ಬೆಂಗಳೂರು: ಹೊಸಪೇಟೆಯ ಬಿಜೆಪಿ ಕಾರ್ಯಕಾರಿಣಿ ಮುಗಿದಿದ್ದು, ಪರಸ್ಪರ ಹೊಗಳಿಕೆಗೆ ಸೀಮಿತವಾಗಿದ್ದು ಕಂಡುಬಂತು. ಸಾಲು ಸಾಲು ವಿವಾದ, ಈಶ್ವರಪ್ಪ ಪ್ರಕರಣ ಸದ್ದು ಮಾಡುತ್ತಿರುವ ಸಂದರ್ಭದಲ್ಲೂ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ, ಬೊಮ್ಮಾಯಿ ಸರ್ಕಾರಕ್ಕೆ ಶಹಬ್ಬಾಶ್‍ಗಿರಿ ನೀಡಿದ್ದಾರೆ.
ರಾಜ್ಯದಲ್ಲಿ ಸ್ವರ್ಣಯುಗ ಆರಂಭವಾಗಿದೆ ಎಂದು ನಡ್ಡಾ ಹೊಗಳಿದ್ದಾರೆ. ಪ್ರಮುಖರೊಂದಿಗೆ ಸಭೆ ನಡೆಸಿದ ನಡ್ಡಾ, ಟಾರ್ಗೆಟ್ 150 ರೀಚ್ ಆಗಲು, ಹಿಂದುತ್ವದ ಜೊತೆ ಅಭಿವೃದ್ಧಿ ಸೂತ್ರ ಅಳವಡಿಸಿಕೊಳ್ಳಲು ಸಲಹೆ ನೀಡಿದ್ದಾರೆ. 2023ರಲ್ಲಿ ಬಿಜೆಪಿ ಮತ್ತೆ ಇಲ್ಲಿ ಅಧಿಕಾರ ಪಡೆಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಕಾಂಗ್ರೆಸ್ ಪಕ್ಷವು ಪ್ರಾದೇಶಿಕ ಪಕ್ಷವಾಗಿದೆ. ಜೆಡಿಎಸ್, ಶಿವಸೇನಾ, ಟಿಡಿಪಿ, ಪಿಡಿಪಿ ಸೇರಿದಂತೆ ಹತ್ತಾರು ಪಕ್ಷಗಳು ಪ್ರಾದೇಶಿಕ ಪಕ್ಷವಾಗಿ ದೇಶದ ವಿವಿಧೆಡೆ ಇವೆ. ಸಬ್ ಕಾ ಸಾಥ್ ಸಬ್ ಕಾ ವಿಶ್ವಾಸ್ ಎಂಬ ನರೇಂದ್ರ ಮೋದಿಯವರ ಕನಸು ನನಸಾಗಿಸಲು ಕರ್ನಾಟಕದಲ್ಲಿ ಬಿಜೆಪಿಯನ್ನು ಗೆಲ್ಲಿಸಬೇಕಿದೆ. ಕೋವಿಡ್ ವೇಳೆ ಪ್ರಧಾನಿ ಗರೀಬ್ ಕಲ್ಯಾಣ್ ಯೋಜನೆ ಮೂಲಕ 80 ಕೋಟಿಗೂ ಹೆಚ್ಚು ಜನರಿಗೆ ಪಡಿತರ ಕೊಡಲಾಗಿದೆ. ಹಸಿವಿನಿಂದ ಯಾರೂ ಸಾಯಬಾರದೆಂಬ ಉದ್ದೇಶ ಇದರಲ್ಲಿದೆ. ಬೊಮ್ಮಾಯಿಯವರು ಮಾಸಾಶನವನ್ನು ಹೆಚ್ಚಿಸಿದ್ದಾರೆ. ಇಲ್ಲಿನ ಸಂಬಾರ ಪದಾರ್ಥಗಳು ಮತ್ತು ಕಾಫಿ ರಫ್ತು ಹೆಚ್ಚಾಗಿದೆ. ಯಡಿಯೂರಪ್ಪ ಮತ್ತು ಬೊಮ್ಮಾಯಿ ಅವರ ಸರ್ಕಾರಗಳ ಸಾಧನೆಯನ್ನು ಜನರಿಗೆ ತಲುಪಿಸಿ ಎಂದರು. ಇತ್ತ ಕಾಂಗ್ರೆಸ್ ಮುಕ್ತ ಕರ್ನಾಟಕಕ್ಕೆ ನಳಿನ್ ಕುಮಾರ್ ಕಟೀಲ್ ಕರೆ ನೀಡಿದ್ದಾರೆ. ಇದನ್ನೂ ಓದಿ: ಕಾನೂನಿಗಿಂತ ಧರ್ಮ ದೊಡ್ಡದಲ್ಲ ಎಂಬುದನ್ನು ಮುಸ್ಲಿಮರು ಅರಿಯಬೇಕು: ರಾಜ್ ಠಾಕ್ರೆ
ಬಿಜೆಪಿ ಸರ್ಕಾರವನ್ನು ಮೆಚ್ಚುತ್ತಿಲ್ಲ ಎಂದು ಕಾಂಗ್ರೆಸ್ ವಿರುದ್ಧ ಖಂಡನಾ ನಿರ್ಣಯವಾಗಿದ್ದು, ಮೋದಿ ಸರ್ಕಾರ ಜಗತ್ತಿನ ಗಮನ ಸೆಳೆದಿದೆ ಎಂದು ಅಭಿನಂದನಾ ನಿರ್ಣಯವನ್ನು ಕಾರ್ಯಕಾರಣಿ ಕೈಗೊಂಡಿದೆ. ಇಂದಿನ ಕೋರ್ ಕಮಿಟಿ ಸಭೆ ಕಡೆ ಕ್ಷಣದಲ್ಲಿ ರದ್ದಾಗಿದೆ. ಇದನ್ನೂ ಓದಿ: PSI ನೇಮಕಾತಿ ಅಕ್ರಮ – ಬಿಜೆಪಿ ಮುಖಂಡೆ ದಿವ್ಯಾ ಹಾಗರಗಿ ಮನೆಗೆ ಸಿಐಡಿ ದಾಳಿ