ನವದೆಹಲಿ: ವಕ್ಫ್ ತಿದ್ದುಪತಿ ಮಸೂದೆ (Waqf bill) ಕುರಿತಾದ ಜಂಟಿ ಸಂಸತ್ ಸಮಿತಿಯ ವರದಿಯನ್ನು ರಾಜ್ಯಸಭೆ (Rajyasabha) ಹಾಗೂ ಲೋಕಸಭೆಯಲ್ಲಿ (LokSabha) ಮಂಡಿಸಲಾಗಿದೆ.
ರಾಜ್ಯಸಭೆಯಲ್ಲಿ ಜಗದಂಬಿಕಾ ಪಾಲ್ ಸಮಿತಿಯ ವರದಿಯನ್ನು ಬಿಜೆಪಿ ಸಂಸದೆ ಮೇಧಾ ಕುಲಕರ್ಣಿ ಮಂಡಿಸಿದರು. ವರದಿ ಮಂಡನೆ ಆಗುತ್ತಿದ್ದಂತೆ ಕಾಂಗ್ರೆಸ್, ಟಿಎಂಸಿ, ಎಸ್‌ಪಿ ಸೇರಿದಂತೆ ವಿಪಕ್ಷಗಳ ಸದಸ್ಯರು ತೀವ್ರ ವಿರೋಧ ವ್ಯಕ್ತಪಡಿಸಿ ಸಭಾತ್ಯಾಗ ಮಾಡಿದರು.
Advertisement
ರಾಜ್ಯಸಭೆಯ ವಿಪಕ್ಷ ನಾಯಕ ಖರ್ಗೆ (Mallikarjun Kharge) ಈ ವರದಿಯನ್ನು ಪ್ರಜಾಪ್ರಭುತ್ವದ ವಿರೋಧಿ, ನಕಲಿ ಎಂದು ಟೀಕಿಸಿದರು. ಸಮಿತಿಯ ಭಾಗವಾಗಿದ್ದ ವಿರೋಧ ಪಕ್ಷದ ಸಂಸದರ ಸಲಹೆಗಳನ್ನು ವರದಿಯಲ್ಲಿ ಸೇರಿಸಿಲ್ಲ. ಹೀಗಾಗಿ ವರದಿಯನ್ನು ಜಂಟಿ ಸಂಸದೀಯ ಸಮಿತಿಗೆ (JPC) ಹಿಂತಿರುಗಿಸಬೇಕು ಎಂದು ಆಗ್ರಹಿಸಿದರು.
Advertisement
ವಕ್ಫ್ ಮಸೂದೆಯ ಜೆಪಿಸಿ ಅಧ್ಯಕ್ಷ ಜಗದಂಬಿಕಾ ಪಾಲ್ (Jagdambika Pal) ಮಾತನಾಡಿ, 6 ತಿಂಗಳ ಕಾಲ ದೇಶಾದ್ಯಂತ ಸಮಾಲೋಚನೆ ನಡೆಸಿ, ಜೆಪಿಸಿ ತನ್ನ ವರದಿ ಮಂಡಿಸಿದೆ ಎಂದು ತಿಳಿಸಿದರು. ಕಾಂಗ್ರೆಸ್ ಸಂಸದ ಇಮ್ರಾನ್ ಮಸೂದ್ ಇದನ್ನು ಅಲ್ಪಸಂಖ್ಯಾತರ ಮೇಲಿನ ದೌರ್ಜನ್ಯ ಎಂದು ಹೇಳಿ ಆಕ್ರೋಶ ವ್ಯಕ್ತಪಡಿಸಿದರು.
Advertisement
#WATCH | Delhi: JPC Chairman and BJP MP Jagadambika Pal tables the report of the JPC on Waqf Amendment Bill in the Lok Sabha pic.twitter.com/qsUwFgiFzb
— ANI (@ANI) February 13, 2025
Advertisement
ಏನೇನು ಬದಲಾವಣೆ?
ಮೊದಲು
1995ರ ವಕ್ಫ್ ಕಾಯ್ದೆಯ ಸೆಕ್ಷನ್ 40 ರ ವಕ್ಫ್ ಮಂಡಳಿಗೆ ಯಾವುದೇ ಆಸ್ತಿಯನ್ನು ಪಡೆಯಲು ಅಧಿಕಾರ ನೀಡುತ್ತದೆ ಮತ್ತು ಆ ಭೂಮಿಯ ಹಕ್ಕುದಾರರು ವಕ್ಫ್ ಟ್ರಿಬ್ಯೂನಲ್‌ನಲ್ಲಿ ಮಾತ್ರ ಮೇಲ್ಮನವಿ ಸಲ್ಲಿಸಬಹುದು.
