Connect with us

Cinema

ವೇದಿಕೆ ಮೇಲೆಯೇ ಗಳಗಳನೇ ಅತ್ತ ಜೂ. ಎನ್‍ಟಿಆರ್

Published

on

ಹೈದರಾಬಾದ್: ಕೆಲವು ದಿನಗಳ ಹಿಂದೆಯಷ್ಟೇ ರಸ್ತೆ ಅಪಘಾತದಲ್ಲಿ ಮೃತಪಟ್ಟಿರುವ ತನ್ನ ತಂದೆ ನಟ ಹರಿಕೃಷ್ಣ ಅವರನ್ನು ನೆನೆದು ನಟ ಜೂನಿಯರ್ ಎನ್‍ಟಿಆರ್ ಸಾವಿರಾರು ಜನರ ಮುಂದೆ ವೇದಿಕೆಯಲ್ಲೇ ಕಣ್ಣೀರು ಹಾಕಿದ್ದಾರೆ.

ಜೂನಿಯರ್ ಎನ್‍ಟಿಆರ್ ಅಭಿನಯದ ‘ಅರವಿಂದ ಸಮೇತ ವೀರ ರಾಘವ’ ಸಿನಿಮಾದ ಪ್ರೀ ರಿಲೀಸ್ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಈ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದಾಗ ತಮ್ಮ ತಂದೆ ಬಗ್ಗೆ ಮಾತನಾಡಿ ಭಾವುಕರಾಗಿದ್ದಾರೆ.

ಎನ್‍ಟಿಆರ್ ಹೇಳಿದ್ದೇನು?
ಚಿತ್ರಕಥೆಗಾರ ತ್ರಿವಿಕ್ರಂ ಶ್ರೀನಿವಾಸ್ ಅವರ ಜೊತೆ ಸಿನಿಮಾ ಮಾಡಬೇಕು ಎನ್ನುವುದು ಕೆಲವು ವರ್ಷಗಳ ಕನಸು ನನ್ನದು. ನಾವಿಬ್ಬರು ತುಂಬಾ ಹತ್ತಿರದ ಸ್ನೇಹಿತರು. ಆದರು ನಾವು ಒಟ್ಟಿಗೆ ಸಿನಿಮಾ ಮಾಡಲು ಸಾಧ್ಯವಾಗಿಲ್ಲ. ಯಾಕೆ ಒಟ್ಟಿಗೆ ಇದ್ದರು ಸಿನಿಮಾ ಮಾಡಲು ಆಗುತ್ತಿಲ್ಲ ಎಂದು ತುಂಬಾ ಬಾರಿ ಯೋಚನೆ ಮಾಡಿದ್ದೇನೆ. ಅವರ ಜೊತೆ ಸಿನಿಮಾ ಮಾಡಲು ನಿರ್ಧರಿಸಿದ ನಂತರವೇ ನನ್ನ ಜೀವನದಲ್ಲಿ ದುರಂತವೊಂದು ನಡೆದಿದೆ ಎಂದು ಘಟನೆಯನ್ನು ನೆನೆದು ಕಣ್ಣೀರು ಹಾಕಿದ್ದಾರೆ.

‘ನಾನು ಇಲ್ಲಿವರೆಗೂ 27 ಸಿನಿಮಾಗಳನ್ನ ಮಾಡಿದ್ದೇನೆ. ಆದರೆ ನಾನು ಮಾಡಿದ ಯಾವ ಸಿನಿಮಾದಲ್ಲೂ ತಂದೆ ಚಿತೆಗೆ ಅಗ್ನಿ ಸ್ಪರ್ಶ ಮಾಡುವ ದೃಶ್ಯ ಇರಲಿಲ್ಲ. ಆದರೆ ಈ ಸಿನಿಮಾದಲ್ಲಿ ಅಂತಹ ದೃಶ್ಯ ಇದೆ. ವಿಪರ್ಯಾಸವೆಂದರೆ ಈ ಸಿನಿಮಾದ ಚಿತ್ರೀಕರಣ ಮುಗಿದ ಬೆನ್ನಲ್ಲೇ ನಮ್ಮ ತಂದೆ ಅಪಘಾತದಲ್ಲಿ ಮೃತಪಟ್ಟಿದ್ದು, ಅವರ ಚಿತೆಗೆ ಅಗ್ನಿ ಸ್ಪರ್ಶ ಮಾಡಿದೆ ಎಂದು ಎನ್‍ಟಿಆರ್ ಅವರು ಕಣ್ಣೀರಿಟ್ಟಿದ್ದಾರೆ.

