Bengaluru CityCinemaDistrictsKarnatakaLatestMain PostSandalwood

ಕಾರು ಆಕ್ಸಿಡೆಂಟ್ ಮೂಲಕ ಅನಿರುದ್ಧಗೆ ಗುಡ್ ಬೈ ಹೇಳಿದ ಜೊತೆ ಜೊತೆಯಲಿ ಟೀಮ್

ಜೊತೆ ಜೊತೆಯಲಿ ಧಾರಾವಾಹಿಯಲ್ಲಿ ತಮಗೆ ಮತ್ತೆ ಅವಕಾಶ ಸಿಗಬಹುದು ಎಂದು ಕಾಯುತ್ತಿದ್ದ ನಟ ಅನಿರುದ್ದ ಅವರಿಗೆ ಕೊನೆಗೂ ನಿರಾಸೆ ಮೂಡಿಸಿದ್ದಾರೆ ನಿರ್ಮಾಪಕರು. ಅನಿರುದ್ದ ನಿರ್ವಹಿಸುತ್ತಿದ್ದ ಆರ್ಯವರ್ಧನ್ ಪಾತ್ರಕ್ಕೆ ಅಪಘಾತ ಮಾಡಿಸಿ, ಆಸ್ಪತ್ರೆಗೆ ಸೇರಿಸಿದ್ದಾರೆ. ಆಸ್ಪತ್ರೆಗೆ ಸೇರಿರುವ ಆರ್ಯವರ್ಧನ್ ಬದುಕಿ ಬರಬಹುದು, ಮತ್ತೆ ಅನಿರುದ್ದ ಅವರೇ ಈ ಪಾತ್ರವನ್ನು ಮಾಡಬಹುದು ಎಂದುಕೊಂಡಿದ್ದ ಅಭಿಮಾನಿಗಳಿಗೂ ಮೆಗಾ ಟ್ವಿಸ್ಟ್ ಕೊಟ್ಟಿದ್ದಾರೆ.

ಈಗಾಗಲೇ ನಟ ಹರೀಶ್ ರಾಜ್ ಧಾರಾವಾಹಿಗೆ ಎಂಟ್ರಿಕೊಟ್ಟು ಆಗಿದೆ. ಇವರೇ ಆರ್ಯವರ್ಧನ್ ಪಾತ್ರ ಮಾಡಲಿದ್ದಾರೆ ಎಂದು ಹೇಳಲಾಗಿತ್ತು. ಅಲ್ಲಿಗೆ ಅನಿರುದ್ದ ಅವರಿಗೆ ಗೇಟ್ ಪಾಸ್ ನಿಕ್ಕಿ ಎಂದೇ ಭಾವಿಸಲಾಗಿತ್ತು. ಆದರೆ, ಆರ್ಯವರ್ಧನ್ ಅವರ ಸಹೋದರನ ಪಾತ್ರವನ್ನು ಹರೀಶ್ ರಾಜ್ ಮಾಡಿದ್ದರಿಂದ ಅನಿರುದ್ದ ಅವರಿಗೆ ಮತ್ತೆ ಅವಕಾಶ ಸಿಗುತ್ತದೆ ಅನ್ನುವ ನಿರೀಕ್ಷೆ ಅವರ ಅಭಿಮಾನಿಗಳಿಗೆ ಇತ್ತು. ಅದಕ್ಕೂ ತಣ್ಣೀರು ಎರೆಚಿದೆ ಧಾರಾವಾಹಿ ತಂಡ. ಇದನ್ನೂ ಓದಿ: ಏನ್ ಐಡ್ಯಾ ಗುರೂ: ಆರ್ಯವರ್ಧನ್ ಪಾತ್ರಕ್ಕೆ ಹರೀಶ್ ರಾಜ್ ಫಿಕ್ಸ್: ಫೇಸ್ ಟ್ರಾನ್ಸ್ ಪ್ಲಾಂಟ್ ಬಳಸಿ ಅನಿರುದ್ಧಗೆ ಗೇಟ್ ಪಾಸ್

