ಹಾವೇರಿ: ಅಪಘಾತದಲ್ಲಿ ಮೃತಪಟ್ಟ ಖಾಸಗಿ ವಾಹಿನಿಯ ವರದಿಗಾರನ ಮೃತದೇಹವನ್ನು ಕಸ ತುಂಬುವ ವಾಹನದಲ್ಲಿ ರವಾನಿಸಿ ಎಡವಟ್ಟು ಮಾಡಿಕೊಂಡ ಘಟನೆ ನಡೆದಿದೆ.
ಮೌನೇಶ ಪೋತರಾಜ್(28) ಎಂಬವರು ಶನಿವಾರ ರಾತ್ರಿ ಹಾನಗಲ್ ನ ಗಂಡೂರು ಬಳಿ ನಡೆದ ಭೀಕರ ಅಪಘಾತದಲ್ಲಿ ದಾರುಣವಾಗಿ ಮೃತಪಟ್ಟಿದ್ದರು.
Advertisement
ರಾಜ್ಯ ಮಟ್ಟದ ಸಮಾರಂಭವೊಂದರ ವರದಿಯನ್ನು ನೀಡಿ ಹಾವೇರಿ ಛಬ್ಬಿಯಲ್ಲಿರೂ ತನ್ನ ಮನೆಗೆ ಬೈಕ್ ನಲ್ಲಿ ತೆರಳುತ್ತಿದ್ದ ಸಂದರ್ಭದಲ್ಲಿ ಮರಕ್ಕೆ ಡಿಕ್ಕಿಯಾಗಿ ಈ ಅವಘಡ ಸಂಭವಿಸಿತ್ತು. ಘಟನೆಯ ಸಂಬಂಧ ಹಾನಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Advertisement
Advertisement
ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ: ಸದ್ಯ ಮೃತ ಪೋತರಾಜ್ ಅವರ ಮೃತದೇಹವನ್ನು ಹಾನಗಲ್ ಪುರಸಭೆಯ ಕಸ ತುಂಬುವ ಟ್ರ್ಯಾಕ್ಟರ್ ನಲ್ಲಿ ತಾಲೂಕು ಆಸ್ಪತ್ರೆಯ ಶವಗಾರಕ್ಕೆ ಸಾಗಿಸಿದ ಪೊಲೀಸರ ಕ್ರಮಕ್ಕೆ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ.
Advertisement
ಹಿರಿಯ ಪತ್ರಕರ್ತ ಕಾರ್ ಅಪಘಾತಕ್ಕೆ ಬಲಿ: ಇನ್ನು ನಿನ್ನೆ ಬೆಳಗಾವಿಯ ನಂದಗಡ ಬಳಿ ಕಾರ್ ಮರಕ್ಕೆ ಗುದ್ದಿದ ಪರಿಣಾಮ ಹಿರಿಯ ಪತ್ರಕರ್ತ ಡಾ. ವೀರೇಶ್ ಹಿರೇಮಠ್ ದಾರುಣವಾಗಿ ಮೃತಪಟ್ಟಿದ್ದರು. ಬಾಗಲಕೋಟಿ ಬಿವಿವಿ ಕಾಲೇಜಿನಲ್ಲಿ ಪತ್ರಿಕೋದ್ಯಮ ಅಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದ ವೀರೇಶ್ ಅವರು ತಮ್ಮ ಕುಟುಂಬದೊಂದಿಗೆ ಗೋವಾ ಪ್ರವಾಸ ಮುಗಿಸಿ ಬಾಗಲಕೋಟೆಗೆ ಹಿಂದಿರುಗುತ್ತಿದ್ದರು. ಈ ವೇಳೆ ನಂದಗಡ ಬಳಿ ನಿದ್ದೆ ಮಂಪರಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಕಾರ್ ಮರಕ್ಕೆ ಗುದ್ದಿದೆ. ಘಟನೆಯಲ್ಲಿ ಪತ್ನಿ ಗೌರಿ, ಕಾರು ಚಾಲಕ ಸುನೀಲ್‍ಗೆ ಗಂಭೀರ ಗಾಯಗಳಾಗಿದ್ದು, ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಘಟನೆ ಸಂಬಂಧ ನಂದಗಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.