡು ಸ್ಥಳದಲ್ಲಿದ್ದ ಜನರ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಕೋರ್ಟ್ ಆದೇಶಿಸಿದ್ರೂ ಹಾಸಿಗೆ, ದಿಂಬು ಒದಗಿಸಿಲ್ಲ – ಮತ್ತೆ ಅರ್ಜಿ ಸಲ್ಲಿಸಿದ ದರ್ಶನ್ ಪರ ವಕೀಲರು