ಎರಡು ದಿನದಿಂದ ಪ್ರಸಾರವಾಗುತ್ತಿರುವ ಕಥೆಯಲ್ಲಿ ಅನಿರುದ್ದ ಮತ್ತು ಹರೀಶ್ ರಾಜ್ ನಿರ್ವಹಿಸುತ್ತಿರುವ ಪಾತ್ರಗಳು ಆಸ್ಪತ್ರೆ ಸೇರಿವೆ. ಅನಿರುದ್ದ ಪಾತ್ರಕ್ಕೆ ಆಕ್ಸಿಡೆಂಟ್ ಆಗಿದ್ದರೆ, ಹರೀಶ್ ರಾಜ್ ಮಾಡುತ್ತಿರುವ ಪಾತ್ರ ಆತ್ಮಹತ್ಯೆ ಮಾಡಿಕೊಂಡಿದೆ. ಅಲ್ಲದೇ ಹರೀಶ್ ರಾಜ್ ಮಾಡುತ್ತಿರುವ ಪಾತ್ರವನ್ನು ಜೀವಂತವಾಗಿ ಉಳಿಸಿಲ್ಲ. ಕಡೆ ಆರ್ಯವರ್ಧನ್ ಮುಖಕ್ಕೆ ತೀವ್ರ ಪೆಟ್ಟಾಗಿದ್ದರಿಂದ ಪ್ಲಾಸ್ಟಿಕ್ ಸರ್ಜರಿ ಮಾಡಬೇಕು ಎಂದು ವೈದ್ಯರು ತಿಳಿಸಿದ್ದಾರೆ. ಈಗ ಪ್ಲಾಸ್ಟಿಕ್ ಸರ್ಜರಿ ಬದಲು ಫೇಸ್ ಟ್ರಾನ್ಸ್ ಪ್ಲೆಂಟ್ ಮಾಡುವ ಕಥೆ ಶುರುವಾಗಿದೆ. ಇದನ್ನೂ ಓದಿ: ‘ಲೈಫ್ ಇಸ್ ಬ್ಯುಟಿಫುಲ್’ ಹನಿಮೂನ್ ಮೂಡ್ ನಲ್ಲಿ ಮಹಾಲಕ್ಷ್ಮಿ ಮತ್ತು ರವೀಂದರ್

ಅಂದರೆ ಹರೀಶ್ ರಾಜ್ ಪಾತ್ರದ ಮುಖವನ್ನು ಅನಿರುದ್ದ ನಿರ್ವಹಿಸುವ ಪಾತ್ರಕ್ಕೆ ವರ್ಗಾಯಿಸಲಾಗುತ್ತಿದೆ. ಅಲ್ಲಿಗೆ ಅನಿರುದ್ದ ಇನ್ಮುಂದೆ ಧಾರಾವಾಹಿಯಲ್ಲಿ ಅಧಿಕೃತವಾಗಿ ಇರುವುದಿಲ್ಲ. ಈ ವಿಷಯ ತಿಳಿಯುತ್ತಿದ್ದಂತೆಯೇ ಅನಿರುದ್ದ ಅಭಿಮಾನಿಗಳು ಬೇಸರ ಮಾಡಿಕೊಂಡಿದ್ದಾರೆ. ಆ ಧಾರಾವಾಹಿ ಬಿಟ್ಟಾಕಿ, ನೀವೇ ಹೊಸ ಸೀರಿಯಲ್ ಶುರು ಮಾಡಿ ಎಂದಿದ್ದಾರೆ. ಈ ಪ್ರೀತಿಗೆ ಸ್ವತಃ ಅನಿರುದ್ದ ಕೂಡ ಧನ್ಯವಾದಗಳನ್ನು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

Back to top button