ಈಗ
ಮಸೂದೆಯು ಹಕ್ಕುದಾರರಿಗೆ ಟ್ರಿಬ್ಯುನಲ್ ಜೊತೆಗೆ ಕಂದಾಯ ನ್ಯಾಯಾಲಯ, ಸಿವಿಲ್ ನ್ಯಾಯಾಲಯ ಅಥವಾ ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಲು ಅವಕಾಶ ನೀಡುತ್ತದೆ.
#WATCH | Samajwadi Party MP Dimple Yadav says, “The way the dissent notes given by opposition members were not included in the Waqf Amendment Bill…The government is bringing this bill in an arbitrary manner. They have brought the bill to on the last day of the session to cause… pic.twitter.com/TjNh3LLpxb
— ANI (@ANI) February 13, 2025
ಮೊದಲು
ವಕ್ಫ್ ಟ್ರಿಬ್ಯುನಲ್ ನಿರ್ಧಾರವು ಅಂತಿಮವೆಂದು ಪರಿಗಣಿಸಲ್ಪಟ್ಟಿದೆ ಮತ್ತು ಅದನ್ನು ಬೇರೆ ಯಾವುದೇ ನ್ಯಾಯಾಲಯದಲ್ಲಿ ಪ್ರಶ್ನಿಸಲು ಸಾಧ್ಯವಿಲ್ಲ.
ಈಗ
ಈ ತಿದ್ದುಪಡಿಯು ವಕ್ಫ್ ನ್ಯಾಯಮಂಡಳಿಯ ತೀರ್ಪಿನ ವಿರುದ್ಧ ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಲು ಅವಕಾಶ ನೀಡುತ್ತದೆ.
ಮೊದಲು
ಯಾವುದೇ ಭೂಮಿಯ ಮೇಲೆ ಮಸೀದಿ ಇದ್ದರೆ ಅಥವಾ ಇಸ್ಲಾಮಿಕ್ ಧಾರ್ಮಿಕ ಉದ್ದೇಶಗಳಿಗಾಗಿ ಬಳಸುತ್ತಿದ್ದರೆ ಅದನ್ನು ಸ್ವಯಂಚಾಲಿತವಾಗಿ ವಕ್ಫ್ ಆಸ್ತಿ ಎಂದು ಪರಿಗಣಿಸಲಾಗುತ್ತದೆ.
ಈಗ
ತಿದ್ದುಪಡಿಯು ಭೂಮಿಯನ್ನು ವಕ್ಫ್‌ಗೆ ದಾನ ಮಾಡದ ಹೊರತು ಅದನ್ನು ವಕ್ಫ್ ಆಸ್ತಿ ಎಂದು ಪರಿಗಣಿಸಲಾಗುವುದಿಲ್ಲ.
Delhi: AIMIM MP Asaduddin Owaisi on JPC report regarding the Waqf (Amendment) Bill says, “…Waqf Bill being introduced is not only unconstitutional but also a grave violation of fundamental rights under Articles 14, 15, and 29. This bill is not meant to protect Waqf but to seize… pic.twitter.com/7HKSTq4x96
— IANS (@ians_india) February 13, 2025
ಮೊದಲು
ಮಹಿಳೆಯರು ಮತ್ತು ಇತರ ಧರ್ಮಗಳ ಜನರು ವಕ್ಫ್ ಮಂಡಳಿಯ ಸದಸ್ಯರಾಗಲು ಅವಕಾಶವಿಲ್ಲ.
ಮೊದಲು
ಹೊಸ ತಿದ್ದುಪಡಿಯು ವಕ್ಫ್ ಮಂಡಳಿಯಲ್ಲಿ ಇಬ್ಬರು ಮಹಿಳೆಯರು ಮತ್ತು ಇತರ ಧರ್ಮಗಳ ಇಬ್ಬರು ಸದಸ್ಯರನ್ನು ಸೇರಿಸಲು ಅವಕಾಶ ನೀಡುತ್ತದೆ.