ಮನುಷ್ಯ ಬದುಕಿದ್ದಾಗ ಅವರ ಬೆಲೆ ನಮಗೆ ಗೊತ್ತಾಗಲ್ಲ. ಆದರೆ ಅವರು ಹೋದ ಮೇಲೆ, ನಮ್ಮ ಮಧ್ಯೆ ಇಲ್ಲವೆಂದರೆ ಅವರ ಬೆಲೆ ಗೊತ್ತಾಗುತ್ತದೆ. ನಾವು ಅಂದುಕೊಳ್ಳೋದು ಬೇರೆ ದೇವರು ಭಯಸೋದು ಬೇರೆ. ನಮ್ಮ ತಂದೆ ಯಾವಾಗಲು ಹೇಳುತ್ತಿದ್ದರು ಅಭಿಮಾನಿಗಳು ಜಾಗೃತ, ಅವರು ನಮಗಾಗಿ ತುಂಬಾ ತ್ಯಾಗ ಮಾಡುತ್ತಾರೆ. ಹೀಗಾಗಿ ಅವರನ್ನು ಜಾಗೃತೆಯಿಂದ ನೋಡಿಕೊಳ್ಳಿ ಎಂದು ಬದುಕಿದ್ದವರೆಗೂ ಹೇಳುತ್ತಲೇ ಇದ್ದರು ಅಂತ ಭಾವುಕರಾಗಿ ತ್ರಿವಿಕ್ರಂ ಅವರನ್ನು ಅಪ್ಪಿಕೊಂಡು ಅತ್ತಿದ್ದಾರೆ.

ನಮ್ಮ ತಂದೆ ಈ ಸಿನಿಮಾ ನೋಡುವುದಕ್ಕಾದರೂ ಬದುಕಿದ್ದರೆ ಚೆನ್ನಾಗಿರುತ್ತಿತ್ತು. ಇಂದು ಅವರು ನಮ್ಮ ಮಧ್ಯೆ ಇಲ್ಲದೆ ಇದ್ದರು, ನಮ್ಮ- ನಿಮ್ಮ ಮನಸ್ಸಿನಲ್ಲಿ ಸದಾ ಇದ್ದಾರೆ. ನಮ್ಮ ತಂದೆ ಕೊಟ್ಟಿದ್ದ ಮಾತನ್ನೆ ನಿಮಗೂ ಕೊಡುತ್ತಿದ್ದೇನೆ. ನಮ್ಮ ಜೀವನವೇ ನಿಮಗೆ ಅಂಕಿತ ಎಂದು ಗಳಗಳನೇ ಅತ್ತು ವೇದಿಕೆಯಿಂದ ಹೋಗಿದ್ದಾರೆ. ಬಳಿಕ ವಾಪಸ್ ಬಂದು ನನ್ನ ತಂದೆಗೆ ನಾನು ಹೇಳುವುದಕ್ಕೆ ಆಗಲಿಲ್ಲ. ನಿಮಗೆ ಹೇಳುತ್ತಿದ್ದೇನೆ, ಜಾಗೃತೆಯಿಂದ ಮನೆಗೆ ಹೋಗಿ. ನಿಮ್ಮ ಕುಟುಂಬದವರು ನಿಮಗಾಗಿ ಕಾಯುತ್ತಿರುತ್ತಾರೆ. ಆದ್ದರಿಂದ ಜಾಗೃತರಾಗಿ ಹೋಗಿ. ಏಕೆಂದರೆ ನೀವು ನಡು ರಸ್ತೆಯಲ್ಲಿ ನಿಂತಾಗ ಮೊದಲು ಬರುವುದು ನಿಮ್ಮ ಕುಟುಂಬ ಆನಂತರ ನಾವು ಎಂದು ಹೇಳಿ ಕಣ್ಣೀರು ಹಾಕುತ್ತಾ ಹೊರಟರು.

ಜ್ಯೂನಿಯರ್ ಎನ್‍ಟಿಆರ್ ಅವರ ತಂದೆ ನಂದಮೂರಿ ಹರಿಕೃಷ್ಣ ಅವರು ಕಳೆದ ಆಗಸ್ಟ್ 29 ರಂದು ರಸ್ತೆ ಅಪಘಾತಕ್ಕೀಡಾಗಿ ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Click to comment

Leave a Reply

Your email address will not be published. Required fields are marked *