ಚಿತ್ರರಂಗದಲ್ಲಿ ಗಟ್ಟಿಮೇಳದ ಸೌಂಡ್ ಜೋರಾಗಿದೆ. ನಟ-ನಟಿಯರು ಸಾಲು ಸಾಲಾಗಿ ಹಸೆಮಣೆ ಏರುತ್ತಿದ್ದಾರೆ. ಇದೀಗ `ಜೊತೆ ಜೊತೆಯಲಿ’ (Jothe Jotheyali) ಖ್ಯಾತಿಯ ಶಿಲ್ಪಾ ಅಯ್ಯರ್ (Shilpa Iyer) ಹೊಸ ಬಾಳಿಗೆ ಕಾಲಿಟ್ಟಿದ್ದಾರೆ. ಇದನ್ನೂ ಓದಿ: ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾದ `ಜೊತೆ ಜೊತೆಯಲಿ’ ಶಿಲ್ಪಾ ಅಯ್ಯರ್
Advertisement
ನಾಗಮಂಡಲ, ಕಸ್ತೂರಿ ನಿವಾಸ, ಜೊತೆ ಜೊತೆಯಲಿ, ಒಲವಿನ ನಿಲ್ದಾಣ (Olavina Nildana) ಸೇರಿದಂತೆ ಸಾಕಷ್ಟು ಸೀರಿಯಲ್‌ನಲ್ಲಿ ಬಣ್ಣ ಹಚ್ಚಿರುವ ನಟಿ ಶಿಲ್ಪಾ ಅವರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಪ್ರೇಮಿಗಳ ದಿನಾಚರಣೆಯಂದು ಎಂಗೇಜ್ (Engage) ಆಗಿರುವ ಸುದ್ದಿಯನ್ನು ನಟಿ ಸೋಷಿಯಲ್ ಮೀಡಿಯಾ ಮುಖಾಂತರ ತಿಳಿಸಿದ್ದರು. ಭಾವಿ ಪತಿ ಜೊತೆಗಿನ ಫೋಟೋ ಶೇರ್ ಮಾಡಿ ಅಚ್ಚರಿ ಮೂಡಿಸಿದ್ದರು. ಈಗ ಸೈಲೆಂಟ್ ಆಗಿ ಮದುವೆಯಾಗಿದ್ದಾರೆ.
Advertisement
Advertisement
ಸಚಿನ್ ವಿಶ್ವನಾಥ್ (Sachin Vishwanath) ಅವರು ಲಾಯರ್ (Lawyer) ಆಗಿದ್ದು, ಮನೆಯವರೇ ನೋಡಿ ನಿಶ್ಚಯಿಸಿರುವ ಮದುವೆಯಾಗಿದೆ. ಕುಟುಂಬಸ್ಥರು ಮತ್ತು ಆಪ್ತರ ಸಮ್ಮುಖದಲ್ಲಿ ಈ ಜೋಡಿ ಹಸೆಮಣೆ (Wedding) ಏರಿದ್ದಾರೆ.
Advertisement
ಶಿಲ್ಪಾ ಅಯ್ಯರ್- ಸಚಿನ್ ಮದುವೆಗೆ `ಜೊತೆ ಜೊತೆಯಲಿ’ ಟೀಂ ಮತ್ತು ಹಲವು ನಟ-ನಟಿಯರು ಭಾಗಿಯಾಗಿದ್ದರು. ನವಜೋಡಿಗೆ ಕಲಾವಿದರು, ಅಭಿಮಾನಿಗಳು ಶುಭಹಾರೈಸಿದ್ದಾರೆ.