ಚಿತ್ರೀಕರಣದ ವೇಳೆ ಟಾಲಿವುಡ್ (Tollywood) ಸ್ಟಾರ್ ನಟ ಜೂ.ಎನ್‍ಟಿಆರ್ (Jr NTR) ಗಾಯವಾಗಿದ್ದು, ಅವರನ್ನು ಆಸ್ಪತ್ರೆ ಸೇರಿಸಲಾಗಿದೆ. ವಿಷಯ ತಿಳಿದ ಅಭಿಮಾನಿಗಳು ಆಸ್ಪತ್ರೆ ಮುಂದೆ ದೌಡಾಯಿಸಿದ್ದಾರೆ.
ಹೈದ್ರಾಬಾದ್‍ನಲ್ಲಿ (Hyderabad) ಜಾಹೀರಾತುವೊಂದರ ಚಿತ್ರೀಕರಣದಲ್ಲಿ ಭಾಗಿಯಾಗಿದ್ದ ವೇಳೆ ಈ ಅವಘಡ ನಡೆದಿದೆ. ಚಿತ್ರೀಕರಣದ ವೇಳೆ ನೆಲದ ಮೇಲೆ ಸ್ಲಿಪ್ ಆಗಿ ಬಿದ್ದಿದ್ದು, ಕಾಲಿಗೆ ಬಲವಾಗಿ ಪೆಟ್ಟಾಗಿದ್ದು ಮೂಳೆ ಮುರಿತವಾಗಿದೆ ಎನ್ನಲಾಗಿದೆ. ಇದನ್ನೂ ಓದಿ: ದಿಶಾ ಪಟಾನಿ ಮನೆ ಮುಂದೆ ಗುಂಡಿನ ದಾಳಿ – ಆರೋಪಿಗೆ ಗುಂಡೇಟು ನೀಡಿ ಬಂಧಿಸಿದ ಪೊಲೀಸರು
ಹೈದ್ರಾಬಾದ್‍ನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಜೂ.ಎನ್‍ಟಿಆರ್‍ಗೆ ವೈದ್ಯರು ಕೆಲ ವಾರಗಳ ಕಾಲ ವಿಶ್ರಾಂತಿ ಸೂಚಿಸಿದ್ದಾರೆ. ಮೂಳೆಗೆ ಪೆಟ್ಟಾಗಿರುವುದರಿಂದ ಕೆಲವು ದಿನ ಚಿತ್ರೀಕರಣದಲ್ಲಿ ಭಾಗಿಯಾಗದೇ ಅವರು ವಿಶ್ರಾಂತಿ ಪಡೆಯಬೇಕಾಗಿದೆ.
ತಮ್ಮ ನೆಚ್ಚಿನ ನಟ ಆಸ್ಪತ್ರೆಗೆ ಸೇರಿರುವ ವಿಷಯ ತಿಳಿದು ಅಭಿಮಾನಿಗಳು ಆಸ್ಪತ್ರೆ ಎದುರು ಜಮಾಯಿಸಿದ್ರು. ಕೂಡಲೇ ಆಸ್ಪತ್ರೆ ವೈದ್ಯರು ಹೆಲ್ತ್ ಬುಲಿಟಿನ್ ರಿಲೀಸ್ ಮಾಡಿ ಜೂ.ಎನ್‍ಟಿಆರ್ ಆರೋಗ್ಯವಾಗಿರುವುದನ್ನ ಖಚಿತಪಡಿಸಿದ್ದಾರೆ. ಚಿಕಿತ್ಸೆ ಮುಂದುವರಿದಿದ್ದು, ವಿಶ್ರಾಂತಿ ಬಳಿಕ ಅವರು ಗುಣಮುಖರಾಗುವ ಭರವಸೆಯನ್ನು ವೈದ್ಯರು ನೀಡಿದ್ದಾರೆ.
ತಮ್ಮ ನೆಚ್ಚಿನ ನಟ ಬೇಗ ಗುಣಮುಖರಾಗಲಿ ಎಂದು ಅಭಿಮಾನಿಗಳು ತಿರುಪತಿ ಸೇರಿದಂತೆ ಪ್ರಮುಖ ದೇವಾಲಯಗಳ ಎದುರು ವಿಶೇಷ ಪೂಜೆ ಸಲ್ಲಿಸಿದ್ದಾರೆ. ಇದನ್ನೂ ಓದಿ: ಸಮಂತಾ ಸಿನಿಮಾ ಆಫರ್‌ಗೆ ನಾಗಾರ್ಜುನ ಫ್ಯಾಮಿಲಿ ಅಡ್ಡಗಾಲು?