ಕಿರುತೆರೆಯ ಜನಪ್ರಿಯ ‘ಜೊತೆ ಜೊತೆಯಲಿ’ (Jothe Jotheyali) ಸೀರಿಯಲ್ ನಟಿ ಮಾನಸ ಮನೋಹರ್ (Mansa Manohar) ಅವರು ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ. ಎರಡನೇ ಮದುವೆಗೆ ನಟಿ ಸಜ್ಜಾಗಿದ್ದಾರೆ. ನಿಶ್ಚಿತಾರ್ಥ (Engagement) ಖುಷಿಯಲ್ಲಿರುವ ಮಾನಸ ಅವರು ಎಂಗೇಜ್ ಆಗಿರುವ ಸುಂದರ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ. ಇದನ್ನೂ ಓದಿ:Bigg Boss ಸ್ಪರ್ಧಿಗೆ ಹೃದಯಾಘಾತ- ಆಸ್ಪತ್ರೆಗೆ ದಾಖಲು
ಪ್ರಸ್ತುತ ‘ಲಕ್ಷ್ಮಿ ನಿವಾಸ’ (Lakshmi Nivasa) ಸೀರಿಯಲ್‌ನಲ್ಲಿ ನಟಿಸುತ್ತಿರುವ ಮಾನಸ ಅವರು ಪ್ರೀತಮ್ ಚಂದ್ರ (Preetham Chandra) ಎಂಬುವವರ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಭಾವಿ ಪತಿ ಜೊತೆಗಿನ ಕೆಲ ಫೋಟೋಗಳನ್ನು ಹಂಚಿಕೊಂಡಿರುವ ಮಾನಸಗೆ ಇದು 2ನೇ ಮದುವೆನಾ? ಎಂಬ ಪ್ರಶ್ನೆಗಳು ಅಭಿಮಾನಿಗಳಿಂದ ಎದುರಾಗಿದೆ. ಕಾಮೆಂಟ್ ಬಾಕ್ಸ್‌ನಲ್ಲಿ ಪ್ರಶ್ನೆಗಳ ಸುರಿಮಳೆಯನ್ನೇ ಹರಿಸಿದ್ದಾರೆ. ಅದಕ್ಕೆ ನಟಿ ಕೂಡ ಹೌದು, ಇದು ನನಗೆ 2ನೇ ಮದುವೆ (Second Wedding) ಎಂದು ಪಾಸಿಟಿವ್ ಆಗಿ ರಿಯಾಕ್ಟ್ ಮಾಡಿದ್ದಾರೆ.
ಎಲ್ಲರ ಸಂದೇಹಗಳಿಗೆ ಉತ್ತರ ಇದೆ. ಇದು ನನ್ನ ಎರಡನೇ ಮದುವೆ. ಕೆಲವು ಬಾರಿ ದೈಹಿಕವಾಗಿ ಮದುವೆಯಾಗುತ್ತೇವೆ ಆದರೆ ಯಾವುದೇ ಭಾವನಾತ್ಮಕ ಸಂಬಂಧವನ್ನು ಹೊಂದಿರುವುದಿಲ್ಲ. ನಾವು ಎಲ್ಲರ ಒಳಿತಿಗಾಗಿ ಮುಂದುವರಿಯಬೇಕು. ನಾವು ಮದುವೆಯಾಗುತ್ತಿದ್ದೇವೆ. ನನಗೆ ಯಾವುದೇ ಅಪರಾಧ ಎನಿಸುತ್ತಿಲ್ಲ. ಆದರೆ ಕೃತಜ್ಞತೆ ಮಾತ್ರ ಇದೆ. ಆದ್ದರಿಂದ ಅದನ್ನು ವ್ಯಕ್ತಪಡಿಸುತ್ತಿದ್ದೇನೆ ಎಂದು ನೆಟ್ಟಿಗರೊಬ್ಬರ ಕಾಮೆಂಟ್‌ಗೆ ನಟಿ ಸ್ಪಷ್ಟನೆ ಕೊಟ್ಟಿದ್ದಾರೆ.
View this post on Instagram
ಇನ್ನೂ ಮಾನಸ ಭಾವಿ ಪತಿ ಪ್ರೀತಮ್ ಚಂದ್ರ ಅವರು ಫುಟ್ ಬಾಲ್ ಪ್ಲೇಯರ್ ಆಗಿದ್ದಾರೆ. ಅವರು ಫುಟ್ ಬಾಲ್ ಅಕಾಡೆಮಿ ಕೂಡ ನಡೆಸುತ್ತಿದ್ದಾರೆ. ಸದ್ಯದಲ್ಲೇ ಮಾನಸ ಮತ್ತು ಪ್ರೀತಮ್ ಮದುವೆ ಜರುಗಲಿದೆ. ಅಂದಹಾಗೆ, ಮಾನಸ ಅವರು ‘ಲಕ್ಷ್ಮಿ ನಿವಾಸ’ ಸೀರಿಯಲ್‌ನಲ್ಲಿ ಹೀರೋ ಸಿದ್ದೇಗೌಡರ ಅತ್ತಿಗೆ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಜೊತೆಗೆ ‘ಶಾಂಭವಿ’ ಎಂಬ ಸೀರಿಯಲ್‌ನಲ್ಲಿ ‘ಬಿಗ್ ಬಾಸ್ ಕನ್ನಡ 11’ರಲ್ಲಿ (Bigg Boss Kannada 11) ಸ್ಪರ್ಧಿಯಾಗಿರುವ ಐಶ್ವರ್ಯಾ (Aishwarya) ನಟಿಸುತ್ತಿದ್ದ ಪಾತ್ರಕ್ಕೆ ಮಾನಸ ಎಂಟ್ರಿ ಕೊಟ್ಟಿದ್ದಾರೆ. ಐಶ್ವರ್ಯಾ ಕೈಬಿಟ್ಟ ಪಾತ್ರಕ್ಕೆ ಮಾನಸ ಜೀವ ತುಂಬುತ್ತಿದ್ದಾರೆ.