ನವದೆಹಲಿ: ಪ್ರತಿಷ್ಟಿತ ಒಳ ಉಡುಪುಗಳ ಮಳಿಗೆಯ ಟ್ರಯಲ್ ರೂಂನಲ್ಲಿ ಹಿಡನ್ ಕ್ಯಾಮೆರಾ ಇರುವುದನ್ನು ಪತ್ರಕರ್ತೆಯೊಬ್ಬರು ಪತ್ತೆ ಹಚ್ಚಿದ್ದಾರೆ.
ದಕ್ಷಿಣ ದೆಹಲಿಯ ಗ್ರೇಟರ್ ಕೈಲಾಶ್-2 ಪೋಶ್ ಎಂ-ಬ್ಲಾಕ್ ಮಾರುಕಟ್ಟೆಯ ಅಂಗಡಿಯೊಂದರಲ್ಲಿ ಹಿಡನ್ ಕ್ಯಾಮೆರಾ ಇರುವುದು ಪತ್ತೆಯಾಗಿದ್ದು, ಈ ಕ್ಯಾಮೆರಾ ಮೂಲಕ ಅಂಗಡಿಯವನು ಟ್ರಯಲ್ ರೂಂನ ಲೈವ್ ಫೂಟೇಜ್ ವೀಕ್ಷಿಸುತ್ತಿದ್ದ ಎಂದು ಪತ್ರಕರ್ತೆ ಆರೋಪಿಸಿದ್ದಾರೆ. ಈ ಕುರಿತು ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
Advertisement
ಈ ಘಟನೆ ಆಗಸ್ಟ್ 31ರಂದು ನಡೆದಿದ್ದು, ಮೂರು ದಿನಗಳ ನಂತರ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 354 ಸಿ ಅಡಿ ಪ್ರಕರಣವನ್ನು ದಾಖಲಿಸಲಾಗಿದೆ. ಈವರೆಗೆ ಆರೋಪಿ ಅಂಗಡಿಯವರ ವಿರುದ್ಧ ಯಾವುದೇ ರೀತಿಯ ಕ್ರಮ ಕೈಗೊಂಡಿಲ್ಲ.
Advertisement
Advertisement
ಕೆಲವು ಉಡುಪುಗಳನ್ನು ಆಯ್ಕೆ ಮಾಡಿಕೊಂಡ ನಂತರ ಟ್ರಯಲ್ ರೂಂಗೆ ತೆರಳಿದೆ. ಆಗ 10 ನಿಮಿಷಗಳ ನಂತರ ಅಂಗಡಿಯ ಒಬ್ಬ ಮಹಿಳಾ ಅಟೆಂಡರ್ ಬಂದು ನನ್ನನ್ನು ಬೇರೆ ರೂಂಗೆ ತೆರಳುವಂತೆ ಸೂಚಿಸಿದರಳು. ಅನುಮಾನದಿಂದ ಇಲ್ಲಿ ಏನಾದರೂ ಇದೆಯೇ ಎಂದು ನಾನು ಗಮನಿಸಿದೆ. ಆಗ ಮೊದಲನೇ ರೂಂನಲ್ಲಿ ಕ್ಯಾಮೆರಾ ಇರುವ ಕುರಿತು ಸಿಬ್ಬಂದಿ ನನ್ನ ಗಮನಕ್ಕೆ ತಂದರು ಎಂದು ತನ್ನ ದೂರಿನಲ್ಲಿ ಪತ್ರಕರ್ತೆ ತಿಳಿಸಿದ್ದಾರೆ.
Advertisement
ಆ ಟ್ರಯಲ್ ರೂಂನಲ್ಲಿ ಕ್ಯಾಮೆರಾ ಇದೆ ಎಂದಾದರೆ ಅದೇ ರೂಂಗೆ ತೆರಳುವಂತೆ ನನಗೆ ಯಾಕೆ ನಿರ್ದೇಶಿಸಿದಿರಿ ಎಂದು ಅಂಗಡಿಯ ಮಾಲೀಕ ಹಾಗೂ ಸಿಬ್ಬಂದಿಯನ್ನು ಕೇಳಿದೆ. ಆದರೆ ಯಾರೂ ಉತ್ತರಿಸಲಿಲ್ಲ. ನಂತರ ನಾನು ಪೊಲೀಸರಿಗೆ ಕರೆ ಮಾಡಿ ಘಟನೆ ಕುರಿತು ವಿವರಿಸಿದೆ. ಪೊಲೀಸರಿಗೆ ಕರೆ ಮಾಡುತ್ತಿದ್ದಂತೆ ಅಂಗಡಿ ಮಾಲೀಕ ತನ್ನ ಮಗನಿಗೆ ಕರೆ ಮಾಡಿ ವಿಡಿಯೋ ಡಿಲೀಟ್ ಮಾಡಿಸಿದ್ದಾರೆ ಎಂದು ಪತ್ರಕರ್ತೆ ದೂರಿನಲ್ಲಿ ವಿವರಿಸಿದ್ದಾರೆ.
ಪೊಲೀಸ್ ಮೂಲಗಳ ಪ್ರಕಾರ, ಮಹಿಳಾ ಸಿಬ್ಬಂದಿ ಬೇರೆ ಸ್ಟೋರ್ ರೂಂನಲ್ಲಿ ಬಟ್ಟೆ ಹಾಕಿ ನೋಡುವಂತೆ ಕಳುಹಿಸಿದ್ದಾರೆ. ಹೀಗಾಗಿ ಇದು ಮೇಲ್ನೋಟಕ್ಕೆ ಉದ್ದೇಶಪೂರ್ವಕವಾಗಿ ಮಾಡಿದ ತಪ್ಪು ಎಂದು ಪೊಲೀಸರು ಶಂಕಿಸಿದ್ದಾರೆ.
ನಾವು ಅಂಗಡಿಯ ಸಿಸಿಟಿವಿ ಫೂಟೇಜ್‍ಗಳನ್ನು ಸಂಗ್ರಹಿಸಿ, ಮಹಿಳೆಯ ಆರೋಪದ ಕುರಿತು ಪರಿಶೀಲಿಸುತ್ತಿದ್ದೇವೆ. ತನಿಖೆ ಪ್ರಗತಿಯಲ್ಲಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.