ಕಿರುತೆರೆ ಜನಪ್ರಿಯ ‘ಜೊತೆ ಜೊತೆಯಲಿ’ (Jothe Jotheyali) ಸೀರಿಯಲ್ ಮೂಲಕ ಮನೆ ಮಾತಾದ ನಟಿ ಶಿಲ್ಪಾ ಅಯ್ಯರ್ (Shilpa Iyer) ಅವರು ವೈವಾಹಿಕ ಜೀವನಕ್ಕೆ (Wedding) ಕಾಲಿಟ್ಟು 6 ತಿಂಗಳುಗಳಾಗಿದೆ. ಇದೇ ಖುಷಿಯಲ್ಲಿ ಶಿಲ್ಪಾ ಅಯ್ಯರ್ ತನ್ನ ರಕ್ತದಿಂದ ಚಿತ್ರ ಬಿಡಿಸಿ ಪತಿಗೆ ಪ್ರೇಸೆಂಟ್ ಮಾಡಿದ್ದಾರೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.
ನಿರೂಪಕಿ ಕಮ್ ನಟಿ ಶಿಲ್ಪಾ ಅವರು ಉದ್ಯಮಿ ಸಚಿನ್ (Sachin) ಎಂಬುವವರನ್ನು ಮೇ 13ರಂದು ಬೆಂಗಳೂರಿನಲ್ಲಿ ಸರಳವಾಗಿ ಮದುವೆಯಾದರು. ಅವರ ದಾಂಪಕ್ಕೆ (Wedding) ಈಗ 6 ತಿಂಗಳು ಪೂರೈಸಿದೆ. ಇದನ್ನೂ ಓದಿ:ಭಾವಿ ಪತಿ, ಮದುವೆ ಬಗ್ಗೆ ಸೀಕ್ರೆಟ್ ಬಿಚ್ಚಿಟ್ಟ ‘ಬೇಬಿ’ ನಟಿ
ಸಂಜೀವ್ ಸಂಗಮ್ ಎಂಬ ಕಲಾವಿದನ ಕೈ ಚಳಕದಲ್ಲಿ ಈ ರಕ್ತದ ಪೈಟಿಂಗ್ ಮೂಡಿ ಬಂದಿದೆ. ತಮ್ಮ ರಕ್ತ ನೀಡಿ, ಪತಿ ಚಿತ್ರವನ್ನು ಚಿತ್ರಿಸಿದ್ದಾರೆ. ಬಳಿಕ ಅದನ್ನ ಚೆಂದವಾಗಿ ಫ್ರೇಮ್ ಹಾಕಿ ಕೊಟ್ಟಿದ್ದಾರೆ. ಕೆಲವರು ನಟಿಯ ನಡೆಗೆ ಮೆಚ್ಚುಗೆ ಸೂಚಿಸಿದ್ರೆ, ಇನ್ನೂ ಕೆಲವರು ಅತಿರೇಕ ಎಂದು ಕಾಮೆಂಟ್ ಮಾಡಿದ್ದಾರೆ.
ಬ್ರಹ್ಮಗಂಟು, ಕಸ್ತೂರಿ ನಿವಾಸ, ಜೊತೆ ಜೊತೆಯಲಿ, ಒಲವಿನ ನಿಲ್ದಾಣ ಸೀರಿಯಲ್‌ಗಳಲ್ಲಿ ಶಿಲ್ಪಾ ಅಯ್ಯರ್ ನಟಿಸಿದ್ದಾರೆ. ನಟನೆಗೆ ಸ್ಕೋಪ್ ಇರುವ ರೋಲ್‌ನಲ್ಲಿ ಜೀವತುಂಬಿದ್ದಾರೆ. ಆದರೆ ಅವರಿಗೆ ಜನಪ್ರಿಯತೆ ತಂದು ಕೊಟ್ಟ ಸೀರಿಯಲ್ ಅಂದರೆ ‘ಜೊತೆ ಜೊತೆಯಲಿ’ ಮಾನ್ಸಿ ಪಾತ್ರವಾಗಿತ್ತು.
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]