ಮ್ಯಾಡ್ರಿಡ್: ಸಾಕ್ಷಿಗಳು ಲಭ್ಯವಿದ್ದರೂ ಅತ್ಯಾಚಾರ ಕೃತ್ಯ ಅಂತಾರಾಷ್ಟ್ರೀಯ ಸಮುದ್ರದಲ್ಲಿ ನಡೆದ ಹಿನ್ನೆಲೆಯಲ್ಲಿ ಆರೋಪಿಯನ್ನು ಸ್ಪೇನ್ ಕೋರ್ಟ್ ಬಿಡುಗಡೆ ಮಾಡಿದೆ.
17 ವರ್ಷ ಸಂತ್ರಸ್ತೆ ಇಂಗ್ಲೆಂಡಿನವಳಾಗಿದ್ದು ತನ್ನ ಪೋಷಕರ ಜೊತೆಗೆ ಎಂ.ಎಸ್.ಸಿ ದಿವಾನ ಹಡಗಿನಲ್ಲಿ ಸ್ಪೇನ್‍ನ ಪಾಲ್ಮಾದಿಂದ ವೇಲೆನ್ಸಿಯಾಗೆ ಪ್ರಯಾಣಿಸುತ್ತಿದ್ದಳು. ಆರೋಪಿ ಇಟಲಿಯ ಯುವಕ ಕೂಡ ಅದೇ ಹಡಗಿನಲ್ಲಿ ಪ್ರಯಾಣಿಸುತ್ತಿದ್ದ. ಹಡಗು ಮೆಡಿಟರೇನಿಯನ್ ಸಮುದ್ರದ ನಡುವೆ ಬಂದಾಗ ಯುವತಿಯ ಮೇಲೆ ಅತ್ಯಾಚಾರ ಎಸಗಿದ್ದಾನೆ.
Advertisement
Advertisement
ಈ ಸಂಬಂಧ ಹಡಗಿನ ಕ್ಯಾಪ್ಟನ್ ವೇಲೆನ್ಸಿಯಾ ಬಂದರು ಪ್ರಾಧಿಕಾರಕ್ಕೆ ಮಾಹಿತಿ ನೀಡಿದ್ದರು. ತಕ್ಷಣವೇ ಪೊಲೀಸರು ಬಂದು ಆರೋಪಿಯನ್ನು ಬಂಧಿಸಿದ್ದರು. ಬಳಿಕ ಯುವತಿಯನ್ನು ವೈದ್ಯಕೀಯ ತಪಾಸಣೆಗೆ ಕಳುಹಿಸಿ, ಡಿಎನ್‍ಎ ಪರೀಕ್ಷೆ ಮಾಡಿಸಲಾಗಿತ್ತು.
Advertisement
ವೈದ್ಯಕೀಯ ಪರೀಕ್ಷೆ ನಂತರ ಯುವತಿಯು ತನ್ನ ಪೋಷಕರ ಜೊತೆಗೆ 27 ದಿನಗಳ ಯುರೋಪಿನ್ ಪ್ರವಾಸ ಮುಂದುವರಿಸಿದ್ದಾಳೆ. ಇತ್ತ ಆರೋಪಿ ಯುವಕ ವೇಲೆನ್ಸಿಯಾ ಪೊಲೀಸರ ಬಂಧನದಲ್ಲಿದ್ದ.
Advertisement
ಈ ಪ್ರಕರಣದ ಸಂಬಂಧ ವಿಚಾರಣೆ ನಡೆಸಿದ ಸ್ಪೇನ್ ಕೋರ್ಟ್, ಆರೋಪಿ, ಸಂತ್ರಸ್ತೆ ಅಥವಾ ಹಡಗು ಮಾಲೀಕರು ಯಾರೂ ನಮ್ಮ ದೇಶದವರಲ್ಲ. ಈ ಪ್ರಕರಣವನ್ನು ಇಟಲಿ, ಇಂಗ್ಲೆಂಡ್ ಅಥವಾ ಪನಾಮದಲ್ಲಿ ಇತ್ಯರ್ಥಗೊಳಿಸಬೇಕು ಎಂದು ಹೇಳಿದೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಹಡಗಿನ ವಕ್ತಾರ, ಪ್ರಕರಣದ ಸಂಬಂಧ ತನಿಖೆ ನಡೆಯುತ್ತಿದೆ. ಹೀಗಾಗಿ ನಾವು ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ. ಇದು ನಮ್ಮ ಹಡಗಿನಲ್ಲಿ ಪ್ರಯಾಣಿಸುತ್ತಿದ್ದ ಅತಿಥಿಗಳಿಗೆ ಸಂಬಂಧಿಸಿದ್ದಾಗಿದೆ. ಹೀಗಾಗಿ ಕಂಪನಿಯು ವಿಚಾರಣೆಗೆ ಸಂಪೂರ್ಣ ಸಹಕಾರ ನೀಡಲಿದೆ ಎಂದು ತಿಳಿಸಿದ್ದಾರೆ.