ನವದೆಹಲಿ: ಮುಂಬರುವ ಲೋಕಸಭೆ ಚುನಾವಣೆಯಲ್ಲಿ (Lok Sabha Election) ಕಾಂಗ್ರೆಸ್ (Congress) ಜನರಿಂದ ಸಂಪೂರ್ಣವಾಗಿ ತಿರಸ್ಕೃತವಾಗುವುದು. ಐತಿಹಾಸಿಕ ಸೋಲಿನ ಭಯದಿಂದ ಅವರ ಉನ್ನತ ನಾಯಕತ್ವ ಬಿಜೆಪಿ ವಿರುದ್ಧ ಆರೋಪ ಮಾಡುತ್ತಿದೆ. ಭಾರತೀಯ ಪ್ರಜಾಪ್ರಭುತ್ವ ಮತ್ತು ಅದರ ಸಂಸ್ಥೆಗಳ ವಿರುದ್ಧ ವಾಗ್ದಾಳಿ ನಡೆಸುತ್ತಿದೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ (JP Nadda) ತಿರುಗೇಟು ನೀಡಿದ್ದಾರೆ.
ಬ್ಯಾಂಕ್ ಖಾತೆ ನಿರ್ಬಂಧಿಸಿರುವ ವಿಚಾರಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್‌ನ ಆರೋಪಗಳಿಗೆ ಎಕ್ಸ್ನಲ್ಲಿ ಪ್ರತಿಕ್ರಿಯಿಸಿರುವ ಅವರು, ಕಾಂಗ್ರೆಸ್ ಆರ್ಥಿಕವಾಗಿ ದಿವಾಳಿಯಾಗಿಲ್ಲ. ವಾಸ್ತವದಲ್ಲಿ ಅವರು ನೈತಿಕ ಮತ್ತು ಬೌದ್ಧಿಕವಾಗಿ ದಿವಾಳಿಯಾಗಿದ್ದಾರೆ. ಕಾಂಗ್ರೆಸ್ ತಮ್ಮ ತಪ್ಪುಗಳನ್ನು ಸರಿಪಡಿಸಿಕೊಳ್ಳುವ ಬದಲು ಅಧಿಕಾರಿಗಳನ್ನು ದೂಷಿಸುತ್ತಿದೆ. ನಿಯಮಗಳನ್ನು ಪಾಲಿಸುವಂತೆ ಕಾಂಗ್ರೆಸ್‌ಗೆ ಕೋರ್ಟ್ ಕೇಳಿದೆ. ಆದರೆ ಬಾಕಿ ತೆರಿಗೆಗಳನ್ನು ಕಾಂಗ್ರೆಸ್ ಪಾವತಿಸಿಲ್ಲ ಎಂದು ಹರಿಹಾಯ್ದರು. ಇದನ್ನೂ ಓದಿ: ನನ್ನ ಸ್ಪರ್ಧೆ ಬಗ್ಗೆ ಹೈಕಮಾಂಡ್‌ಗೆ ಸ್ಪಷ್ಟವಾಗಿ ತಿಳಿಸಿದ್ದೇನೆ: ಹೆಚ್.ಸಿ.ಮಹದೇವಪ್ಪ
Advertisement
Advertisement
ಪ್ರತಿ ರಾಜ್ಯದಲ್ಲಿ ಪ್ರತಿಯೊಂದು ಕ್ಷೇತ್ರದಿಂದ ಪ್ರತಿ ಕ್ಷಣ ಲೂಟಿ ಮಾಡಿದ ಪಕ್ಷ ಆರ್ಥಿಕ ಅಸಹಾಯಕತೆಯ ಬಗ್ಗೆ ಮಾತನಾಡುವುದು ಹಾಸ್ಯಾಸ್ಪದವಾಗಿದೆ. ಬೋಫೋರ್ಸ್ನಿಂದ ಚಾಪರ್ ಹಗರಣದವರೆಗಿನ ಎಲ್ಲಾ ಹಗರಣಗಳಿಂದ ಕೂಡಿದ ಹಣವನ್ನು ಕಾಂಗ್ರೆಸ್ ತಮ್ಮ ಚುನಾವಣಾ ಪ್ರಚಾರಕ್ಕೆ ಬಳಸಬಹುದು. ಪ್ರಜಾಪ್ರಭುತ್ವ ಇಲ್ಲ ಎಂದು ರಾಹುಲ್ ಗಾಂಧಿ ಹೇಳುತ್ತಾರೆ. ಆದರೆ 1975 ಮತ್ತು 1977ರ ನಡುವೆ ಕೆಲವೇ ತಿಂಗಳುಗಳವರೆಗೆ ಭಾರತವು ಪ್ರಜಾಪ್ರಭುತ್ವವಾಗಿರಲಿಲ್ಲ. ಆ ಸಮಯದಲ್ಲಿ ಭಾರತದ ಪ್ರಧಾನಿ ಇಂದಿರಾ ಗಾಂಧಿಯೇ ಹೊರತು ಬೇರೆ ಯಾರೂ ಅಲ್ಲ ಎಂದು ನಾನು ಅವರಿಗೆ ವಿನಮ್ರವಾಗಿ ನೆನಪಿಸುತ್ತೇನೆ ಎಂದು ಕಿಡಿಕಾರಿದರು. ಇದನ್ನೂ ಓದಿ: ಕಾಂಗ್ರೆಸ್ಸಿಗೆ ಬಂದಿರುವ 1,600 ಕೋಟಿ ರೂ. ಏನು? – ಕಾಂಗ್ರೆಸ್‌ಗೆ ಅಮಿತ್ ಶಾ ಪ್ರಶ್ನೆ
Advertisement