ಬೆಂಗಳೂರು: ಬಿಗ್‍ಬಾಸ್ ಮನೆಯಲ್ಲಿ ಕನ್ನಡವನ್ನ ಇಂಗ್ಲಿಷ್ ರೀತಿ ಮಾತಾಡಿ ನಿವೇದಿತಾ ಗೌಡ ಫುಲ್ ಫೇಮಸ್ ಆಗಿದ್ದಾರೆ. ಬೆಂಗಳೂರು ನಗರದಲ್ಲೂ ಕೂಡ ಜೂನಿಯರ್ ನಿವೇದಿತಾ ಗೌಡ ಇದ್ದಾಳೆ. ಈ ಪುಟ್ಟ ಪೋರಿ ತನ್ನ ಸ್ಟೈಲು, ಲುಕ್, ಡೈಲಾಗ್ ನಲ್ಲಿ ರಿಯಲ್ ನಿವೇದಿತಾ ಗೌಡ ಅವರನ್ನ ಫಾಲೋ ಮಾಡ್ತಿದ್ದಾಳೆ.
ಬಿಗ್ ಬಾಸ್ ನಲ್ಲಿದ್ದ ನಿವೇದಿತಾ ಗೌಡ ತನ್ನ ಮಾತು, ಬಬ್ಲಿ ಬಬ್ಲಿ ಆ್ಯಕ್ಟಿಂಗ್ ಗೆ ಸುದ್ದಿಯಾದವರು. ಆದ್ರೆ ಇದೀಗ ಸುದ್ದಿಯಲ್ಲಿರೋದು ಜೂನಿಯರ್ ನಿವೇದಿತಾ ಗೌಡ ಅಲಿಯಾಸ್ ದಿಯಾಂಶು ಗೌಡ. ಈಕೆ ಕನ್ನಡವನ್ನ ಇಂಗ್ಲಿಷ್ ಸ್ಟೈಲಲ್ಲೇ ಮಾತಾಡ್ತಾ, ಸೀನಿಯರ್ ನಿವೇದಿತಾ ಹೇರ್ ಸ್ಟೈಲ್ ರೀತಿ ಮಾಡ್ಕೊಂಡು ಸಾಮಾಜಿಕ ಜಾಲತಾಣದಲ್ಲಿ ಸೆನ್ಸೇಷನ್ ಸೃಷ್ಟಿ ಮಾಡಿದ್ದಾಳೆ.
ಬೆಂಗಳೂರಿನ ಬ್ಯಾಟರಾಯನಪುರ ನಿವಾಸಿಯಾಗಿರೋ ಈ ಪುಟಾಣಿ ಈಗ್ಲೇ ಫೇಮಸ್ ಆಗಿದ್ದಾಳೆ. ಓಂ ಸಾಯಿರಾಂ ಕ್ರಿಯೇಷನ್ ಮೂಲಕ ಯೂಟ್ಯೂಬ್‍ನಲ್ಲಿ ಮಿಂಚ್ತಿದ್ದಾಳೆ. ಓಂ ಸಾಯಿರಾಂ ಕ್ರಿಯೇಷನ್‍ನ ಪ್ರಕಾಶ್ ಚಿರು ಈಕೆ ಸೇಮ್ ನಿವೇದಿತಾ ಗೌಡ ರೀತಿ ಇರೋದನ್ನ ಪತ್ತೆ ಮಾಡಿ ಫೇಮಸ್ ಆಗೋ ಹಾಗೆ ಮಾಡಿದ್ದಾರೆ. ವಿಶ್ವ ಸುಂದರಿ ಆಗ್ಬೇಕು, ವಿಜ್ಞಾನಿ ಆಗಬೇಕು ಅಂತ ಜೂ. ನಿವೇದಿತಾ ಗೌಡ ಹೇಳುತ್ತಾಳೆ.
https://youtu.be/8Zk5qIE2XAc