ನವದೆಹಲಿ: ಜೆಪಿ ನಡ್ಡಾ (JP Nadda) ಅವರು ಮೋದಿ ಸಂಪುಟದಲ್ಲಿ (Modi Cabinet) ಸ್ಥಾನ ಪಡೆದ ಹಿನ್ನೆಲೆಯಲ್ಲಿ ಮುಂದಿನ ಬಿಜೆಪಿ (BJP) ರಾಷ್ಟ್ರೀಯ ಅಧ್ಯಕ್ಷ ಯಾರಾಗುತ್ತಾರೆ ಎಂಬ ಕುತೂಹಲ ಮನೆ ಮಾಡಿದೆ.
ಗುಜರಾತ್‌ನಿಂದ ರಾಜ್ಯಸಭೆಗೆ ಆಯ್ಕೆಯಾಗಿರುವ ಪ್ರಕಾಶ್ ನಡ್ಡಾ ಅವರು ಭಾನುವಾರ ಕೇಂದ್ರ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಹಿಮಾಚಲ ಪ್ರದೇಶದಲ್ಲಿ ಶಾಸಕರಾಗಿದ್ದ ಇವರು ಸಿಎಂ ಪ್ರೇಮ್ ಕುಮಾರ್ ಧುಮಲ್ ಸರ್ಕಾರದಲ್ಲಿ ಅರಣ್ಯ ಮತ್ತು ವಿಜ್ಞಾನ, ತಂತ್ರಜ್ಞಾನ ಖಾತೆಯ ಸಚಿವರಾಗಿದ್ದರು.
Advertisement
ಮೋದಿ ಸರ್ಕಾರ ಬಂದ ನಂತರ 2014-2019ರ ಅವಧಿಯಲ್ಲಿ ನಡ್ಡಾ ಅವರಿಗೆ ಕೇಂದ್ರ ಆರೋಗ್ಯ ಖಾತೆಯನ್ನು ನೀಡಲಾಗಿತ್ತು. ಅಮಿತ್ ಶಾ ಮೋದಿ ಸಂಪುಟದ ಸೇರಿದ ಬಳಿಕ 2020ರಲ್ಲಿ ಅವರನ್ನು ರಾಷ್ಟ್ರೀಯ ಅಧ್ಯಕ್ಷರನ್ನಾಗಿ (National President) ಮಾಡಲಾಗಿತ್ತು. ನಡ್ಡಾ ಅವಧಿ 2022ರಲ್ಲೇ ಅಂತ್ಯವಾಗಿದ್ದರೂ ಲೋಕಸಭಾ ಚುನಾವಣೆ (Lok Sabha Election) ಹಿನ್ನೆಲೆಯಲ್ಲಿ ಅವಧಿಯನ್ನು 2024ರವರೆಗೆ ವಿಸ್ತರಿಸಲಾಗಿತ್ತು. ಇದನ್ನೂ ಓದಿ: ಬರೋಬ್ಬರಿ 25 ವರ್ಷದ ಬಳಿಕ ಜೆಡಿಎಸ್‌ಗೆ ಕೇಂದ್ರದಲ್ಲಿ ಮಂತ್ರಿ ಸ್ಥಾನ!
Advertisement
Advertisement
ಬಿಜೆಪಿ (BJP) ನಿಯಮದ ಪ್ರಕಾರ ಪಕ್ಷದ ಅಧ್ಯಕ್ಷ ಸ್ಥಾನ ಮತ್ತು ಮಂತ್ರಿಗಿರಿ ಎರಡನ್ನು ಒಬ್ಬರೇ ನಿರ್ವಹಿಸುವಂತಿಲ್ಲ. ಹೀಗಾಗಿ ಈಗ ನಡ್ಡಾ ಮರಳಿ ಮೋದಿ ಕ್ಯಾಬಿನೆಟ್ ಸೇರಿದ ಹಿನ್ನೆಲೆಯಲ್ಲಿ ಮುಂದಿನ ಬಿಜೆಪಿ ಅಧ್ಯಕ್ಷ ಯಾರು ಎನ್ನುವ ಕುತೂಹಲ ಹೆಚ್ಚಾಗಿದೆ.
Advertisement
ಅಧ್ಯಕ್ಷ ಸ್ಥಾನಕ್ಕೆ ಮಧ್ಯಪ್ರದೇಶ ಮಾಜಿ ಸಿಎಂ ಶಿವರಾಜ್ ಸಿಂಗ್ ಚೌಹಾಣ್ ಹೆಸರು ಕೇಳಿ ಬಂದಿತ್ತಾದರೂ ಅವರು ಮೋದಿ ಕ್ಯಾಬಿನೆಟ್‌ನಲ್ಲಿದ್ದಾರೆ. ಇದನ್ನೂ ಓದಿ: ಆಂಧ್ರದಲ್ಲಿ NDAಗೆ ಭದ್ರಬುನಾದಿ ಹಾಕಿದ ಪವನ್ ಕಲ್ಯಾಣ್ – ಇವರು ‘ತೂಫಾನ್’ ಎಂದ ಮೋದಿ
ಚುನಾವಣಾ ಪ್ರಚಾರದ ಸಮಯದಲ್ಲಿ ಬಿಜೆಪಿಗೆ ರಾಷ್ಟ್ರೀಯ ಸ್ವಯಂಸೇವಕ ಸಂಘದ (RSS) ಬೆಂಬಲ ಅಗತ್ಯವಿಲ್ಲ ಎಂದು ನಡ್ಡಾ ಹೇಳಿದ್ದು ಪಕ್ಷದ ಒಳಗಡೆಯೇ ಭಾರೀ ಚರ್ಚೆಗೆ ಗ್ರಾಸವಾಗಿತ್ತು. ಬಿಜೆಪಿ ಮುಂದಿನ ಅಧ್ಯಕ್ಷ ಆರ್‌ಎಸ್‌ಎಸ್‌ನಿಂದ ಆಯ್ಕೆ ಆದವರು ಅಥವಾ ಆರ್‌ಎಸ್‌ಎಸ್ ಮತ್ತು ಬಿಜೆಪಿ ಜೊತೆ ಉತ್ತಮ ಸಂಬಂಧ ಹೊಂದಿರುವ ವ್ಯಕ್ತಿ ಆಗಬಹುದು ಎಂದು ಹೇಳಲಾಗುತ್ತಿದೆ.