ಮುಂಬೈ: ತಮ್ಮ ಮಕ್ಕಳನ್ನು ಟ್ರೋಲ್ ಮಾಡುತ್ತಿದ್ದ ಟ್ರೋಲರ್ಸ್ ವಿರುದ್ಧ ಬಾಲಿವುಡ್ ನಟ ಅಜಯ್ ದೇವಗನ್ ರೊಚ್ಚಿಗೆದ್ದಿದ್ದಾರೆ.
ಅಜಯ್ ದೇವಗನ್ ಹಾಗೂ ಕಾಜೋಲ್ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. 15 ವರ್ಷದ ಮಗಳು ನೈಸಾ ಹಾಗೂ 8 ವರ್ಷದ ಮಗ ಯುಗ್‍ನನ್ನು ಟ್ರೋಲ್ ಮಾಡುತ್ತಿದ್ದಕ್ಕೆ ಅಜಯ್ ದೇವಗನ್ ಗರಂ ಆಗಿದ್ದಾರೆ.
ವಿಮಾನ ನಿಲ್ದಾಣದಲ್ಲಿ ನೈಸಾ ಧರಿಸಿದ ಉಡುಪಿನ ಬಗ್ಗೆ ನೆಟ್ಟಿಗರು ಟ್ರೋಲ್ ಮಾಡುತ್ತಿದ್ದರು. ಈ ಬಗ್ಗೆ ದೆಹಲಿಯಲ್ಲಿ ‘ಟೋಟಲ್ ಧಮಾಲ್’ ಚಿತ್ರದ ಪ್ರಮೋಶನ್ ವೇಳೆ ಮಾಧ್ಯಮದೊಂದಿಗೆ ಅಜಯ್ ದೇವಗನ್ ಮಾತನಾಡಿ. “ನೀವು ಬೇಕಾದರೆ ನನ್ನ ಮತ್ತು ಕಾಜೋಲ್ ಬಗ್ಗೆ ಜಡ್ಜ್ ಮಾಡಿ. ಅದನ್ನು ಬಿಟ್ಟು ನಮ್ಮ ಮಕ್ಕಳನ್ನು ಜಡ್ಜ್ ಮಾಡಬೇಡಿ. ನಾನು ಹಾಗೂ ಕಾಜೋಲ್ ಕಲಾವಿದರಾದ ಕಾರಣ ನಮ್ಮ ಮಕ್ಕಳು ಕ್ಯಾಮೆರಾಗೆ ಕಾಣಿಸಿಕೊಳ್ಳುತ್ತಿರುತ್ತಾರೆ” ಎಂದು ಹೇಳಿದ್ದಾರೆ.
ಒಬ್ಬರ ಬಗ್ಗೆ ಈ ರೀತಿ ಮಾತನಾಡುವುದು ಸರಿಯಲ್ಲ. ನಾನು ಬೇರೆ ವ್ಯಕ್ತಿಗಳ ಬಗ್ಗೆ ಮಾತನಾಡಲು ಶುರು ಮಾಡಿದರೆ, ಆ ವ್ಯಕ್ತಿ ಹೇಗೆ ಬೇಸರವಾಗುತ್ತೋ, ಹಾಗೆ ನನ್ನ ಮಕ್ಕಳಿಗೂ ಬೇಸರವಾಗುತ್ತೆ. ನಿಜ ಹೇಳಬೇಕೆಂದರೆ ನಾನು ಟ್ರೋಲ್ ಮಾಡುವ ವ್ಯಕ್ತಿಗಳ ಬಗ್ಗೆ ಯೋಚಿಸುವುದಿಲ್ಲ. ಆದರೆ ನನ್ನ ಮಕ್ಕಳು ಇಂತಹ ಟ್ರೋಲ್‍ಗೆ ಒಳಗಾಗುವುದು ನನಗೆ ಇಷ್ಟವಿಲ್ಲ. ಅದು ನನಗೆ ಬೇಸರವಾಗುತ್ತದೆ ಎಂದು ತಿಳಿಸಿದ್ದಾರೆ.
ಆರಂಭದಲ್ಲಿ ನನ್ನ ಮಗಳು ಮೊದಲಿಗೆ ಈ ಟ್ರೋಲ್‍ಗಳನ್ನು ನೋಡಿ ಬೇಸರಪಡುತ್ತಿದ್ದಳು. ಆದರೆ ಈಗ ಆಕೆ ಇಂತಹ ಟ್ರೋಲ್‍ಗಳಿಗೆ ಹೆಚ್ಚು ಗಮನ ಕೊಡುವುದಿಲ್ಲ. ನನ್ನ ಮಗಳಿಗೆ ಇದನ್ನು ಹೇಗೆ ನಿಭಾಯಿಸಬೇಕು ಎನ್ನುವುದು ತಿಳಿದಿದೆ. ನಾವು ಏನೇ ಮಾಡಿದರೂ ಕೆಲವರು ನಮ್ಮನ್ನು ಜಡ್ಜ್ ಮಾಡಲು ಕಾಯುತ್ತಿರುತ್ತಾರೆ. ನಾವು ಪ್ರತಿಕ್ರಿಯೆ ನೀಡಿದರೆ, ಅವರು ಇನ್ನಷ್ಟು ಹೆಚ್ಚಾಗಿ ಪ್ರತಿಕ್ರಿಯಿಸುತ್ತಾರೆ ಎಂದು ಅಜಯ್ ತಮ್ಮ ಮಗಳ ಬಗ್ಗೆ ಹೇಳಿದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv